
ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ (WPL 2023) ಅಂತಿಮ ಹಂತದತ್ತ ತಲುಪುತ್ತಿದೆ. ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ನೇರ ಫೈನಲ್ ಸ್ಥಾನ ಪಡೆದುಕೊಂಡಿದೆ. ಫೈನಲ್ನಲ್ಲಿ ಯಾವ ತಂಡ ಅವರನ್ನು ಎದುರಿಸಲಿದೆ ಎಂಬುದು ಇಂದು ನಿರ್ಧಾರವಾಗಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗಿವೆ. ಅಲಿಸ್ಸಾ ಹೀಲಿ ನೇತೃತ್ವದ ಯುಪಿ ಮೂರನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಿತು. ಲೀಗ್ನ ಕೊನೆಯ ಪಂದ್ಯದಲ್ಲಿ ಮುಂಬೈ ಎದುರು ಸೋತರೂ ವಾರಿಯರ್ಸ್ ಉತ್ತಮ ಪ್ರದರ್ಶನ ನೀಡಿತ್ತು. ಇಂದು ಮುಂಬೈ ವಿರುದ್ಧ ಫೈನಲ್ಗೆ ಪೈಪೋಟಿ ನಡೆಯಲಿದೆ. ಮುಂಬೈ ಇಂಡಿಯನ್ಸ್ ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನಿಡುವುದರೊಂದಿಗೆ ನೇರವಾಗಿ ಫೈನಲ್ ತಲುಪಲು ಪ್ರಬಲ ಸ್ಪರ್ಧಿಯಾಗಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತು 2ನೇ ಸ್ಥಾನ ಪಡೆದುಕೊಂಡಿತು. ಹೀಗಾಗಿ ಮುಂಬೈ ಎಲಿಮಿನೇಟರ್ ಪಂದ್ಯವನ್ನಾಡಬೇಕಾಯಿತು.
Views: 0