
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 27: ಶಾಸಕಾಂಗ,ನ್ಯಾಯಾಂಗ,ಕಾರ್ಯಾಂಗಗಳ ಸಮರ್ಥ ನಿರ್ವಹಣೆ ಸದೃಢ ಆಡಳಿತ ನೀಡುವುದು ಸಮಾನತೆ ಸಹೃದಯತೆ ಸಹಬಾಳ್ವೆ ವಿವಿಧತೆಯಲ್ಲಿ ಏಕತೆ ಸಾಧಿಸುತ್ತಾ ಸಾಂಸ್ಕೃತಿಕ ಪಾರಂಪರಿಕ ಮೌಲ್ಯಗಳನ್ನು ಬೆಳೆಸಿ, ರಾಷ್ಟ್ರದ ಸದೃಢತೆ
ಕಾಯ್ದುಕೊಳ್ಳಲು ಬದ್ಧರಾಗಿರಬೇಕು ಎಂದು ಸತ್ವ ಮಹಿಳಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರವಿಶಂಕರ್ ಕರೆ ನೀಡಿದರು.
ಕರ್ನಾಟಕ ರಸ್ತೆ ಮತ್ತು ಸಾರಿಗೆ ಸಂಸ್ಥೆ ಹಿರಿಯೂರು ಇವರು ಹಿರಿಯೂರು ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ಮಾಡಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ “ಸುವರ್ಣ ಭಾರತ ಪರಂಪರೆ ಹಾಗೂ ಪ್ರಗತಿ” ಈ ವರ್ಷ 2025ರ ಸುವರ್ಣ ಭಾರತ ಗಣರಾಜ್ಯೋತ್ಸವದ ಉದ್ಘೋಷವಾಕ್ಯವಾಗಿದೆ.ಈ ದಿನ 76ನೇ ಗಣರಾಜ್ಯೋತ್ಸವ ಭಾರತ 1947ರ ಆಗಸ್ಟ್ 15ರಂದು ಸರ್ವ ಸ್ವತಂತ್ರ ವಾಗಲು,ಬ್ರಿಟಿಷರ 200ವರ್ಷಗಳ ಸುದೀರ್ಘ ದಾಸ್ಯ ಶೃಂಖಲೆಯಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಾದ್ಯಂತ ಸಾಲು ಸಾಲು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವಾಗಬೇಕಾಯಿತು,ಅಷ್ಟೆಲ್ಲಾ ಹೋರಾಟದ ಫಲ ಭಾರತ ಸರ್ವ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಅಂಬೇಡ್ಕರ್ ಸಮಿತಿ ರಚಿಸಿದ ಜಗತ್ತಿನ ಶ್ರೇಷ್ಠ, ಬೃಹತ್ ಸಂವಿಧಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದು 1950 ಜನವರಿ 26ರಂದು ಶಾಸಕಾಂಗ,ನ್ಯಾಯಾಂಗ, ಕಾರ್ಯಾಂಗಗಳ ಸಮರ್ಥ ನಿರ್ವಹಣೆ ಸದೃಢ ಆಡಳಿತ ನೀಡುವುದು,ಸಮಾನತೆ,ಸಹೃದಯತೆ ,ಸಹಬಾಳ್ವೆ, ವಿವಿಧತೆಯಲ್ಲಿ ಏಕತೆ ಸಾಧಿಸುತ್ತಾ, ಸಾಂಸ್ಕೃತಿಕ,ಪಾರಂಪರಿಕ ಮೌಲ್ಯಗಳನ್ನು ಬೆಳೆಸಿ, ರಾಷ್ಟ್ರದ ಸದೃಢತೆ ಕಾಯ್ದುಕೊಳ್ಳಲು ಬದ್ಧರಾಗಿರಬೇಕು..ಹಕ್ಕು,ಕರ್ತವ್ಯಗಳ ಔಚಿತ್ಯವರಿತು ಪಾಲಿಸುವುದು. ರಾಷ್ಟ್ರಾಭಿಮಾನಧನರಾಗಿ ಪ್ರಜಾಪ್ರಭುತ್ವದ ಮೌಲ್ಯಾಧಾರಿತ ಪ್ರಜಾಸಮುದಾಯ ಆಯಾ ರಾಷ್ಟ್ರದ ಪ್ರಮುಖ ಶಕ್ತಿಯದು, ನಿಜ ಅಸ್ತ್ರವದು,ಈ ದಿನ ಪ್ರತಿಯೊಬ್ಬ ಭಾರತೀಯರೂ ರಾಷ್ಟ್ರ ಪ್ರೇಮದಿಂದ ಹೆಮ್ಮೆಪಡುವ ದಿನ, ಭಾರತದ ಔನ್ನತ್ಯವನ್ನು ಮೆರೆಯುವ ದಿನ” ಎಂದರು.
ವಾಹನ ನಿಯಂತ್ರಣಾಧಿಕಾರಿ ಶ್ರೀಮತಿ ನೇತ್ರಾರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ
ಶಶಿಕಾಂತ್,ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುಚಿತ್ರಾ ಅಮರ್, ಆರಕ್ಷಕರಾದ ಇಲಾಖೆಯ ಸಿಧ್ಧೇಶ್,ವಿಶಾಲಾಕ್ಷಿ,ಸುಮಂಗಲಾ, ಸಾರಿಗೆ
ಸಂಸ್ಥೆಯ ಸಿಬ್ಬಂದಿಗಳು, ಬಸ್ ಪ್ರಯಾಣಿಕರು, ನಾಗರೀಕರು ಉಪಸ್ಥಿತರಿದ್ದರು