
ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್ ಗಾಗಿ ಇಡಿ ಜಗತ್ತೇ ಕಾಯ್ತಾ ಇದೆ. ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಮಾರ್ಚ್ 31ರಂದು ಚಾಲನೆ ಸಿಗಲಿದೆ. ಮೊದಲ ದಿನ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೆಣೆಸಾಡಲಿದೆ. ಆದರೆ ಅದಕ್ಕೂ ಮುನ್ನ ಬೆಂಗಳೂರಿಗೆ ಟ್ರೋಫಿ ಎಂಟ್ರಿಕೊಟ್ಟಿದೆ.
ಏಪ್ರಿಲ್ 2ಕ್ಕೆ ಆರ್ಸಿಬಿ ಮ್ಯಾಚ್ ನಡೆಯಲಿದೆ. ಈಗಾಗಲೇ ಆಟಗಾರರೆಲ್ಲ ಆರ್ಸಿಬಿ ತಂಡ ಸೇರಿಕೊಂಡಿದ್ದು, ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಇಂದು ಐಪಿಎಲ್ ಟ್ರೋಫಿ ಸಿಲಿಕಾನ್ ಸಿಟಿಗೆ ಬಂದಿದ್ದು, ಸಂಜೆ ತನಕ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಇಂದು ಬೆಳಗ್ಗೆಯೇ ಸಿಲಿಕಾನ್ ಸಿಟಿಗೆ ಟ್ರೋಫಿಯ ಆಗಮನವಾಗಿದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಪ್ರದರ್ಶನ ಮಾಡಲಾಗುತ್ತಿದೆ.
ಬೆಳಿಗ್ಗೆ 5 ಗಂಟೆ ಯಿಂದ ನೈಸ್ ಟೋಲ್ ಗೇಟ್, ಹೊಸಕೆರೆ ಹಾಳುವಿನಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಟ್ರೋಪಿಯನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ನಂತರ ಮೈಯಾಸ್ ಜಯನಗರದಲ್ಲಿ ಮಧ್ಯಾಹ್ನ 1 ರಿಂದ 3 ಗಂಟೆ ವರೆಗೆ, ಕೋರಮಂಗಲದ ಫೋರಂ ಮಾಲ್ ನಲ್ಲಿ ಸಂಜೆ 5 ರಿಂದ 8ರವರೆಗೆ, ಅಂತಿಮವಾಗಿ 9 ರಿಂದ 11 ಗಂಟೆಗೆ ನಗರದ ವಿಶೇಷ ಸ್ಥಳದಲ್ಲಿ ಐಪಿಎಲ್ ಟ್ರೋಫಿಯನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ.
The post ಮುಂಬೈ, ಚೆನ್ನೈ ಸುತ್ತಾಡಿ ಬೆಂಗಳೂರಿಗೆ ಬಂತು IPL ಟ್ರೋಫಿ : ಸಂಜೆವರೆಗೂ ಪ್ರದರ್ಶನ.. ನೀವೂ ಕಣ್ತುಂಬಿಕೊಳ್ಳಬಹುದು first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/jhTn6D4
via IFTTT
Views: 0