
ಚಿತ್ರದುರ್ಗ, (ಮಾ.25) : ಸಂಸ್ಥೆಯೊಂದಕ್ಕೆ ಹಣ ತುಂಬಲು ಕೊಂಡೊಯ್ಯುತ್ತಿದ್ದ ಅಂದಾಜು ಆರೂವರೆ ಲಕ್ಷ ರೂಪಾಯಿಗಳ (6.5 ಲಕ್ಷ) ನಗದನ್ನು ಹಾಡುಹಗಲೇ ದೋಚಿದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ಚಿತ್ರದುರ್ಗದಲ್ಲಿ ಹಾಡುಹಗಲೇ ಲಕ್ಷಾಂತರ ರೂಪಾಯಿ ಹಣ ದೋಚಿ ಪರಾರಿಯಾದ ಕಳ್ಳರು…! pic.twitter.com/N1J7abzH5Q
— suddione-kannada News (@suddione) March 25, 2023
ಇಲ್ಲಿನ ಐಯುಡಿಪಿ ಬಡಾವಣೆಯ 11 ನೇ ಕ್ರಾಸ್ ನಲ್ಲಿ ಶನಿವಾರ ಬೆಳಿಗ್ಗೆ 9 :30 ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಪ್ರಶಾಂತ್ ಎಂಬ ವ್ಯಕ್ತಿಯನ್ನು ಹಿಂಬಾಲಿಸಿ ಬೈಕ್ ಅಡ್ಡಗಟ್ಟಿ, ಚಾಕು ತೋರಿಸಿ ಆತನಲ್ಲಿದ್ದ 6.5 ಲಕ್ಷ ರೂಪಾಯಿಗಳ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಡಾಗ್ ಸ್ಕ್ವಾಡ್ ನೊಂದಿಗೆ ಬಡಾವಣೆಯ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
The post ಚಿತ್ರದುರ್ಗದಲ್ಲಿ ಹಾಡುಹಗಲೇ ಲಕ್ಷಾಂತರ ರೂಪಾಯಿ ಹಣ ದೋಚಿ ಪರಾರಿಯಾದ ಕಳ್ಳರು…! first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/raFJy6s
via IFTTT
Views: 0

