
ಚಿತ್ರದುರ್ಗ, (ಮಾ.26) : ನಗರದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಮಾರ್ಚ್ 27 ರಂದು (ಸೋಮವಾರ) ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗ ಗೀತೆಗಳು, ರಂಗ ಸನ್ಮಾನ, ರಂಗ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ರಂಗ ವಿಮರ್ಶಕ ಡಾ.ವಿ.ಬಸವರಾಜ ಉದ್ಘಾಟಿಸುವರು. ಉಪನ್ಯಾಸಕ ಡಾ.ಮೋಹನ್.ಕೆ ಅವರು ಶಿಕ್ಷಣದಲ್ಲಿ ರಂಗ ಕಲೆ ಕುರಿತು ಉಪನ್ಯಾಸ ನೀಡುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವೃತ್ತಿ ರಂಗಭೂಮಿ ಕಲಾವಿದೆ ಶಾಂತ ಕುಮಾರಿ ಸಿದ್ಧೇಶ್ವರಿ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ಚೆನ್ನಬಸಪ್ಪ ಹಾಗೂ ಗಂಗಾಧರ ತಂಡ ರಂಗ ಗೀತೆಗಳನ್ನು ಪ್ರಸ್ತುತ ಪಡಿಸುವರು ಎಂದು ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The post ಮಾ.27 ರಂದು ಲಿಲ್ ಬ್ರೂಕ್ಸ್ ಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/oVq0Wz8
via IFTTT
Views: 0
