RCB 2023: ಆರ್​ಸಿಬಿ ತಂಡ ಸೇರಿಕೊಂಡ ಬಹುತೇಕ ಎಲ್ಲ ಆಟಗಾರರು: ದಿನೇಶ್ ಕಾರ್ತಿಕ್​ಗೆ ಅದ್ಧೂರಿ ಸ್ವಾಗತ

Dinesh Karthik RCB

ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 31 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದೆ. ನಾಲ್ಕು ವರ್ಷಗಳ ಬಳಿಕ ಅದ್ಧೂರಿ ಉದ್ಘಾಟನಾ ಸಮಾರಂಭ ಕೂಡ ಏರ್ಪಡಿಸಲಾಗಿದ್ದು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾಟ್ ಟೈಟಾನ್ಸ್ (CSK vs GT) ಮುಖಾಮುಖಿ ಆಗಲಿದೆ. ಪ್ರತಿ ಬಾರಿ ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುವ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ (RCB vs MI) ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯದ ಟಿಕೆಟ್ ಕೂಡ ಬಹುತೇಕ ಸೋಲ್ಡ್ ಔಟ್ ಆಗಿದೆ. ಇದರ ನಡುವೆ ಆರ್​ಸಿಬಿ ಕ್ಯಾಂಪ್​ಗೆ ಆಟಗಾರರು ಸೇರುತ್ತಿದ್ದಾರೆ.

ಈಗಾಗಲೇ ಆರ್​ಸಿಬಿಯ ಬಹುತೇಕ ಆಟಗಾರ ತಂಡವನ್ನು ಸೇರಿಕೊಂಡಿದ್ದು, ಸಿದ್ಧತೆ ಆರಂಭಿಸಿದ್ದಾರೆ. ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ಗುರುವಾರ ಬೆಂಗಳೂರಿನಲ್ಲಿ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ಇದರ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕಾರ್​ನಲ್ಲಿ ಬಂದ ಕಾರ್ತಿಕ್ ಅದ್ಧೂರಿ ಸ್ವಾಗತವನ್ನು ಸ್ವೀಕರಿಸಿದರು. ಐಪಿಎಲ್ 2022 ಮೆಗಾಹರಾಜಿನ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್‌ರನ್ನು ಆರ್​ಸಿಬಿ 5.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಬೆಲೆಗೆ ತಕ್ಕಂತೆ ಕಾರ್ತಿಕ್ ಕಳೆದ ಸೀಸನ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.

 

IPL 2023: 4 ವರ್ಷಗಳ ಬಳಿಕ ಐಪಿಎಲ್​ನಲ್ಲಿ ಉದ್ಘಾಟನಾ ಸಮಾರಂಭ: ನೃತ್ಯ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ?

ಅನ್​ಫಿಟ್ ಆಗಿರುವ ಗ್ಲೆನ್ ಮ್ಯಾಕ್ಸ್​ವೆಲ್:

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಕಾಣಿಸಿಕೊಂಡರೂ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. ಅಂದರೆ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಸೀಸ್ ಆಟಗಾರ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದಕ್ಕೆ ಮುಖ್ಯ ಕಾರಣ ಫಿಟ್​ನೆಸ್ ಸಮಸ್ಯೆ ಎಂಬುದನ್ನು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ತಿಳಿಸಿದ್ದಾರೆ. ಗ್ಲೆನ್ ಮ್ಯಾಕ್ಸ್​ವೆಲ್ ತುಸು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಎರಡನೇ ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ ಎಂದು ಸ್ಮಿತ್ ತಿಳಿಸಿದ್ದರು. ಇದೀಗ ಮ್ಯಾಕ್ಸಿ ಫಿಟ್​ನೆಸ್ ಸಮಸ್ಯೆ ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಆರ್​ಸಿಬಿ ವೆಬ್​ಸೈಟ್​ನಲ್ಲಿ ಟಿಕೆಟ್ ಮಾರಾಟ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯದ ಟಿಕೆಟ್ ಖರೀದಿಗೆ ಸಿಗುತ್ತಿದ್ದು ಬಹುತೇಕ ಸೋಲ್ಡ್ ಔಟ್ ಆಗಿದೆ. ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಮಾರಾಟ ನಡೆಯುತ್ತಿದೆ. ಆರಂಭಿಕ ಬೆಲೆ 2,310 ರೂ. ಯಿಂದ ಇದ್ದು 42,000 ರೂ. ವರೆಗಿನ ಟಿಕೆಟ್ ಖರೀದಿಗೆ ಲಭ್ಯವಿದೆ. ಈಗಾಗಲೇ ಕೆಇಐ ಸ್ಟ್ಯಾಂಡ್, ಬೋಟ್ ಸಿ ಸ್ಟ್ಯಾಂಡ್, ಪೂಮಾ ಬಿ ಸ್ಟ್ಯಾಂಡ್, ಫ್ಯಾನ್ ಟ್ಯಾರೆಸ್ ಎನ್ ಸೇರಿದಂತೆ ಬಹುತೇಕ ಮೈದಾನದ ಎಲ್ಲ ಮೂಲೆಗಳು ಭರ್ತಿ ಆಗಿದೆ. ಪಂದ್ಯದಿಂದ ಪಂದ್ಯಕ್ಕೆ ಟಿಕೆಟ್ ಬೆಲೆಯಲ್ಲಿ ಬದಲಾವಣೆ ಮಾಡಲಾಗಿದೆ.

ಆರ್​​ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಮೈಕೆಲ್ ಬ್ರೇಸ್​ವೆಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/dinesh-karthik-joined-his-indian-premier-league-franchise-royal-challengers-bangalore-rcb-for-ipl-2023-vb-au48-541838.html

Views: 0

Leave a Reply

Your email address will not be published. Required fields are marked *