ಜೆಡಿಎಸ್ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 27: ಚಿತ್ರದುರ್ಗ ನಗರದ ಜಿಲ್ಲಾ ಜಾತ್ಯಾತೀತ ಜನತಾದಳದ ಕಚೇರಿಯಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.

ಜಿಲ್ಲಾಧ್ಯಕ್ಷರಾದ ಎಂ.ಜಯ್ಯಣ್ಣರವರು ರಾಷ್ಟ್ರ ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡಿ, ದೇಶದಲ್ಲಿ ಜನಿಸಿದ ಪ್ರತಿಯೊಬ್ಬ
ವ್ಯಕ್ತಿಗೂ ಹಕ್ಕನ್ನು ಪ್ರತಿಪಾದಿಸುವ ಸಂವಿಧಾನದ ಸಿದ್ಧಾಂತ, ತತ್ವಗಳು ಹಾಗೂ ಒಕ್ಕೂಟದ ವ್ಯವಸ್ಥೆಯನ್ನು ಅರ್ಥೈಸಿಕೊಂಡು
ಏಕಭಾವನೆಯನ್ನು ಹೊಂದಿ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು, ಡಾ. ಬಿ.ಆರ್. ಅಂಬೇಡ್ಕರ್‍ರವರು ಕಷ್ಟದಿಂದ ಬಂದ
ಕುಟುಂಬದಲ್ಲಿ ಜನಿಸಿ ನಿಸ್ವಾರ್ಥತೆ ಯಿಂದ ಇಡೀ ದೇಶಕ್ಕೆ ಸಂವಿಧಾನವನ್ನು ಸಮರ್ಪಿಸಿದ ಪರಿಣಾಮ 76ನೇ ಗಣರಾಜ್ಯೋತ್ಸವ
ಆಚರಣೆ ಮಾಡುವಂತಾಗಿದೆ ಮಕ್ಕಳಿಗೆ ದೇಶಕ್ಕಾಗಿ ದುಡಿದ ತ್ಯಾಗಿಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ಹಾಗೆಯೇ
ಮಕ್ಕಳಿಗೆ ಮೂಲಭೂತ ಸೌಲಭ್ಯಗಳು ಹಾಗೂ ಕರ್ತವ್ಯಗಳ ಬಗ್ಗೆ ತಿಳಿಸಿ ಅರಿವು ಮೂಡಿಸಬೇಕೆಂದು ಕರೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕಾಂತರಾಜ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ತ್ಯಾಗ-ಬಲಿದಾನಗಳೊಂದಿಗೆ
ಹೋರಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ, ನೆಹರು, ಬಾಲಗಂಗಾಧರ ತಿಲಕ್, ಬಹಾದ್ದೂರ್ ಶಾಸ್ತ್ರಿ
ಅವರಂತಹ ಮಹನೀಯರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ಸ್ವಾತಂತ್ರ್ಯ ಬಂದಿದೆ. ಸಾಕಷ್ಟು ಮಹನೀಯರು ದೇಶವನ್ನು
ಮುನ್ನಡೆಸಿದ್ದಾರೆ. ಒಕ್ಕೂಟ ವ್ಯವಸ್ಥೆ ಗಣರಾಜ್ಯವಾಗಿ ಯಶಸ್ವಿಯಾಗಲು ಡಾ| ಬಿ.ಆರ್.ಅಬೇಂಡ್ಕರ್ ರಚಿಸಿದ ಸಂವಿಧಾನ ಕಾರಣ.
ಜನಪ್ರತಿ ನಿಧಿಗಳು ಸರ್ಕಾರದ ಹಣವನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡಬೇಕು. ಸಂವಿಧಾನದ ಆಶಯದಂತೆ ದೇಶದ
ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಶ್ರಮಿಸಿದಾಗ ಸಾರ್ವಜನಿಕರ ಕಲ್ಯಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಕಾರ್ಯಧ್ಯಕ್ಷರಾದ ಜಿ.ಬಿ.ಶೇಖರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ
ನಾಯಕ್,ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಸಣ್ಣ ತಿಮ್ಮಪ್ಪ,ಗಣೇಶ್ ಮೂರ್ತಿ, ಹನುಮಂತ ರಾಯಪ್ಪ, ಪರಮೇಶ್ವರಪ್ಪ, ಕರಿಬಸಣ್ಣ,
ವೀರಭದ್ರಪ್ಪ,ವೆಂಕಟೇಶ್, ಪ್ರತಾಪ್ ಜೋಗಿ, ಅಬ್ಬು, ನಿಜಲಿಂಗಪ್ಪ, ಮಂಜುನಾಥ್, ಸದಾಶಿವು, ಶಿವಾನಂದ,ಗೀತಮ್ಮ, ಜಾಲಿಕಟ್ಟೆ
ರುದ್ರಣ್ಣ, ಯರ್ರಿಸ್ವಾಮಿ, ಹನುಮಂತರಾಯಪ್ಪ, ಇನ್ನೂ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *