IPL: ಮೊದಲ ಐಪಿಎಲ್​ನ 8 ತಂಡಗಳ ನಾಯಕರು ಯಾರಾಗಿದ್ದರು ಗೊತ್ತಾ?

2008 ರಿಂದ ಶುರುವಾದ ವರ್ಣರಂಜಿತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ 16ನೇ ವಸಂತಕ್ಕೆ ಬಂದು ನಿಂತಿದೆ. ಚೊಚ್ಚಲ ಸೀಸನ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿದಿದ್ದವು. ಆ ಎಲ್ಲಾ ತಂಡಗಳು ಈಗಲೂ ಮುಂದುವರೆದಿದೆ. ಇದಾಗ್ಯೂ ಮೂರು ತಂಡಗಳ ಹೆಸರು ಬದಲಾಗಿದೆ.ಮೊದಲ ಸೀಸನ್​ನಲ್ಲಿ ಹೈದರಾಬಾದ್ ಅನ್ನು ಪ್ರತಿನಿಧಿಸಿ ಶುರುವಾಗಿದ್ದ ಡೆಕ್ಕನ್ ಚಾರ್ಜರ್ಸ್ ತಂಡವು ಇದೀಗ ಸನ್​ರೈಸರ್ಸ್ ಹೈದರಾಬಾದ್ ಹೆಸರಿನಲ್ಲಿ ಕಣಕ್ಕಿಳಿಯುತ್ತಿದೆ. ಹಾಗೆಯೇ ಕಿಂಗ್ಸ್ ಇಲೆವೆನ್ ಪಂಜಾಬ್ ಈಗ ಪಂಜಾಬ್ ಕಿಂಗ್ಸ್ ಆಗಿ ಮಾರ್ಪಟ್ಟಿದೆ. ಇನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಹೆಸರು ಡೆಲ್ಲಿ ಕ್ಯಾಪಿಟಲ್ಸ್ ಆಗಿ ಬದಲಾಗಿದೆ. ಇದರ ಜೊತೆಗೆ ಹೊಸ ತಂಡಗಳಾಗಿ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್​ ತಂಡಗಳು ಸೇರ್ಪಡೆಯಾಗಿರುವುದು ವಿಶೇಷ.ಕ್ರಿಕೆಟ್​ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಒದಗಿಸಿದ್ದ ಮೊದಲ ಐಪಿಎಲ್ ಆವೃತ್ತಿಯಲ್ಲಿ ಫೈನಲ್ ಪಂದ್ಯವಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್​ ತಂಡಗಳು. ಅಂದು CSK ವಿರುದ್ಧ 3 ವಿಕೆಟ್​​ಗಳ ರೋಚಕ ಜಯ ಸಾಧಿಸಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.ವಿಶೇಷ ಎಂದರೆ ಚೊಚ್ಚಲ ಸೀಸನ್​ನಲ್ಲಿ 8 ತಂಡಗಳನ್ನು ಮುನ್ನಡೆಸಿದ 7 ನಾಯಕರುಗಳು ಈಗಾಗಲೇ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನಲ್ಲಿ ಮುಂದುವರೆದಿದ್ದಾರೆ. ಹಾಗಿದ್ರೆ ಮೊದಲ ಸೀಸನ್​ನಲ್ಲಿ ತಂಡವನ್ನು ಮುನ್ನಡೆಸಿದ್ದ 8 ಕ್ಯಾಪ್ಟನ್​ಗಳು ಯಾರೆಲ್ಲಾ ಎಂದು ನೋಡೋಣ...ಕೊಲ್ಕತ್ತಾ ನೈಟ್ ರೈಡರ್ಸ್​- ಸೌರವ್ ಗಂಗೂಲಿಮುಂಬೈ ಇಂಡಿಯನ್ಸ್- ಸಚಿನ್ ತೆಂಡೂಲ್ಕರ್ಡೆಲ್ಲಿ ಕ್ಯಾಪಿಟಲ್ಸ್- ವೀರೇಂದ್ರ ಸೆಹ್ವಾಗ್ರಾಜಸ್ಥಾನ್ ರಾಯಲ್ಸ್- ಶೇನ್ ವಾರ್ನ್ಪಂಜಾಬ್ ಕಿಂಗ್ಸ್- ಯುವರಾಜ್ ಸಿಂಗ್ಡೆಕ್ಕನ್ ಚಾರ್ಜರ್ಸ್- ವಿವಿಎಸ್ ಲಕ್ಷ್ಮಣ್ಚೆನ್ನೈ ಸೂಪರ್ ಕಿಂಗ್ಸ್- ಮಹೇಂದ್ರ ಸಿಂಗ್ ಧೋನಿರಾಯಲ್ ಚಾಲೆಂಜರ್ಸ್ ಬೆಂಗಳೂರು- ರಾಹುಲ್ ದ್ರಾವಿಡ್

source https://tv9kannada.com/photo-gallery/cricket-photos/ipl-2023-kannada-2008-ipl-all-team-captain-list-ipl-2008-team-captains-kannada-news-zp-au50-541590.html

Views: 0

Leave a Reply

Your email address will not be published. Required fields are marked *