
16ನೇ (IPL 2023) ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು 5 ದಿನಗಳು ಮಾತ್ರ ಉಳಿದಿವೆ. ಇಷ್ಟು ದಿನ ಟೀಂ ಇಂಡಿಯಾವನ್ನು (Team India) ಪ್ರತಿನಿಧಿಸಿದ ಭಾರತದ ಸ್ಟಾರ್ ಕ್ರಿಕೆಟಿಗರು ಐಪಿಎಲ್ನಲ್ಲಿ ಪರಸ್ಪರ ಎದುರು ಬದುರಗಾಲು ಸಿದ್ಧರಾಗಿದ್ದಾರೆ. ಆಸೀಸ್ ವಿರುದ್ಧ ಸರಣಿ ಆಡಿ ಮುಗಿಸಿದ ಟೀಂ ಇಂಡಿಯಾ ಆಟಗಾರರು ಐಪಿಎಲ್ಗೆ ತಯಾರಾಗುತ್ತಿದ್ದು, ಒಬ್ಬೊಬ್ಬರಾಗಿ ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಅವರಲ್ಲಿ ಟೀಂ ಇಂಡಿಯಾದ ಮಾಜಿ ವಿರಾಟ್ ಕೊಹ್ಲಿ (Virat Kohli) ಕೂಡ ಸೇರಿದ್ದು, ಏಕದಿನ ಸರಣಿ ಮುಗಿಸಿ, ಕುಟುಂಬದೊಂದಿಗೆ 3 ದಿನಗಳ ವಿಶ್ರಾಂತಿ ಪಡೆದ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಶಿಬಿರವನ್ನು ಸೇರಲು ಮನೆಯಿಂದ ತೆರಳಿದ್ದಾರೆ. ಹೀಗಾಗಿ ತಂಡ ಸೇರಿಕೊಳ್ಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೊಹ್ಲಿಯನ್ನು ನೋಡಿದ ಅಭಿಮಾನಿಗಳಿಗೆ ಅಚ್ಚರಿ ಎದುರಾಗಿದೆ. ಏಕಂದರೆ ಐಪಿಎಲ್ಗೂ ಮುನ್ನ ಕೊಹ್ಲಿ ಹೊಸ ಹೇರ್ ಸ್ಟೈಲ್(Hairstyle) ಮಾಡಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಬಲಗೈ ಮೇಲೆ ಹೊಸ ಟ್ಯಾಟೂ (Tattoo) ಕೂಡ ಹಾಕಿಸಿಕೊಂಡಿದ್ದಾರೆ. ಇದೀಗ ಕೊಹ್ಲಿಯ ಹೊಸ ಟ್ಯಾಟೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೊಹ್ಲಿ ಮೈಮೇಲೆ ಒಂದು ಡಜನ್ ಟ್ಯಾಟೂ
ಆರ್ಸಿಬಿ ಶಿಬಿರಕ್ಕೆ ತೆರಳುವ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಕೊಹ್ಲಿ ಸೆರೆ ಸಿಕ್ಕಿದ್ದರು. ಇದರಲ್ಲಿ ವಿರಾಟ್ ತನ್ನ ಬಲಗೈ ಮೇಲೆ ಹಾಕಿಸಿಕೊಂಡಿರುವ ಹೊಸ ಟ್ಯಾಟೂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರನ್ನು ಆಕರ್ಷಿಸುತ್ತಿದೆ. ಈ ಟ್ಯಾಟ್ಗೂ ಮುನ್ನ ಕೊಹ್ಲಿ ಮೈಮೇಲೆ ಒಟ್ಟು 11 ಟ್ಯಾಟೂಗಳಿದ್ದವು. ಇದೀಗ ಕೊಹ್ಲಿ ಹೊಸದಾಗಿ ಟ್ಯಾಟೂ ಹಾಕಿಸಿಕೊಂಡಿದ್ದು, ಒಟ್ಟಾರೆ ಕೊಹ್ಲಿ ಮೈಮೇಲೆ ಒಂದು ಡಜನ್ ಟ್ಯಾಟೂಗಳಿದ್ದಂತ್ತಾಗಿದೆ. ಅಲ್ಲದೆ ಕೊಹ್ಲಿಯ ಮೈಮೇಲಿರುವ ಪ್ರತಿಯೊಂದು ಟ್ಯಾಟೂಗೂ ಒಂದೊಂದು ಅರ್ಥವಿದ್ದು, ಈಗ ಕೊಹ್ಲಿ ಹೊಸದಾಗಿ ಹಾಕಿಸಿಕೊಂಡಿರುವ ಹೊಸ ಟ್ಯಾಟೂದ ಅರ್ಥ ತಿಳಿಯಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
The grand entry of Virat Kohli
with a new tattoo in his
, Suggest what it means ??pic.twitter.com/nNn8Xa7W5N
— Ayush
![]()
(@vkkings007) March 25, 2023
Virat Kohli got a new tattoo on his right hand
pic.twitter.com/0JybTPGdKH
— Pari (@BluntIndianGal) March 25, 2023
ಹೊಸ ಟ್ಯಾಟೂ ಜೊತೆಗೆ, ಕೊಹ್ಲಿ ಹೊಸ ಹೇರ್ ಸ್ಟೈಲ್ ಕೂಡ ಮಾಡಿಸಿಕೊಂಡಿದ್ದು, ಹಿಂದಿಕ್ಕಿಂತಲೂ ಕೊಹ್ಲಿ ಭಿನ್ನವಾಗಿ ಕಾಣಿಸುತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಮೂರನೇ ಏಕದಿನ ಪಂದ್ಯದ ನಂತರ ಮುಂಬೈಗೆ ಮರಳಿದ ವಿರಾಟ್ ಅಲ್ಲಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.
The wait is over and Virat Kohli is in Bengaluru!
Happy HOMECOMING, KING!
#PlayBold #ನಮ್ಮRCB #IPL2023 @imVkohli pic.twitter.com/13rZ1oHWfz
— Royal Challengers Bangalore (@RCBTweets) March 25, 2023
ಹ್ಯಾಪಿ ಹೋಮ್ ಕಮಿಂಗ್ ಕಿಂಗ್
ಸದ್ಯ ಆರ್ಸಿಬಿ ಶಿಬಿರನ್ನು ವಿರಾಟ್ ಕೊಹ್ಲಿ ತಲುಪಿದ್ದು, ಕೊಹ್ಲಿ ಎಂಟ್ರಿಯನ್ನು ಖಚಿತಪಡಿಸಿರುವ ಫ್ರಾಂಚೈಸಿ, ಕೊಹ್ಲಿಯ ಫೋಟೋಗಳನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ, ‘ಕಾಯುವಿಕೆ ಅಂತ್ಯಗೊಂಡಿದೆ, ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಹ್ಯಾಪಿ ಹೋಮ್ ಕಮಿಂಗ್ ಕಿಂಗ್!’ ಎಂದು ಬರೆದುಕೊಂಡಿದೆ. ಆರ್ಸಿಬಿ ಹಂಚಿಕೊಂಡಿರುವ ಕೊಹ್ಲಿಯ ಫೋಟೋದಲ್ಲಿ ಅವರು ಹಾಕಿಸಿಕೊಂಡಿರುವ ಹೊಸ ಟ್ಯಾಟೋವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Views: 0
with a new tattoo in his
, Suggest what it means ??

(@vkkings007)
