India vs Australia, 2nd ODI: ಟೀಮ್ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಒಂದು ಬದಲಾವಣೆ ಖಚಿತ

India vs Australia, 2nd ODI: ಭಾರತ-ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ 2ನೇ ಪಂದ್ಯವು ನಾಳೆ ನಡೆಯಲಿದೆ. ವಿಶಾಖಪಟ್ಟಣಂನ ಡಾ. ವೈಎಸ್​ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ ಒಂದು ಬದಲಾವಣೆ ಕಂಡು ಬರಲಿದೆ.ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪಂದ್ಯಕ್ಕೆ ಲಭ್ಯರಿರಲಿದ್ದಾರೆ. ಹೀಗಾಗಿ ಆಡುವ ಬಳಗದಲ್ಲಿ 1 ಬದಲಾವಣೆ ಖಚಿತ ಎಂದೇ ಹೇಳಬಹುದು.ಆದರೆ ಇಲ್ಲಿ ಟೀಮ್ ಇಂಡಿಯಾದಿಂದ ಯಾರನ್ನು ಕೈ ಬಿಡಲಿದ್ದಾರೆ ಎಂಬುದೇ ಕುತೂಹಲ. ಏಕೆಂದರೆ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಸ್ಥಾನದಲ್ಲಿ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಿದ್ದರು. ಮತ್ತೊಂದೆಡೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡಿದ್ದರು. ಆದರೆ ಇಬ್ಬರೂ ಕೂಡ ವಿಫಲರಾಗಿದ್ದರು.ಹೀಗಾಗಿ ಇವರಿಬ್ಬರಲ್ಲಿ ಒಬ್ಬರನ್ನು ತಂಡದಿಂದ ಕೈ ಬಿಡುವುದು ಖಚಿತ. ರೋಹಿತ್ ಶರ್ಮಾ ತಂಡಕ್ಕೆ ಕಂಬ್ಯಾಕ್ ಮಾಡುತ್ತಿರುವುದರಿಂದ ಇಶಾನ್ ಕಿಶನ್​ಗೆ ಆರಂಭಿಕನ ಸ್ಥಾನ ಕೈ ತಪ್ಪಲಿದೆ. ಇನ್ನು ಕಿಶನ್​ಗೆ ಅವಕಾಶ ನೀಡಬೇಕಿದ್ದರೆ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈ ಬಿಡಬೇಕಾಗುತ್ತದೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ತಂಡದಿಂದ ಹೊರಬೀಳುವುದು ಖಚಿತ.ಇನ್ನು ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆದ್ದರೆ ಸರಣಿ ವಶವಾಗಲಿದೆ. ಹೀಗಾಗಿ ಭಾರತ ತಂಡವು ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಲಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.ರೋಹಿತ್ ಶರ್ಮಾಶುಭ್​ಮನ್ ಗಿಲ್ವಿರಾಟ್ ಕೊಹ್ಲಿಸೂರ್ಯಕುಮಾರ್ ಯಾದವ್ಕೆಎಲ್ ರಾಹುಲ್ಹಾರ್ದಿಕ್ ಪಾಂಡ್ಯರವೀಂದ್ರ ಜಡೇಜಾಕುಲ್ದೀಪ್ ಯಾದವ್ಶಾರ್ದೂಲ್ ಠಾಕೂರ್ಮೊಹಮ್ಮದ್ ಸಿರಾಜ್ಮೊಹಮ್ಮದ್ ಶಮಿಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ) ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನಾದ್ಕಟ್.

source https://tv9kannada.com/photo-gallery/cricket-photos/india-vs-australia-2nd-odi-playing-11-zp-au50-538881.html

Leave a Reply

Your email address will not be published. Required fields are marked *