
ಚಿತ್ರದುರ್ಗ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿತ್ರದುರ್ಗ ತಾಲ್ಲೂಕು ಶಾಖೆ ವತಿಯಿಂದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 18-03-2023 ನೇ ಶನಿವಾರ BRC ಕಛೇರಿ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕರಿಗೆ /CRP/BRP/ರವರಿಗೆ ” ಆನ್ಲೈನ್ ಮುಖೇನ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಾದ ಮಹಿಳಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ” ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮತಿ ಮಾರಕ್ಕನವರು ಕಾರ್ಯಕ್ರಮವನ್ನು ಚಾಲನೆ ನೀಡಿ, ಇಂತಹ ಕಾರ್ಯಕ್ರಮ ಮಹಿಳೆಯರಿಗೆ ಒಂದು ಆತ್ಮ ವಿಶ್ವಾಸ ಹೆಚ್ಚಿಸಲು ಸಹಾಯಕ ಎಂದು ತಿಳಿಸಿ ಕೆಲವು ತತ್ವಪದಗಳನ್ನು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಶ್ರೀ ಮತಿ.ಜ್ಯೋತಿ ಲಕ್ಷ್ಮಿ ಮಹಿಳೆಯರು ಇಂದಿನ ದಿನಮಾನಸದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮಹಿಳಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಇಂತಹ ಕಾರ್ಯಕ್ರಮಗಳು ಇನ್ನೂ ಉತ್ತಮ ಪ್ರಗತಿಯ ಆಗಲಿ ಎಂದು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಈ ಸಂಪತ್ ಕುಮಾರ್ ಮಾತಾಡುವ ಮೂಲಕ ನಮ್ಮ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿನೂತನ ವಾದ ಇಂತಹ ಕಾರ್ಯಕ್ರಮ ಮತ್ತು ಕಲಿಕೆಗೆ ಪೂರಕವಾದ ಚಟುವಟಿಕೆ ರಸ ಪ್ರಶ್ನೆ ಕಾರ್ಯಕ್ರಮ ಮಾಡುವ ಮೂಲಕ ನಮ್ಮ ತಾಲ್ಲೂಕಿನ ಶಿಕ್ಷಕರಿಗೆ ಪೋತ್ಸಾಹ ಮತ್ತು ಉತ್ತೇಜನ ನೀಡುತ್ತಿರುವ ಸಂಘದ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಡಾ.ರಾಜುನಾಯ್ಕ. ಸಿ. ಮಾತನಾಡುತ್ತಾ ಮಹಿಳೆಯರು ನಮ್ಮ ಸಮಾಜದ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ ತ್ಯಾಗ ಬಲಿದಾನ ಮೂಲಕ ಈ ಒಂದು ಸುಂದರ ಸಮಾಜ ಕಟ್ಟಲು ಪುರಾತನ ಕಾಲದಿಂದಲೂ ನಮಗೆ ಕೊಡುಗೆಯಾಗಿ ಬಂದಿದೆ. ಇಂದು ಇಂತಹ ವಿಶೇಷ ದಿನಗಳಲ್ಲಿ ಮಹಿಳೆಯರನ್ನು ಗೌರವಿಸುವ ಮೂಲಕ ನಾವು ಹೆಮ್ಮೆ ಇಡಬೇಕೆಂದು ನುಡಿದರು.
ಕಾರ್ಯಕ್ರಮದ ಸ್ವಾಗತವನ್ನು ಶ್ರೀ ತಿಪ್ಪೇಸ್ವಾಮಿ ಬಿ. ಹೆಚ್.ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಳು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಜಿ.ಟಿ.ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೇಶ್ ಜಿಲ್ಲಾ ಖಜಾಂಚಿ, ಎಸ್.ವಿರಣ್ಣ.ಮಹಂತೇಶ್, ವಿರಣ್ಣ ಮಲ್ಲಿಕಾರ್ಜುನ, ಮಲ್ಲಿಕಾರ್ಜುನಯ್ಯ, ರವಿಶಂಕರ್, ಲೋಲಾಕ್ಷಮ್ಮ, ರೂಪ, ಗೀತಾ, ಉಷಾ, ಸುಧಾ, ಪರ್ವಿನ್ತಾಜ್, ದುರುಗೇಶ್, ರಂಗಸ್ವಾಮಿ, ರಂಗೇಶ್, ನವೀನ್. ಸಂಘದ ಇತರೆ ಪದಾಧಿಕಾರಿಗಳು ನಿರ್ದೇಶಕರು ನಾಮ ನಿರ್ದೇಶಕರು ಹಾಗೂ ಶಿಕ್ಷಕರು ಹಾಜರಿದ್ದರು.
ಅನ್ ಲೈನ್ ರಸ ಪ್ರಶ್ನೆ ಸ್ವಧೆಯಲ್ಲಿ ವಿಜೇತರಾದ ಶಿಕ್ಷಕಿಯರು ಪ್ರಥಮ ಶ್ರೀಮತಿ ಶಿಲ್ಪ, ದ್ವೀತಿಯ ಶಶಿಕಲಾ, ತೃತೀಯ ಶ್ರೀಮತಿ ವಸಂತ, ಸಮಾಧಾನಕರ ಬಹುಮಾನವನ್ನು ಶಶಿಕಲಾ, ಪುಷ್ಪ, ರಾಜೇಶ್ವರಿ, ಜಮರುದಿ ಪರ್ವಿನ್. ಸುಧಾ, ಕಮಲಾಕ್ಷಿ, ತಬ್ರೇಜ್ ಉನ್ನಿಸಾ, ಬಿಂದು, ಹೇಮಲತಾ, ನಳಿನಾಕ್ಷಿ. ಈ ಮಹಿಳಾ ಶಿಕ್ಷಕಿಯರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ವಂದನೆಗಳೊಂದಿಗೆ ಕಾರ್ಯಕ್ರಮವನ್ನು ಶ್ರೀ ದುರುಗೇಶ್ ಮುಕ್ತಾಯ ಮಾಡಲಾಯಿತು.
Views: 0