WPL Prize Money: ಪಿಎಸ್​ಎಲ್​ಗಿಂತ ಎರಡು ಪಟ್ಟು; ಚಾಂಪಿಯನ್​ಗೆ ಸಿಗುವ ಬಹುಮಾನವೆಷ್ಟು ಗೊತ್ತಾ?

WPL final 2023 know about WPL Prize Money in kannada

ಬ್ರಬೋರ್ನ್ ಸ್ಟೇಡಿಯಂ (Brabourne Stadium) ಇಂದು ರಾತ್ರಿಯ ಮೆಗಾ ಪಂದ್ಯಕ್ಕೆ ಸಜ್ಜಾಗಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ಉದ್ಘಾಟನಾ ಆವೃತ್ತಿಯ ಫೈನಲ್‌ನಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ (Delhi Capitals vs Mumbai Indians) ಮುಖಾಮುಖಿಯಾಗಲಿವೆ. ಡಬ್ಲ್ಯುಪಿಎಲ್ (WPL) ಆರಂಭದಿಂದಲೂ ಎರಡು ತಂಡಗಳು ಅದ್ಭುತ ಪ್ರದರ್ಶನ ತೋರಿವೆ. ದೆಹಲಿ ಹಾಗೂ ಮುಂಬೈ ತಂಡಗಳ ಹಿಂದಿನ ಪ್ರದರ್ಶನಗಳನ್ನು ಗಮನಿಸಿದರೆ ಭಾನುವಾರದ ಮೆಗಾ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುವ ಸಾಧ್ಯತೆ ಇದೆ. ಅಂತಿಮವಾಗಿ ಗೆದ್ದ ತಂಡಕ್ಕೆ ಭಾರೀ ಬಹುಮಾನವನ್ನು ನೀಡಲು ಮಂಡಳಿ ನಿರ್ಧರಿಸಿದೆ. ಐಪಿಎಲ್‌ನಂತೆ (IPL), ಈ ಡಬ್ಲ್ಯುಪಿಎಲ್ ವಿಜೇತ ತಂಡಕ್ಕೂ ಕೋಟಿ ಗಟ್ಟಲೆ ಹಣ ಸಿಗಲಿದೆ. ಮಹಿಳಾ ಪ್ರೀಮಿಯರ್ ಲೀಗ್​ನ ಒಟ್ಟು ಬಹುಮಾನದ ಮೊತ್ತ 10 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಇದು ಪಾಕಿಸ್ತಾನ್ ಸೂಪರ್ ಲೀಗ್ (PSL) ನಲ್ಲಿ ನೀಡುವ ಬಹುಮಾನದ ಹಣಕ್ಕಿಂತ ದುಪ್ಪಟ್ಟು. ಹಾಗಿದ್ದರೆ ಚಾಂಪಿಯನ್ ತಂಡಕ್ಕೆ ಸಿಗುವುದೇಷ್ಟು? ರನ್ನರ್​ಅಪ್​ಗೆ ಸಿಗುವುದೇಷ್ಟು? ಇಲ್ಲಿದೆ ವಿವರ.

ಸುಮಾರು 3.6 ಕೋಟಿ

ಕೆಲವು ದಿನಗಳ ಹಿಂದೆ, ಪಾಕಿಸ್ತಾನ್ ಸೂಪರ್ ಲೀಗ್ ಫೈನಲ್‌ನಲ್ಲಿ ಲಾಹೋರ್ ಖಲಂದರ್ಸ್ ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಶಾಹೀನ್ ಅಫ್ರಿದಿ ನೇತೃತ್ವದ ಈ ತಂಡಕ್ಕೆ ಬಹುಮಾನವಾಗಿ 120 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ನೀಡಲಾಯಿತು. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 3.6 ಕೋಟಿ ಆಗುತ್ತದೆ. ಅಲ್ಲದೆ, ರನ್ನರ್ ಅಪ್ ಆದ ಮೊಹಮ್ಮದ್ ರಿಜ್ವಾನ್ ನೇತೃತ್ವದ ಮುಲ್ತಾನ್ ಸುಲ್ತಾನ್ ತಂಡಕ್ಕೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 1.5 ಕೋಟಿ ರೂ. ಬಹುಮಾನ ನೀಡಲಾಯಿತು.

ಪಂತ್​ರನ್ನು ಭೇಟಿಯಾದ ರೈನಾ, ಭಜ್ಜಿ, ಶ್ರೀಶಾಂತ್; ಈಗ ಹೇಗಿದೆ ರಿಷಬ್ ಆರೋಗ್ಯ? ಫೋಟೋ ನೋಡಿ

ಆದರೆ ನಾವು ಮಹಿಳಾ ಪ್ರೀಮಿಯರ್ ಲೀಗ್ ಹರಾಜನ್ನು ನೋಡಿದರೆ, ಭಾರತದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 3.4 ಕೋಟಿ ನೀಡಿತ್ತು. ಇದರಿಂದಾಗಿ ಪಾಕಿಸ್ತಾನ ಸೂಪರ್ ಲೀಗ್‌ನ ವಿಜೇತ ತಂಡ ಪಡೆಯುವ ಬಹುಮಾನದ ಮೊತ್ತವು ಮಹಿಳಾ ಐಪಿಎಲ್ ಹರಾಜಿನಲ್ಲಿ ಪಡೆದ ಬಹುಮಾನದ ಮೊತ್ತಕ್ಕೆ ಸಮನಾಗಿದೆ. ಬಿಸಿಸಿಐಗಿಂತ ಪಿಸಿಬಿ ಆರ್ಥಿಕವಾಗಿ ಹಿಂದುಳಿದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಸಾಕ್ಷಿ ಈ ಪಾಕಿಸ್ತಾನ್ ಸೂಪರ್ ಲೀಗ್‌ನ ಬಹುಮಾನದ ಹಣ.

6 ಕೋಟಿ ರೂಪಾಯಿ

ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನ ವಿಜೇತ ತಂಡಕ್ಕೆ 6 ಕೋಟಿ ರೂ.ಸಿಗಲಿದೆ. ಅಂದರೆ, ದೆಹಲಿ ಅಥವಾ ಮುಂಬೈ ಈ ಎರಡರಲ್ಲಿ ಒಂದು ತಂಡಕ್ಕೆ 6 ಕೋಟಿ ರೂಪಾಯಿ ಸಿಗಲಿದೆ. ಇದು ಐಪಿಎಲ್‌ನ ಮೊದಲ ಆವೃತ್ತಿಯ ವಿಜೇತ ತಂಡವಾದ ರಾಜಸ್ಥಾನ್ ರಾಯಲ್ಸ್ ಪಡೆದ ಬಹುಮಾನಕ್ಕಿಂತ ಹೆಚ್ಚು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನ ಚಾಂಪಿಯನ್‌ ಆಗಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 4.8 ಕೋಟಿ ರೂ. ಬಹುಮಾನ ನೀಡಲಾಗಿತ್ತು. ಚಾಂಪಿಯನ್​ಗಳಿಗೆ 6 ಕೋಟಿ ಸಿಕ್ಕರೆ, ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್‌ನ ರನ್ನರ್ ಅಪ್ ತಂಡಕ್ಕೆ 3 ಕೋಟಿ ರೂಪಾಯಿ ಸಿಗಲಿದೆ. ಹಾಗೆಯೇ ಟೂರ್ನಿಯನ್ನು ಮೂರನೇ ಸ್ಥಾನದಲ್ಲಿ ಮುಗಿಸಿದ ಯುಪಿ ವಾರಿಯರ್ಸ್ ತಂಡಕ್ಕೆ 1 ಕೋಟಿ ರೂಪಾಯಿ ನಗದು ಬಹುಮಾನ ಸಿಗಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wpl-final-2023-know-about-wpl-prize-money-in-kannada-psr-au14-543426.html

Views: 0

Leave a Reply

Your email address will not be published. Required fields are marked *