ಪಂತ್​ರನ್ನು ಭೇಟಿಯಾದ ರೈನಾ, ಭಜ್ಜಿ, ಶ್ರೀಶಾಂತ್; ಈಗ ಹೇಗಿದೆ ರಿಷಬ್ ಆರೋಗ್ಯ? ಫೋಟೋ ನೋಡಿ

ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾರು ಅಪಘಾತಕ್ಕೀಡಾಗಿ ತೀವ್ರ ಇಂಜುರಿಗೊಳಗಾಗಿದ್ದ  ಟೀಂ ಇಂಡಿಯಾದ ಯಂಗ್ ಸ್ಟಾರ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಸದ್ಯ ಶಸ್ತ್ರಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.ತೀವ್ರ ಗಾಯಗಳಿಂದ ನಲುಗಿ ಹೋಗಿದ ಪಂತ್​ಗೆ ಕಾಲು ಮುರಿತವಾಗಿತ್ತು. ಇದೀಗ ಚಿಕಿತ್ಸೆಯ ಬಳಿಕ ಮನೆಯಲ್ಲಿ ನಿಧಾನವಾಗಿ ನಡೆಯಲಾರಂಭಿಸಿರುವ ಪಂತ್ ಕೆಲವು ದಿನಗಳ ಹಿಂದೆ ತಾನು ನಡೆದಾಡುವ ಹಾಗೂ ಸ್ವಿಮಿಂಗ್​ಫುಲ್​ ಒಳಗೆ ನಡೆದಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.ಸದ್ಯ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಪಂತ್​ರನ್ನು ಗೆಳೆಯರು ಹಾಗೂ ಸಹ ಆಟಗಾರರು ಭೇಟಿ ನೀಡಿ ಕುಶಲೋಪರಿ ವಿಚಾರಿಸುತ್ತಿದ್ದಾರೆ. ಇತ್ತೀಚೆಗೆ ಸುರೇಶ್ ರೈನಾ, ಹರ್ಭಜನ್ ಸಿಂಗ್ ಮತ್ತು ಎಸ್ ಶ್ರೀಶಾಂತ್ ಗಾಯಗೊಂಡಿರುವ ರಿಷಬ್ ಪಂತ್ ಅವರನ್ನು ಭೇಟಿ ಮಾಡಿದ್ದರು.ಭೇಟಿಯ ಬಳಿಕ ಪಂತ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಪಂತ್ ನಗು ಮುಖದಲ್ಲಿ ಕಾಣಿಸಿಕೊಂಡಿದ್ದಾರೆ. ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಶ್ರೀಶಾಂತ್ ಕೂಡ ಅವರೊಂದಿಗೆ ಕುಳಿತು ನಗುತ್ತಿರುವುದನ್ನು ಕಾಣಬಹುದಾಗಿದೆ.ಕೆಲವು ದಿನಗಳ ಹಿಂದೆ ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಭೇಟಿಯಾಗಿ ರಿಷಭ್ ಆರೋಗ್ಯ ವಿಚಾರಿಸಿದ್ದರು.

source https://tv9kannada.com/photo-gallery/cricket-photos/suresh-raina-harbhajan-singh-and-sreesanth-met-rishabh-pant-psr-au14-543375.html

Views: 0

Leave a Reply

Your email address will not be published. Required fields are marked *