ಬೆಂಗಳೂರು 18ಕೆ ಮ್ಯಾರಥಾನ್​ಗೆ ಚಾಲನೆ: ನಮಸ್ಕಾರ ಬೆಂಗಳೂರು ಎಂದ ವಿರಾಟ್ ಕೊಹ್ಲಿ, ಇಲ್ಲಿದೆ ಫೋಟೋ ಝಲಕ್​

ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್​ ಬಳಿ 18ಕೆ ಮ್ಯಾರಥಾನ್ ನಡೆದಿದೆ. ಇದಕ್ಕೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಚಾಲನೆ ನೀಡಿದರು.ಬೆಂಗಳೂರು 18ಕೆ ಮ್ಯಾರಥಾನ್​ಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಚಾಲನೆ ನೀಡಿದರು. 18 ಕಿಲೋಮೀಟರ್,​​ 10 ಕಿ.ಮೀ. ಮತ್ತು 5 ಕಿ.ಮೀ. ಓಟಕ್ಕೆ ಚಾಲನೆ ನೀಡಲಾಯಿತು.ಹೊಸಕೆರೆಹಳ್ಳಿ ಟೋಲ್​ ಬಳಿ ಸಿದ್ಧವಾಗಿದ್ದ ವೇದಿಕೆ ಮೇಲೆ ಪ್ಲಾಗ್ ಆಫ್ ಮಾಡುವ ಮೂಲಕ ಚಾಲನೆ ನೀಡಲಾಯಿತು.   ನಮಸ್ಕಾರ ಬೆಂಗಳೂರು ಎಂದು ಮಾತು ಪ್ರಾರಂಭಿಸಿದ ವಿರಾಟ್ ಕೊಹ್ಲಿ, ಇಷ್ಟು ಜನ ಸೇರಿರೋದು ನೋಡಿದ್ರೆ ತುಂಬಾ ಖುಷಿಯಾಗುತ್ತೆ. ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದರು. ವಿರಾಟ್ ಕೊಹ್ಲಿ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಕೊಹ್ಲಿ ಆಗಮಿಸುತ್ತಿದ್ದಂತೆ ಆಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.ಬೆಂಗಳೂರು 18ಕೆ ಮ್ಯಾರಥಾನ್​ನಲ್ಲಿ ನೂರಾರು ಜನ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

source https://tv9kannada.com/photo-gallery/virat-kohli-in-bangalore-18k-marathon-photos-bengaluru-sports-news-ayb-au7-543144.html

Views: 0

Leave a Reply

Your email address will not be published. Required fields are marked *