ಸಕ್ಕರೆ ನಾಡಿನಲ್ಲಿ ನಡೆಯುವ ಅಕ್ಕರೆಯ ಸಾಹಿತ್ಯ ಸಮ್ಮೇಳನದ, ಕನ್ನಡದ ಅಕ್ಷರ ಜಾತ್ರೆಗೆ ಎಲ್ಲರೂ ಬರಲು ಈಗಲೇ ಸಿದ್ಧತೆ ಮಾಡಿಕೊಳ್ಳಲು ಮನವಿ. ಕನ್ನಡ ಸಾಹಿತ್ಯ ಪರಿಷತ್ತು ನಮ್ಮದು ನಿಮ್ಮದು ಎಲ್ಲರದು ಕೂಡ ಹೌದು, ಸಮ್ಮೇಳನದ ಯಶಸ್ಸಿಗೆ ನಾವೆಲ್ಲರೂ ಪಣತೊಡೋಣ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಮಂಡ್ಯದಲ್ಲಿ ಆಯೋಜನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ ಮಹೇಶ್ ಜೋಶಿ ಅವರ ನಾಯಕತ್ವದಲ್ಲಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಇದೇ ವರ್ಷ 2024 ರ ಡಿಸೆಂಬರ್ ತಿಂಗಳಿನ 20 ನೇ ಶುಕ್ರವಾರ, 21 ನೇ ಶನಿವಾರ ಹಾಗೂ 22 ನೇ ಭಾನುವಾರ ದಂದು ಸಮ್ಮೇಳನವನ್ನು ಅರ್ಥಪೂರ್ಣವಾಗಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿಯವರು ಸೇರಿದಂತೆ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರಗಳು, ಮಂಡ್ಯ ಜಿಲ್ಲೆಯ ಹಿರಿಯ ಅಧಿಕಾರಿಗಳ ವರ್ಗ ಹಾಗೂ ಸರ್ಕಾರದ ಇಲಾಖೆಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ ಭ ರಾಮಲಿಂಗಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ ಎಮ್ ಪಟೇಲ್ ಪಾಂಡು, ಮುಂತಾದವರು ಭಾಗವಹಿಸಿದ್ದರು.