WPL 2023 Final: ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಪರ್ಪಲ್, ಆರೆಂಜ್ ಕ್ಯಾಪ್ ಯಾರಿಗೆ ಸಿಕ್ತು?, ಎಮರ್ಜಿಂಗ್ ಪ್ಲೇಯರ್ ಯಾರು?

WPL 2023 Award List

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದಿದೆ. ಹರ್ಮನ್​ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ವಿರುದ್ಧ ಎಂಐ (DC vs MI) 7 ವಿಕೆಟ್​ಗಳಿಂದ ಗೆದ್ದು ಬೀಗಿತು. ಕೊನೆಯ ಓವರ್ ವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಅಂತಿಮವಾಗಿ ಮುಂಬೈ ಗೆಲುವಿನ ನಗೆ ಬೀರಿತು. ನ್ಯಾಟ್ ಸೀವರ್ ಬ್ರಂಟ್ (Nat Sciver-Brunt) ಸಮಯೋಚಿತ ಆಟ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು. ಹಾಗಾದರೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು, ವಿಕೆಟ್ ಪಡೆದಿದ್ದು, ಎಮರ್ಜಿಂಗ್ ಪ್ಲೇಯರ್ ಯಾರು? ಹಾಗೂ ಎಷ್ಟು ಹಣ ಸಿಕ್ಕಿತು?. ಇಲ್ಲಿದೆ ಮಾಹಿತಿ.

ಚಾಂಪಿಯರ್: ಮುಂಬೈ ಇಂಡಿಯನ್ಸ್ ಮಹಿಳಾ ತಂಡ (ಟ್ರೋಫಿ ಹಾಗೂ 6 ಕೋಟಿ ರೂ.)

ರನ್ನರ್-ಅಪ್: ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ (3 ಕೋಟಿ ರೂ.)

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ: ಹೇಲೆ ಮ್ಯಾಥ್ಯೂಸ್ (5 ಲಕ್ಷ)

ಪರ್ಪಲ್ ಕ್ಯಾಪ್: ಹೇಲೆ ಮ್ಯಾಥ್ಯೂಸ್- 16 ವಿಕೆಟ್ (5 ಲಕ್ಷ)

ಆರೆಂಜ್ ಕ್ಯಾಪ್: ಮೆಗ್ ಲ್ಯಾನಿಂಗ್- 345 ರನ್ (5 ಲಕ್ಷ)

ಫೈರ್ ಪ್ಲೇ ಅವಾರ್ಡ್: ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್

ಅತ್ಯುತ್ತಮ ಕ್ಯಾಚ್: ಹರ್ಮನ್​ಪ್ರೀತ್ ಕೌರ್ (5 ಲಕ್ಷ)

ಅತ್ಯುತ್ತಮ ಸ್ಟ್ರೈಕರ್ ರೇಟ್: ಸೋಫಿ ಡಿವೈನ್ 13 ಸಿಕ್ಸ್ (5 ಲಕ್ಷ)

ಎಮರ್ಜಿಂಗ್ ಪ್ಲೇಯರ್: ಯಸ್ತಿಕಾ ಭಾಟಿಯಾ (5 ಲಕ್ಷ)

IPL 2023: ಐಪಿಎಲ್​ನಿಂದ ಅತೀ ಹೆಚ್ಚು ಕೋಟಿ ರೂ. ಸಂಪಾದಿಸಿದ ಆಟಗಾರ ಯಾರು ಗೊತ್ತಾ?

ಫೈನಲ್ ಪಂದ್ಯ ಹೇಗಿತ್ತು?:

ಫೈನಲ್ ಕಾದಾಟದಲ್ಲಿ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಅರಂಭಿಸಿತು. ಆರಂಭಿಕರಾಗಿ ಕ್ರೀಸ್​ಗೆ ಬಂದ ನಾಯಕಿ ಲ್ಯಾನಿಂಗ್​ ಹಾಗೂ ಶಫಾಲಿ ವರ್ಮಾ ಜೋಡಿ ತಂಡದ ಮೊತ್ತ 12 ರನ್​ಗಳು ಆಗುವಷ್ಟರಲ್ಲಿ ಬೇರ್ಪಟ್ಟಿತ್ತು. 11 ರನ್ ಗಳಿಸಿ ಶಫಾಲಿ ವರ್ಮಾ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೆ ಆಲಿಸ್​ ಕ್ಯಾಪ್ಸೆ ಶೂನ್ಯಕ್ಕೆ ಔಟ್​ ಆದರು. ಜೆಮಿಮಾ ರೋಡ್ರಿಗಸ್​ ಆಟ ಕೂಡ ಎರಡು ಬೌಂಡರಿಗೆ ನಿಂತಿತು. ಇದರ ನಡುವೆ ನಾಯಕಿ ತಮ್ಮ ಕೈಲಾದಷ್ಟು ರನ್ ಕಲೆಹಾಕುತ್ತಿದ್ದರು. ಆಲ್​ರೌಂಡರ್​ ಮರಿಜಾನ್ನೆ ಕಪ್​ ಜೊತೆ ಸೇರಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಕಪ್​ 18 ರನ್​ಗೆ ಔಟಾದರು. ಲ್ಯಾನಿಂಗ್​ ಆಟ ಕೂಡ 35 ರನ್​ಗೆ ಅಂತ್ಯವಾಯಿತು. ಕೊನೆಯಲ್ಲಿ ಶಿಖಾ ಪಾಂಡೆ ಮತ್ತು ರಾಧಾ ಯಾದವ್​ ತಲಾ 27 ರನ್​ಗಳ ಕೊಡುಗೆ ನೀಡಿದ ಪರಿಣಾಮ ಡೆಲ್ಲಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 139 ರನ್​ ಗಳಿಸಿತು.

ಇತ್ತ ಸಾಧಾರಣ ಟಾರ್ಗೆಟ್ ಬೆನ್ನಟ್ಟಲು ಬಂದ ಮುಂಬೈ ಕೂಡ ಆರಂಭದಲ್ಲೇ ಹೇಲಿ ಮ್ಯಾಥ್ಯೂಸ್ (13) ಮತ್ತು ಯಾಸ್ತಿಕಾ ಭಾಟಿಯಾ (4) ವಿಕೆಟ್ ಕಳೆದುಕೊಂಡಿತು. ನಂತರ ಬಂದ ನಾಟ್ ಸ್ಕೈವರ್ ಬ್ರಂಟ್ ಆಕರ್ಷಕ ಅಜೇಯ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 55 ಎಸತೆಗಳನ್ನು ಎದುರಿಸಿದ ಬ್ರಂಟ್​ 7ಳು ಬೌಂಡರಿಗಳ ಸಮೇತ ಅಜೇಉ 60 ರನ್​ ಬಾರಿಸಿದರು. ಮತ್ತೊಂದೆಡೆ, ಹರ್ಮನ್​ಪ್ರೀತ್​ ಕೌರ್​ ಕೂಡ ಉತ್ತಮ ಬ್ಯಾಟ್​ ಬಿಸಿ ತಂಡದಲ್ಲಿ ಗೆಲುವಿಗೆ ಕಾರಣವಾದರು. 39 ಬಾಲ್​ಗಳಲ್ಲಿ 5 ಬೌಂಡರಿಗಳೊಂದಿಗೆ 37 ರನ್​ ಬಾರಿಸಿದರು. ಕೊನೆಗೆ 19.3 ಓವರ್​ಗಳಲ್ಲಿ ಮುಂಬೈ 134 ರನ್​ಗಳನ್ನು ಬಾರಿಸಿ ಗೆಲುವಿನ ನಗೆ ಬೀರಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/dc-vs-mi-wpl-2023-final-here-is-the-full-list-of-award-winners-prize-money-records-and-stats-womens-premier-league-vb-au48-543684.html

Views: 0

Leave a Reply

Your email address will not be published. Required fields are marked *