IPL 2023 All Team Captains List: 4 ತಂಡಗಳಿಗೆ ಹೊಸ ಕ್ಯಾಪ್ಟನ್ಸ್: ಇಲ್ಲಿದೆ 10 ತಂಡಗಳ ನಾಯಕರುಗಳ ಪಟ್ಟಿ

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಇದೀಗ 10 ತಂಡಗಳನ್ನು ಮುನ್ನಡೆಸುವವರು ಯಾರು ಎಂಬುದು ಕೂಡ ಫೈನಲ್ ಆಗಿದೆ.ಹೌದು, ಈ ಬಾರಿಯ ಐಪಿಎಲ್​ನಲ್ಲಿ ನಾಲ್ವರು ಹೊಸ ನಾಯಕರುಗಳು ಕಾಣಿಸಿಕೊಳ್ಳಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹಾಗೂ ಕೆಕೆಆರ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಗಾಯದ ಕಾರಣ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್​ರೈಡರ್ಸ್ ತಂಡಕ್ಕೆ ಹೊಸ ಕ್ಯಾಪ್ಟನ್​ಗಳು ಆಯ್ಕೆಯಾಗಿದ್ದಾರೆ.ಹಾಗೆಯೇ ಕಳೆದ ಸೀಸನ್​ನಲ್ಲಿ ಎಸ್​ಆರ್​ಹೆಚ್ ತಂಡದ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ (ಗುಜರಾತ್ ಟೈಟಾನ್ಸ್) ಹಾಗೂ ಪಂಜಾಬ್ ಕಿಂಗ್ಸ್ ತಂಡದ ಮಯಾಂಕ್ ಅಗರ್ವಾಲ್ (ಎಸ್​ಆರ್​ಹೆಚ್) ಈ ಬಾರಿ ಹೊಸ ತಂಡಗಳಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ಮತ್ತು ಎಸ್​ಆರ್​ಹೆಚ್ ತಂಡಗಳಿಗೆ ಹೊಸ ನಾಯಕರುಗಳು ಮುನ್ನಡೆಸಲಿದ್ದಾರೆ. ಅದರಂತೆ ಐಪಿಎಲ್​ನ 10 ತಂಡಗಳ ನಾಯಕರುಗಳ ಪಟ್ಟಿ ಹೀಗಿದೆ...1- ಚೆನ್ನೈ ಸೂಪರ್ ಕಿಂಗ್ಸ್​: ಮಹೇಂದ್ರ ಸಿಂಗ್ ಧೋನಿ2- ಮುಂಬೈ ಇಂಡಿಯನ್ಸ್; ರೋಹಿತ್ ಶರ್ಮಾ3- ಗುಜರಾತ್ ಟೈಟಾನ್ಸ್; ಹಾರ್ದಿಕ್ ಪಾಂಡ್ಯ4- ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್5- ಪಂಜಾಬ್ ಕಿಂಗ್ಸ್: ಶಿಖರ್ ಧವನ್6- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡುಪ್ಲೆಸಿಸ್7- ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್8- ಸನ್​ರೈಸರ್ಸ್​ ಹೈದರಾಬಾದ್: ಐಡೆನ್ ಮಾರ್ಕ್ರಾಮ್9- ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್10- ಕೊಲ್ಕತ್ತಾ ನೈಟ್​ ರೈಡರ್ಸ್: ನಿತೀಶ್ ರಾಣಾ

source https://tv9kannada.com/photo-gallery/cricket-photos/ipl-2023-all-team-captains-list-kannada-news-zp-au50-544089.html

Views: 0

Leave a Reply

Your email address will not be published. Required fields are marked *