ಚಿತ್ರದುರ್ಗ ಆ. 15
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಧವಳಗಿರಿ ಬಡಾವಣೆಯ ಉದ್ಯಾನವನದಲ್ಲಿ ವಿಜೃಂಭಣೆಯಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಿದ ವಿಜಯನಗರ ಜಿಲ್ಲಾ ಪಂಚಾಯತ್ ನ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಸಿ ಜಿ ಶ್ರೀನಿವಾಸ್ಬಾ ಪೂಜಿಯವರ ಹೋರಾಟ ಹಾಗೂ ಅಂಬೇಡ್ಕರ್ ಜಿಯವರ ಮೇಧಾವಿತನಗಳಿಂದ ಅಪಾರ ಬೆಲೆ ತೆತ್ತು ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ ಶಶಿಕಿರಣ್ ಗುಡೇಕೋಟೆಯವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬಾಂಬೆ ನೌಕಾ ದಂಗೆ, ಕ್ರಾಂತಿಕಾರಿಗಳ ಹಾಗೂ ನೇತಾಜಿಯವರ ಪಾತ್ರದ ಮೇಲೆ ಬೆಳಕು ಚೆಲ್ಲಿದರು.
ಡಾ ಚೆನ್ನಕೇಶವ್ ಸ್ವಾಗತಿಸಿದರು, ಶ್ರೀ ಜೆ ಎಸ್ ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಿ ಈಶ್ವರಪ್ಪ ವಂದಿಸಿದರು. ಬಡಾವಣೆಯ ಪ್ರಮುಖರಾದ ಕೆ ಬಿ ಎಚ್ ರಂಗಯ್ಯ, ಓ ಬಿ ಬಸವರಾಜ್, ಶಂಕ್ರಪ್ಪ, ಷಣ್ಮುಖಪ್ಪ, ಮಂಜಣ್ಣ, ನಾಗರಾಜ್,ರಾಮಚಂದ್ರ ರಾವ್ ಅರ್ಚಕರು, ವಿಷ್ಣು ಸೇರಿದಂತೆ ಹಲವಾರು ಮಹಿಳೆಯರು, ಮಕ್ಕಳು, ನಾಗರೀಕರು ಭಾಗವಹಿಸಿದರು.
Views: 43