DC vs MI, WPL 2023 Final: ಟ್ರೋಫಿ ಗೆದ್ದ ಖುಷಿಯಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಯರ್ಸ್ ಏನು ಮಾಡಿದ್ರು ನೋಡಿ

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದಿದೆ. ಹರ್ಮನ್​ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ವಿರುದ್ಧ ಎಂಐ (DC vs MI) 7 ವಿಕೆಟ್​ಗಳಿಂದ ಗೆದ್ದು ಬೀಗಿತು.ಕೊನೆಯ ಓವರ್ ವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಅಂತಿಮವಾಗಿ ಮುಂಬೈ ಗೆಲುವಿನ ನಗೆ ಬೀರಿತು. ನ್ಯಾಟ್ ಸೀವರ್ ಬ್ರಂಟ್ (Nat Sciver-Brunt) ಸಮಯೋಚಿತ ಆಟ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು.ಟ್ರೋಫಿ ಜೊತೆ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್.ಟ್ರೋಫಿ ಎತ್ತಿ ಸಂಭ್ರಮಿಸುತ್ತಿರುವ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಆಟಗಾರ್ತಿಯರು.ಚಾಂಪಿಯರ್ ಆದ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಟ್ರೋಫಿ ಹಾಗೂ 6 ಕೋಟಿ ರೂ. ನೀಡಲಾಯಿತು.ರನ್ನರ್-ಅಪ್ ಆದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ 3 ಕೋಟಿ ರೂ. ಬಹುಮಾನ ನೀಡಲಾಯಿತು.

source https://tv9kannada.com/photo-gallery/cricket-photos/harmanpreet-kaur-and-mumbai-indians-womens-team-with-wpl-2023-trophy-kannada-news-vb-au48-543695.html

Views: 0

Leave a Reply

Your email address will not be published. Required fields are marked *