IPL 2023: ಐಪಿಎಲ್​ನಿಂದ ಅತ್ಯಧಿಕ ಮೊತ್ತ ಸಂಪಾದಿಸಿದ ಆಟಗಾರ ಯಾರು ಗೊತ್ತಾ?

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 15 ವರ್ಷಗಳೇ ಕಳೆದಿವೆ. 2008 ರಿಂದ ಆರಂಭವಾಗಿದ್ದ ಈ ಟೂರ್ನಿಯಲ್ಲಿ ಇದುವರೆಗೆ ಸುಮಾರು 300 ಕ್ಕೂ ಅಧಿಕ ಆಟಗಾರರು ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರು ಲಕ್ಷ ಸಂಪಾದಿಸಿದರೆ, ಮತ್ತೆ ಕೆಲವರು ಕೋಟಿ ದುಡಿದಿದ್ದಾರೆ.ಹೀಗೆ ಐಪಿಎಲ್ ಇತಿಹಾಸದಲ್ಲಿ 100 ಕೋಟಿ ರೂ.ಗೂ ಅಧಿಕ ಮೊತ್ತ ಗಳಿಸಿದವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ಇನ್ನು ಐಪಿಎಲ್ ಮೂಲಕ ಅತ್ಯಧಿಕ ಕೋಟಿ ಸಂಪಾದಿಸಿದ ಟಾಪ್-5 ಪಟ್ಟಿಯಲ್ಲಿ ಏಕೈಕ ವಿದೇಶಿ ಆಟಗಾರನೂ ಇಲ್ಲ ಎಂಬುದು ವಿಶೇಷ. ಕುತೂಹಲಕಾರಿ ವಿಷಯ ಎಂದರೆ ಹೀಗೆ ನೂರೈವತ್ತಕ್ಕೂ ಅಧಿಕ ಕೋಟಿ ಗಳಿಸಿರುವ ಆಟಗಾರರಲ್ಲಿ ಮೂವರು ಇನ್ನೂ ಕೂಡ ಐಪಿಎಲ್​ನಲ್ಲಿ ಮುಂದುವರೆದಿದ್ದಾರೆ. ಹೀಗಾಗಿ ಮುಂಬರುವ ಸೀಸನ್​ಗಳ ಮೂಲಕ ಅವರ ಕೋಟಿ ಸಂಪಾದನೆ 200 ಕೋಟಿ ರೂ. ತಲುಪಿದರೂ ಅಚ್ಚರಿಪಡಬೇಕಿಲ್ಲ. ಹಾಗಿದ್ರೆ ಐಪಿಎಲ್​ನಲ್ಲಿ 100 ಕೋಟಿಗಳಿಸಿದ 7 ಆಟಗಾರರು ಯಾರೆಲ್ಲಾ ಎಂದು ನೋಡೋಣ...1- ರೋಹಿತ್ ಶರ್ಮಾ: ಐಪಿಎಲ್​ನಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿರುವ ರೋಹಿತ್ ಶರ್ಮಾ ಇದುವರೆಗೆ 178.6 ಕೋಟಿ ರೂ. ಪಡೆದಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಸಂಭಾವನೆ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.2- ಮಹೇಂದ್ರ ಸಿಂಗ್ ಧೋನಿ: ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಪುಣೆ ಸೂಪರ್ ಜೈಂಟ್ಸ್ ಪರ ಆಡಿರುವ ಮಹೇಂದ್ರ ಸಿಂಗ್ ಧೋನಿ ಒಟ್ಟು 176.84 ಕೋಟಿ ಪಡೆಯುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.3- ವಿರಾಟ್ ಕೊಹ್ಲಿ: ಐಪಿಎಲ್​ ಆರಂಭದಿಂದ ಆರ್​ಸಿಬಿ ಪರ ಮಾತ್ರ ಆಡುತ್ತಾ ಬಂದಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ ಇದುವರೆಗೆ ಐಪಿಎಲ್​ ಮೂಲಕ 173.2 ಕೋಟಿ ಪಡೆದಿದ್ದಾರೆ.4- ಸುರೇಶ್ ರೈನಾ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದ ಸುರೇಶ್ ರೈನಾ ಐಪಿಎಲ್ ಮೂಲಕ ಒಟ್ಟು 110 ಕೋಟಿ ಸಂಪಾದಿಸಿದ್ದಾರೆ.5- ರವೀಂದ್ರ ಜಡೇಜಾ: ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಲಯನ್ಸ್ ಪರ ಆಡಿರುವ ರವೀಂದ್ರ ಜಡೇಜಾ ಒಟ್ಟು ಪಡೆದಿರುವ ಮೊತ್ತ 109 ಕೋಟಿ ರೂ.6- ಸುನಿಲ್ ನರೈನ್: ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನರೈನ್ ಇದುವರೆಗೆ ಪಡೆದಿರುವ ಮೊತ್ತ 107.2 ಕೋಟಿ ರೂ.7- ಎಬಿ ಡಿವಿಲಿಯರ್ಸ್: ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಹಾಗೂ ಆರ್​ಸಿಬಿ ಪರ ಆಡಿರುವ ಎಬಿಡಿ ಐಪಿಎಲ್​ ಮೂಲಕ ಒಟ್ಟು 102.5 ಕೋಟಿ ಸಂಪಾದಿಸಿದ್ದಾರೆ.ಈ ಏಳು ಆಟಗಾರರನ್ನು ಹೊರತುಪಡಿಸಿ ಐಪಿಎಲ್​ನಲ್ಲಿ ಬೇರೆ ಯಾವುದೇ ಆಟಗಾರನು 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಪಡೆದಿಲ್ಲ.

source https://tv9kannada.com/photo-gallery/cricket-photos/ipl-2023-ipl-players-have-earned-100-crore-plus-salary-kannada-news-zp-au50-543532.html

Views: 0

Leave a Reply

Your email address will not be published. Required fields are marked *