Asia Cup 2023: ಪಾಕಿಸ್ತಾನದಲ್ಲೇ ನಡೆಯಲಿದೆ ಏಷ್ಯಾಕಪ್ ಟೂರ್ನಿ: ಇಂಡೋ-ಪಾಕ್ ಕದನಕ್ಕೆ ಮುಹೂರ್ಥ ಫಿಕ್ಸ್

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಏಷ್ಯಾಕಪ್ (Asia Cup 2023)​ ಕ್ರಿಕೆಟ್ ಟೂರ್ನಿ ಎಲ್ಲಿ ನಡೆಯಬೇಕು ಎಂಬ ಗೊಂದಲ ಕೊನೆಗೂ ನಿವಾರಣೆ ಆದಂತಿದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್ ಈ ಬಗ್ಗೆ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದು ಏಷ್ಯಾ ಕಪ್ 2023 ಪಾಕಿಸ್ತಾನದಲ್ಲೇ ಆಯೋಜಿಸಲಾಗಿದೆ ಎಂದು ವರದಿ ಆಗಿದೆ.ಆದರೆ, ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂಬುದನ್ನು ಬಲವಾಗಿ ಹೇಳಿದೆ. ಈ ಸಮಸ್ಯೆಯನ್ನು ಕೂಡ ನಿವಾರಣೆ ಮಾಡಲಾಗಿದೆ. ಭಾರತದ ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯುದಿಲ್ಲ. ಬದಲಾಗಿ ಭಾರತ ತಂಡ ತನ್ನ ಎಲ್ಲ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿದೆ.ಭಾರತ ತಂಡ ತನ್ನ 2023ರ ಏಷ್ಯಾಕಪ್ ಪಂದ್ಯಗಳನ್ನು ಆಡಲು ಇಂಗ್ಲೆಂಡ್, ಓಮನ್, ಶ್ರೀಲಂಕಾ ಅಥವಾ ಯುಎಇ ಸ್ಥಳವನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪಾಕ್ ಕೂಡ ಭಾರತ ವಿರುದ್ಧದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲೇ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಮೂಲಕ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವ ಅಗತ್ಯ ಇರುವುದಿಲ್ಲ. ಅದೇ ರೀತಿ ನಮ್ಮ ನೆಲದಲ್ಲಿಯೇ ಟೂರ್ನಿ ನಡೆಯಬೇಕು ಎಂಬ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ನ ವಾದಕ್ಕೂ ಮನ್ನಣೆ ಸಿಕ್ಕಂತಾಗುತ್ತದೆ.ಆರು ದೇಶಗಳನ್ನು ಒಳಗೊಂಡಿರುವ ಏಷ್ಯಾ ಕಪ್​ ಸೆಪ್ಟೆಂಬರ್​ ಆರಂಭದಲ್ಲಿ ನಡೆಯಲಿದೆ. 13 ದಿನ ನಡೆಯುವ 13 ಪಂದ್ಯಗಳಿಗೆ ಪಾಕಿಸ್ತಾನ ತಂಡ ಆತಿಥ್ಯ ವಹಿಸಲಿದೆ. ಈ ಬಾರಿ ಏಕದಿನ ಮಾದರಿಯಲ್ಲಿ ಟೂರ್ನಿ ನಡೆಯಲಿದೆ"ಏಷ್ಯನ್ ಕ್ರಿಕೆಟ್ ಸಮಿತಿ (ಎಸಿಸಿ)ಯ ಮಂಡಳಿಗಳ ಸಭೆ ನಡೆಸಿ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ನಡೆಸಲು ಅನುಮತಿಸಲಾಗುವುದು. ಆದರೆ, ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸದೇ ತಮ್ಮ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ. ಭಾರತ ತಮ್ಮ ಪಂದ್ಯಗಳನ್ನು ಓಮನ್, ಯುಎಇ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಆಡುವ ಸಾಧ್ಯತೆಯಿದೆ," ಎಂದು ಎಎನ್‌ಐ ವರದಿ ಮಾಡಿದೆ.ESPNcricinfo ಪ್ರಕಾರ, ಭಾರತದ ಪಂದ್ಯಗಳನ್ನು ಆಯೋಜಿಸುವ ಸ್ಪರ್ಧಿಗಳಲ್ಲಿ ಇಂಗ್ಲೆಂಡ್ ಕೂಡ ಒಂದು ಎಂದು ವರದಿ ಮಾಡಿದೆ. ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಪಂದ್ಯಾವಳಿಯಲ್ಲಿ ಸೆಣಸಾಡಲಿವೆ. ಈ ಎರಡೂ ಹೈವೋಲ್ಟೇಜ್ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಡಲಿದೆಯಂತೆ.

source https://tv9kannada.com/photo-gallery/cricket-photos/asia-cup-2023-tournament-likely-to-be-played-in-pakistan-indias-matches-will-be-played-at-a-neutral-venue-vb-au48-541821.html

Views: 0

Leave a Reply

Your email address will not be published. Required fields are marked *