ಚಿತ್ರದುರ್ಗ | ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾದಿಂದ ಎ.ಪಿ.ಜೆ.ಅಬ್ದುಲ್ ಕಲಾಂರವರ 9 ನೇ ಪುಣ್ಯತಿಥಿ.

ಚಿತ್ರದುರ್ಗ ಜು. 27 : ಅಬ್ದುಲ್ ಕಲಾಂರವರು ಕಳಂಕ ರಹಿತ ವ್ಯಕ್ತಿಯಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಭಾರತವನ್ನು ಪ್ರಗತಿಯತ್ತ ಕೊಂಡ್ಯೂಯುವ ಕಾರ್ಯವನ್ನು ಮಾಡಿದ್ದಾರೆ ಎಂದು ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಚಿತ್ರದುರ್ಗ ಜಿಲ್ಲಾ ಪ್ರಬಾರಿ ಆಜಗರ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಶನಿವಾರ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾದಿಂದ ಹಮ್ಮಿಕೊಂಡಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂರವರ 9 ನೇ ಪುಣ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾಂರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕಲಾಂರವರು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯವನ್ನು ನಿರ್ವಹಿಸಿದ್ದಾರೆ. ಕಲಾಂರವರನ್ನು ದೇಶದ ರಾಷ್ಟ್ರಪತಿಗಳಾಗಿ ಮಾಡುವಂತೆ ಮಾಡಿದ್ದು ಮಾಜಿ ಪ್ರಧಾನ ಮಂತ್ರಿ ವಾಜಿಪೇಯಿಯವರು ಇವರ ಕೆಲಸವನ್ನು ಕಂಡು ಇವರಿಂದ ದೇಶ ಪ್ರಗತಿಯನ್ನು ಕಾಣುತ್ತದೆ ಎಂದು ತಿಳಿದು ಎಲ್ಲರನ್ನು ಒಪ್ಪಿಸಿ ಅವರನ್ನು ರಾಷ್ಟ್ರಪತಿಗಳಾಗಿ ಮಾಡಿದರು. ಕಲಾಂರವರು ದೂರದೃಷ್ಟಿಯನ್ನು ಹೊಂದಿದ ವ್ಯಕ್ತಿಯಾಗಿದ್ದರು, ಇವರ ಕಾರ್ಯದಿಂದ ರಕ್ಷಣಾ ಇಲಾಖೆಯಲ್ಲಿ ಅಧುನಿಕವಾದ ಶಸ್ತ್ರಾಸ್ತ್ರಗಳನ್ನು ಹೊಂದಲಾಯಿತು.  ಮಕ್ಕಳ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದ ಕಲಾಂರವರು ಸಮಯ ಸಿಕ್ಕಾಗ ಎಲ್ಲಾ ಕಾಲೇಜುಗಳಿಗೆ ಹೋಗಿ ಭೋಧನೆಯನ್ನು ಮಾಡುತ್ತಿದ್ದರು, ಇವರ ಭೋಧನೆಯಿಂದ ವಿದ್ಯಾರ್ಥಿಗಳು ಸ್ಪೂರ್ತಿಯನ್ನು ಹೊಂದುವುದರ ಮೂಲಕ ನಾವು ಸಹಾ ಅವರಂತೆ ಆಗಬೇಕೆಂದು ಕನಸನ್ನು ಕಾಣುತ್ತಿದ್ದರು ಎಂದರು.

ಬಿಜೆಪಿ ಮುಸ್ಲಿಂ ವಿರೋಧಿ ಎಂದು ಬೇರೆ ಪಕ್ಷದವರು ಹೇಳುತ್ತಿದ್ದಾರೆ ಆದರೆ ಕಲಾಂರವರನ್ನು ದೇಶದ ಉನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿತು. ಇದರಿಂದಲೇ ಗೊತ್ತಾಗುತ್ತದೆ ಬಿಜೆಪಿ ಮುಸ್ಲಿಂ ವಿರೋಧಿಯಲ್ಲ ಎಂದು ಆದರೆ ಇದನ್ನು ತಿಳಿಯದ ಅನ್ಯ ಪಕ್ಷದವರು ಸುಮ್ಮನೆ ಜನರನ್ನು ಬಿಜೆಪಿ ಮುಸ್ಲಿಂ ವಿರೋಧಿ ಎಂದು ಎತ್ತಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಯಾರೂ ಸಹಾ ಕಲಂರವರನ್ನು ನೆನಪಿಸಿಕೊಳ್ಳುತ್ತಿಲ್ಲ ಎಂದು ಹಜಗರ್ ದೂರಿದರು.

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಸೈಯದ್ ನವಾಜ್ ಮಾತನಾಡಿ, ಬಡತನದಲ್ಲಿ ಜನನವಾದ ಕಲಾಂರವರು ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಪಡೆಯುವುದರ ಮೂಲಕ ನಾನು ಸಹಾ ದೊಡ್ಡವನಾದ ಮೇಲೆ ವಿಜ್ಞಾನಿಯಾಗಬೇಕೆಂದು ಕನಸನ್ನು ಕಂಡು ಅದನ್ನು ತಮ್ಮ ಜೀವನದಲ್ಲಿ ಸಹಕಾರವನ್ನು ಮಾಡಿಕೊಂಡರು. ಡಿಆರ್‌ಡಿಓ ಮುಖ್ಯಸ್ಥರಾಗಿದ್ದ ಅವರನ್ನು ವಾಜಿಪೇಯಿಯವರ ಪತ್ತೇ ಮಾಡಿ ದೇಶದ ರಾಷ್ಟ್ರಪತಿಗಳನ್ನಾಗಿ ಮಾಡಿದರು. ಅವರು ರಾಷ್ಟ್ರಪತಿಗಳಾದ ಮೇಲೆ ದೇಶಕ್ಕೆ ಕಲಾಂರವರು ತಮ್ಮದೆ ಕೊಡುಗೆಯನ್ನು ದೇಶಕ್ಕೆ ನೀಡಿದ್ದಾರೆ, ರಕ್ಷಣಾ ಇಲಾಖೆಗೆ ಅಗತ್ಯವಾಗಿ ಬೇಕಾದ ವಿವಿಧ ರೀತಿಯ ಉಪಕರಣಗಳನ್ನು ಕಂಡು ಹಿಡಿಯುವುದರ ಮೂಲಕ ದೇಶದ ರಕ್ಷಣೆಗೆ ಒತ್ತು ನೀಡಿದರು. ಮಕ್ಕಳಿಗೆ ಮಾದರಿಯಾಗಿದ್ದ ಇವರು ದೇಶದ ಸೇವೆಗೆ ಮುಂದಾಗುವಂತೆ ಸೂಚಿಸಿದ್ದರು ಎಂದರು.

ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ ಮಾತನಾಡಿ, ಬಿಜೆಪಿ ಕಲಾಂರವರನ್ನು ದೇಶದ ಅತಿ ದೊಡ್ಡ ಹುದ್ದೆಯಾದ ರಾಷ್ಟ್ರಪತಿಯನ್ನಾಗಿ ಮಾಡಿತು. ಇದರಿಂದ ಅವರು ದೇಶಕ್ಕೆ ವಿವಿಧ ರೀತಿಯ ಕೊಡುಗೆಯನ್ನು ನೀಡಿದರು. ಇಂದಿನ ಯುವ ಜನಾಂಗಕ್ಕೆ ಕಲಾಂರವರು ಮಾದರಿಯಾಗಿದ್ದಾರೆ. ಮಕ್ಕಳಿಗೆ ಕನಸು ಕಾಣುವಂತೆ ತಿಳಿಸಿ ಅದನ್ನು ಸಕಾರ ಮಾಡುವತ್ತ ಮುಂದಾಗಿ ಎಂದು ತಿಳಿಸಿದ್ದರು. ಉನ್ನತ ಹುದ್ದೆಯಲ್ಲಿದ್ದರು ಸಹಾ ಅದನ್ನು ಬಿಟ್ಟು ಕಾಲೇಜುಗಳಿಗೆ ಭೇಟಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುತ್ತಿದ್ದರು. ಬಡತನದಿಂದ ಬಂದ ಇವರು ದೇಸದ ಉತ್ತಮ ಸ್ಥಾನವನ್ನು ಏರಿದರು, ಇದರಲ್ಲಿ ಇವರ ಪರಿಶ್ರಮ ಅಧಿಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಷಾಹಿದ್, ಸೈಫುಲ್ಲಾ, ಉಪಾಧ್ಯಕ್ಷ ಕಮಲೇಶ್ ಜೈನ್,ಕಿರಣ್, ವಿಶ್ವನಾಥ್, ಮಹಾಂತೇಶ ಭಾಗವಹಿಸಿದ್ದರು.

Leave a Reply

Your email address will not be published. Required fields are marked *