IPL 2023: RCB ತಂಡಕ್ಕೆ ಮತ್ತೊಂದು ಆಘಾತ: ಮೊದಲಾರ್ಧದಿಂದ ಯುವ ಆಟಗಾರ ಔಟ್

IPL 2023: ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿ (RCB) ತಂಡಕ್ಕೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಸಂಪೂರ್ಣ ಫಿಟ್​ ಆಗಿಲ್ಲ ಎಂಬ ಸುದ್ದಿ ಬೆನ್ನಲ್ಲೇ, ಇದೀಗ ಯುವ ಆಟಗಾರನೊಬ್ಬ ಐಪಿಎಲ್​ನ ಮೊದಲಾರ್ಧದಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.ಹೌದು, ಆರ್​ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ರಜತ್ ಪಾಟಿದಾರ್ ಪಾದದ ನೋವಿನಿಂದ ಬಳಲುತ್ತಿದ್ದು, ಮೂರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಅವರು ಐಪಿಎಲ್​ನ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ.ರಜತ್ ಪಾಟಿದಾರ್ ಸದ್ಯ ಬೆಂಗಳೂರಿನ ಎನ್‌ಸಿಎಯಲ್ಲಿ ಶುಶ್ರೂಷೆಯಲ್ಲಿದ್ದಾರೆ. ಅವರ MRI ಸ್ಕ್ಯಾನ್ ವರದಿಯಂತೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಆರ್​ಸಿಬಿ ತಂಡದ ಯುವ ದಾಂಡಿಗ ದ್ವಿತೀಯಾರ್ಧದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.ಪಾಟಿದಾರ್ ಅವರ ಅನುಪಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟಿಂಗ್ ಸಂಯೋಜನೆಯಲ್ಲಿ ಬದಲಾವಣೆ ಕಂಡು ಬರಬಹುದು. ಏಕೆಂದರೆ ಕಳೆದ ಸೀಸನ್​ನಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ದ ರಜತ್ ಒಟ್ಟು 333 ರನ್​ ಬಾರಿಸಿದ್ದರು. ಅಲ್ಲದೆ ಆರ್​ಸಿಬಿ ಪರ ಅತ್ಯಧಿಕ ರನ್ ಕಲೆಹಾಕಿದ ಮೂರನೇ ಆಟಗಾರನಾಗಿ ಹೊರಹೊಮ್ಮಿದ್ದರು.ಇದೀಗ ಪಾದದ ನೋವಿನಿಂದ ಬಳಲುತ್ತಿರುವ ರಜತ್ ಪಾಟಿದಾರ್ ಅವರನ್ನು ಆರ್​ಸಿಬಿ ದ್ವಿತಿಯಾರ್ಧಕ್ಕಾಗಿ ಉಳಿಸಿಕೊಳ್ಳಲಿದೆಯಾ  ಅಥವಾ ಬದಲಿ ಆಟಗಾರನನ್ನು ಆಯ್ಕೆ ಮಾಡಲಿದೆಯಾ ಎಂಬುದೇ ಪ್ರಶ್ನೆ.ಒಟ್ಟಿನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಫಿಟ್​ನೆಸ್ ಸಮಸ್ಯೆ ನಡುವೆ ಇದೀಗ ರಜತ್ ಪಾಟಿದಾರ್ ಅವರ ಅಲಭ್ಯತೆಯು ಇದೀಗ ಆರ್​ಸಿಬಿ ಫ್ರಾಂಚೈಸಿಯ ಚಿಂತೆಯನ್ನು ಹೆಚ್ಚಿಸಿದೆ.RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ಮೈಕೆಲ್ ಬ್ರೇಸ್​ವೆಲ್, ರಜತ್ ಪಾಟಿದಾರ್ (ಗಾಯಾಳು).

source https://tv9kannada.com/photo-gallery/cricket-photos/ipl-2023-rajat-patidar-could-miss-first-half-of-ipl-kannada-news-zp-au50-543108.html

Views: 0

Leave a Reply

Your email address will not be published. Required fields are marked *