
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮಾ.25) : ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹ ಗೊಳಿಸಿರುವುದನ್ನು ಪ್ರತಿಭಟಿಸಿ ಶನಿವಾರ ನಗರದ ಓನಕೆ ಒಬವ್ವ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ದ ಘೊಷಣೆಗಳನ್ನು ಕೂಗುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಓನಕೆ ಒಬವ್ವ ವೃತ್ತವರೆಗೂ ಮೆರವಣಿಗೆಯನ್ನು ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣವನ್ನು ಮಾಡುತ್ತಿದೆ.
ರಾಹುಲ್ ಗಾಂಧಿಯವರು ಸತ್ಯವನ್ನು ಹೇಳುತ್ತಿದ್ದರು. ಅದನ್ನು ಸಹಿಸದ ಬಿಜೆಪಿ ರಾಹುಲ್ ರವರ ಮೇಲೆ ಗಾಧ ಪ್ರಹಾರವನ್ನು ಮಾಡಿ ಹೀನಾ ರಾಜಕೀಯವನ್ನು ಮಾಡುತ್ತಿದೆ, ಬಿಜೆಪಿಯವರ ಈ ಕೃತ್ಯದಿಂದ ರಾಹುಲ್ ರವರು ಹೆದರಬಾರದು ನಿಮ್ಮ ಜೊತೆಗೆ ನಾವು ಇದ್ದೇವೆ ಬಿಜೆಪಿಯವರು ಎಷ್ಟೇ ಈ ರೀತಿಯಾದ ಕೃತ್ಯವನ್ನು ಮಾಡಿದರು ಸಹಾ ಎದೆಗುಂದ ಬೇಡಿ ಎಂದು ಧೈರ್ಯವನ್ನು ತುಂಬಿದರು.
ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ವಿನಾಕಾರಣ ರಾಹುಲ್ ಗಾಂಧಿಯವರ ಮೇಲೆ ಕಿಡಿ ಕಾರುತ್ತಿದೆ. ಇದರಿಂದ ಕಾಂಗ್ರೆಸ್ ಹೆದರುವುದಿಲ್ಲ, ಇಂತಹ ನೂರಾರು ಆಂತಕಗಳು ಬಂದರು ಸಹಾ ಕಾಂಗ್ರೆಸ್ ಎದುರಿಸುವ ಶಕ್ತಿ ನಮ್ಮಲ್ಲಿ ಇದೆ.
ರಾಹುಲ್‍ರವರು ಯಾವುದೇ ಕಾರಣದಿಂದಲೂ ಸಹಾ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬಾರದು ಎಂದು ಧೈರ್ಯವನ್ನು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೈಲಾರಪ್ಪ, ಮುರುಳಾರಾಧ್ಯ, ಚೋಟು, ಪ್ರಕಾಶ್‍ರಾಮ ನಾಯ್ಕ್, ಎನ್,ಡಿ.ಕುಮಾರ್, ಬಾಲಕೃಷ್ಣ ಯಾದವ್, ನಾಗರಾಜ್, ಸೇರಿದಂತೆ ಇತರರು ಭಾಗವಹಿಸಿದ್ದರು.
The post ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/rsKTivJ
via IFTTT
Views: 0