PAK vs AFG: ಶಾರ್ಜಾದಲ್ಲಿ ಮುಜುಗರಕ್ಕೀಡಾದ ಪಾಕ್; ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಅಫ್ಘಾನಿಸ್ತಾನ!

pak vs afg 2nd t20 match afghanistan wins by 7 wickets to clinch the series

ಅಫ್ಘಾನಿಸ್ತಾನ ವಿರುದ್ಧ ಶಾರ್ಜಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡ ಪಾಕಿಸ್ತಾನ ಕ್ರಿಕೆಟ್ ತಂಡ (Pakistan vs Afghanistan) ಪಂದ್ಯದ ಜೊತೆಗೆ ಸರಣಿಯನ್ನೂ ಕಳೆದುಕೊಂಡಿದೆ. ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ (Babar Azam, Mohammad Rizwan) ಮತ್ತು ಶಾಹೀನ್ ಅಫ್ರಿದಿ ಇಲ್ಲದೆ ಆಫ್ಘನ್ ವಿರುದ್ಧ ಕಣಕ್ಕಿಳಿದಿದ್ದ ಪಾಕ್​ ಪಡೆಗೆ ಗೆಲುವು ದಕ್ಕಲಿಲ್ಲ. ಹೀಗಾಗಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅಫ್ಘಾನಿಸ್ತಾನ 2-0 ಅಂತರದ ಮುನ್ನಡೆ ಸಾಧಿಸುವುದರೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ ಮಾಡಿ ನಿಗದಿತ 20 ಓವರ್‌ಗಳಲ್ಲಿ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಕೂಡ ಕೊನೆಯ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಬೇಕಾಯಿತು. ಅಫ್ಘನ್ ಪರ  ಮತ್ತೊಮ್ಮೆ ಟ್ರಬಲ್ ಶೂಟರ್ ಪಾತ್ರನಿರ್ವಹಿಸಿದ ಮೊಹಮ್ಮದ್ ನಬಿ (Mohammad Nabi) ಶಾರ್ಜಾದಲ್ಲಿ ತಂಡಕ್ಕೆ ಒಂದು ಎಸೆತ ಬಾಕಿ ಇರುವಂತೆಯೇ ಐತಿಹಾಸಿಕ ಜಯ ತಂದುಕೊಟ್ಟರು. ಇದು ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನದ ಮೊದಲ ಸರಣಿ ಜಯವಾಗಿರುವುದು ಮತ್ತೊಂದು ವಿಶೇಷವಾಯಿತು.

ಪಾಕಿಸ್ತಾನದ ಬ್ಯಾಟಿಂಗ್ ವಿಫಲ

ಮೊದಲ ಟಿ20ಯಂತೆ ಎರಡನೇ ಟಿ20 ಪಂದ್ಯದಲ್ಲೂ ಪಾಕಿಸ್ತಾನದ ಬ್ಯಾಟಿಂಗ್ ಕಳಪೆಯಾಗಿತ್ತು. ಮೊದಲ ಟಿ20 ಪಂದ್ಯದಂತೆ ಈ ಪಂದ್ಯದಲ್ಲೂ ಅಫ್ಘನ್ ಬೌಲರ್ ಫಜಲ್ಹಕ್ ಫಾರೂಕಿ ಮತ್ತೊಮ್ಮೆ ಪಾಕ್ ಅಗ್ರ ಕ್ರಮಾಂಕವನ್ನು ಅಲುಗಾಡಿಸಿದರು. ಮೊದಲ ಓವರ್​ನಲ್ಲೇ ಸೈಮ್ ಅಯೂಬ್ ಮತ್ತು ಶಫೀಕ್​ರನ್ನು ಒಬ್ಬರ ನಂತರ ಒಬ್ಬರಂತೆ ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್​ಗೆ ಕಳುಹಿಸಿದರು. ಈ ಎರಡೂ ವಿಕೆಟ್ ಉರುಳಿದಾಗ ಪಾಕಿಸ್ತಾನದ ಖಾತೆಯೂ ತೆರೆದಿರಲಿಲ್ಲ. ಅದೇ ಸಮಯದಲ್ಲಿ ಮೊಹಮ್ಮದ್ ಹ್ಯಾರಿಸ್ ಕೂಡ ಕೇವಲ 15 ರನ್ ಗಳಿಸಿ ಬ್ಯಾಟ್ ಎತ್ತಿಟ್ಟರು. ಇಮಾದ್ ವಾಸಿಮ್ ಮತ್ತು ಶಾದಾಬ್ ಖಾನ್ ಪಾಕ್ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಅಂತಿಮವಾಗಿ ಇಮಾದ್ ಅವರ 64 ರನ್‌ಗಳ ಇನ್ನಿಂಗ್ಸ್‌ನಿಂದಾಗಿ, ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 130 ರನ್‌ ಕಲೆಹಾಕಿತು.

WPL 2023: ಟ್ರೋಫಿ ಗೆದ್ದ ಮುಂಬೈ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತೇ?

ರೋಚಕ ಜಯ ಸಾಧಿಸಿದ ಅಫ್ಘನ್

ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನಕ್ಕೂ ಪಾಕಿಸ್ತಾನದ ಬೌಲರ್‌ಗಳು ಸುಲಭವಾಗಿ ಜಯ ಸಾಧಿಸಲು ಬಿಡಲಿಲ್ಲ. ಕೊನೆಯ ಓವರ್‌ನವರೆಗೂ ಗೆಲುವಿಗಾಗಿ ಪಾಕ್ ಬೌಲರ್​ಗಳ ಶತಪ್ರಯತ್ನ ನಡೆಸಿದರಾದರೂ ಪಾಕ್ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಗುರ್ಬಾಜ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಸೀಮ್ ಷಾ ಅವರ ಮೊದಲ ಓವರ್‌ನಲ್ಲೇ ಸಿಕ್ಸರ್ ಬಾರಿಸಿ ಅಬ್ಬರಿಸುವ ಸೂಚನೆ ನೀಡದರಾದರೂ, ಆ ಬಳಿಕ ಅಫ್ಘಾನಿಸ್ತಾನ ಕೂಡ ಮಂದಗತಿಯ ಬ್ಯಾಟಿಂಗ್​ನಿಂದಾಗಿ ಭಾಗಶಃ ಪಂದ್ಯದಲ್ಲಿ ಗೆಲುವಿನಿಂದ ದೂರವಿತ್ತು. ಈ ಹಂತದಲ್ಲಿ ದಿಟ್ಟ ಹೋರಾಟ ನೀಡಿದ ಪಾಕ್ ಬೌಲರ್​ಗಳು ಅಫ್ಘನ್ ಬ್ಯಾಟರ್​ಗಳಿಗೆ ಬಿಗ್ ಶಾಟ್ ಹೊಡೆಯುವ ಅವಕಾಶ ನೀಡಲಿಲ್ಲ. ಹೀಗಾಗಿ ಅಫ್ಘನ್ ಪಡೆ ಸಿಂಗಲ್ಸ್ ಮೊರೆ ಹೋಗಬೇಕಾಯಿತು. ಅಂತಿಮವಾಗಿ ಅಫ್ಘಾನಿಸ್ತಾನ ತಂಡ ಒತ್ತಡಕ್ಕೆ ಸಿಲುಕಿದ್ದರೂ ಮೊಹಮ್ಮದ್ ನಬಿ ಹಾಗೂ ಝದ್ರಾನ್ ಜೊತೆಯಾಟ ತಂಡದ ಗೆಲುವನ್ನು ನಿರ್ಧರಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/pak-vs-afg-2nd-t20-match-afghanistan-wins-by-7-wickets-to-clinch-the-series-psr-au14-543772.html

Views: 0

Leave a Reply

Your email address will not be published. Required fields are marked *