ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್
ಯರಬಳ್ಳಿ/ಚಿತ್ರದುರ್ಗ: ಜ.27
ಭಾರತೀಯ ಸಂವಿಧಾನವು ದೇಶದ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಗೆ ದೃಢ ಚೌಕಟ್ಟು ನೀಡುತ್ತದೆ. ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶಕ ತತ್ವಗಳು ಮಕ್ಕಳನ್ನು ಶೋಷಣೆಯಿಂದ ರಕ್ಷಿಸಿ, ಶಿಕ್ಷಣ ಮತ್ತು ಸಮಾನತೆಯನ್ನು ಖಾತರಿಪಡಿಸಿದೆ ಇಂತಹ ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ರೂಪಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ದೇಶಕ್ಕಾಗಿ ದುಡಿದ ನಮ್ಮೆಲ್ಲಾ ಮಹನೀಯರನ್ನು ಈ ಗಣರಾಜ್ಯೋತ್ಸವ ದಿನದಂದು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸರ್ಕಾರಿ ಪಿಎಂಶ್ರೀ ಶಾಲೆ ಯರಬಳ್ಳಿ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ 77ನೇ ಗಣರಾಜ್ಯೋತ್ಸವ ಅಂಗವಾಗಿ ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮದ ಸರ್ಕಾರಿ ಪಿಎಂಶ್ರೀ ಶಾಲೆ ವತಿಯಿಂದ ಸೋಮವಾರ ಹಮ್ಮಿಕಳ್ಳಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಇಂದಿನ ಮಕ್ಕಳಿಗೆ ಭಾರತೀಯ ಸಂವಿಧಾನದ ಅರಿವು ಅತ್ಯಗತ್ಯವಾಗಿದೆ ಏಕೆಂದರೆ ಅದು ಮಕ್ಕಳಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಮಹತ್ವವನ್ನು ಬೋಧಿಸುತ್ತದೆ.ಇದು ಮಕ್ಕಳಲ್ಲಿ ಸಹಿಷ್ಣುತೆ, ಜಾತ್ಯತೀತ ದೃಷ್ಟಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ತಿಪ್ಪೇಸ್ವಾಮಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಷಯಗಳನ್ನು ಕೋರುತ್ತಾ ಯರಬಳ್ಳಿ ಗ್ರಾಮದ ಸರ್ಕಾರಿ ಪಿಎಂಶ್ರೀ ಶಾಲೆ ತನ್ನದೇ ಆದ ಮಹತ್ವವನ್ನು ಹೊಂದಿದ್ದು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಶಿಕ್ಷಣ ಇಲಾಖೆಯ ನೆರವಿನಿಂದ ಗ್ರಾಮದ ಮಕ್ಕಳಿಗೆ ಉಚಿತ ಶಿಕ್ಷಣ, ಪೌಷ್ಠಿಕ ಆಹಾರ ಮತ್ತು ಸಮವಸ್ತ್ರಗಳನ್ನು ಒದಗಿಸುವುದರ ಜೊತೆಗೆ ಯಾವುದೇ ಶ್ರೀಮಂತ ಖಾಸಗಿ ಶಾಲೆಯಲ್ಲಿ ದೊರೆಯಬಹುದಾದ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಒದಗಿಸುತ್ತಿರುವುದು ಇಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳ ಸಂಖ್ಯೆಯೇ ಸಾಕ್ಷಿಯಾಗಿದೆ ಇದು ನಮ್ಮ ಗ್ರಾಮದ ಹೆಮ್ಮೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದ್ವಜಾರೋಹಣಕ್ಕೂ ಮುನ್ನ ಸಮವಸ್ತ್ರ ಶಾಲೆಯ ಧರಿಸಿದ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಹಿಡಿದು ಡ್ರಂಸೆಟ್ ಬಾರಿಸುತ್ತಾ ಗ್ರಾಮದ ಬೀದಿಗಳಲ್ಲಿ ನಡೆಸಿ ಮೆರವಣಿಗೆ ಹಾಗೂ ಪಥಸಂಚಲನ,ಸಾಂಸ್ಕೃತಿಕ ಕಾರ್ಯಕ್ರಮ ಗ್ರಾಮದ ಜನರ ಮೆಚ್ಚುಗೆ ಪಡೆಯಿತು.ಇದೇ ಸಂಧರ್ಭದಲ್ಲಿ ಶಾಲೆಯಲ್ಲಿ ನಡೆದ ವಿವಿಧ ಆಟೋಟ ಹಾಗೂ ಇತರೆ ಸ್ಪರ್ಧೆಗಳಲ್ಲಿ ಭಾಗವಹಿದ ಮಕ್ಕಳಿಗೆ ಮಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರದ ಶ್ರೀಕಂಠಪ್ಪ, ಶಬಾನ ವಿಜಯಮ್ಮ ಸಂತೋಷ್ ಕುಮಾರ್ ದರ್ಶನ್ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸುಮಲತಾ, ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಶಶಿಕಲಾ, ಲಿಂಗರಾಜು ಮಾರುತಿ ಟಿವಿ ಮಂಜುನಾಥ್ ಸಿಬಿ ಶಾರದಮ್ಮ ದೈಹಿಕ ಶಿಕ್ಷಕ ಪಿ ರಾಜಪ್ಪ ಗ್ರಾಮದ ಮುಖಂಡರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
Views: 40