ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ 12
ದೀರ್ಘಕಾಲದಿಂದ ಉತ್ತಮ ಶಿಕ್ಷಣ ನೀಡುತ್ತಿರುವ ಕಾಲೇಜು. ಶೈಕ್ಷಣಿಕ ಕಟ್ಟುನಿಟ್ಟಿನ ಜೊತೆಗೆ ವಿದ್ಯಾರ್ಥಿ ಅಭಿವೃದ್ಧಿಗೆ ಒತ್ತು ನೀಡುವ ತರಳಬಾಳು ಪದವಿಪೂರ್ವ ಕಾಲೇಜು, ಚಿತ್ರದುರ್ಗ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮತ್ತೊಮ್ಮೆ ತನ್ನ ಶೈಕ್ಷಣಿಕ ಮೇಲುಗೈಯನ್ನು ಸಾಬೀತುಪಡಿಸಿದೆ.
ಪರೀಕ್ಷೆಗೆ ಕುಳಿತ 61 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್ 8 ಪಡೆದ ವಿದ್ಯಾರ್ಥಿಗಳಾಗಿದ್ದು ಮಂಜುನಾಥ ಆ 562 ಗೌಸಿಯ ತರನಮ್ 559 ಗೀತಾ S 549 ಪುಷ್ಪ ಐ 542 ವಿಜಯ ಲಕ್ಷ್ಮಿ 540 ಶ್ವೇತ ಂ ಗಿ 527 ಸಹನಾ ಊ 514 ಹಾರಿಕ 514 ಹಾಗೂ ಪ್ರಥಮ ದರ್ಜೆಯಲ್ಲಿ 30, ದ್ವಿತೀಯ ದರ್ಜೆ 6, ತೃತೀಯ ದರ್ಜೆ 2 , ಒಟ್ಟು 51 ವಿದ್ಯಾರ್ಥಿಗಳು ಪಾಸಾಗಿದ್ದು ಕಾಲೇಜಿನ ಒಟ್ಟು ಫಲಿತಾಂಶ 83.6% ಆಗಿದೆ.
ಇದು ಸಂಸ್ಥೆಯ ಸಮಗ್ರ ಶೈಕ್ಷಣಿಕ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿ ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳ ಪರಿಶ್ರಮ ಮತ್ತು ಉಪನ್ಯಾಸಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶಗಳಿಸಿ ಕಾಲೇಜಿಗೆ ಅಪಾರ ಕೀರ್ತಿಯನ್ನು ತಂದಿದ್ದಾರೆ.


