IPL 2023: ಐಪಿಎಲ್​ಗೆ ಸ್ಟೀವ್ ಸ್ಮಿತ್ ಕಂಬ್ಯಾಕ್..!

IPL 2023: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಐಪಿಎಲ್​ಗೆ ಕಂಬ್ಯಾಕ್ ಮಾಡಲಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಸ್ಮಿತ್, ನಾನು ಐಪಿಎಲ್​ಗೆ ಹಿಂತಿರುಗುತ್ತಿದ್ದೇನೆ. ಶೀಘ್ರದಲ್ಲೇ ತಂಡವೊಂದನ್ನು ಸೇರಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.ಈ ಬಾರಿಯ ಐಪಿಎಲ್​ ಹರಾಜಿಗಾಗಿ ಸ್ಟೀವ್ ಸ್ಮಿತ್ ಹೆಸರು ನೀಡಿರಲಿಲ್ಲ. 2022 ರ ಹರಾಜಿನಲ್ಲಿ ಬಿಕರಿಯಾಗದ ಕಾರಣ ಐಪಿಎಲ್ ಹರಾಜಿನಿಂದ ಹೊರಗುಳಿದಿದ್ದರು. ಇದೀಗ ಐಪಿಎಲ್​ಗೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.ಆದರೆ ಸ್ಟೀವ್ ಸ್ಮಿತ್ ಐಪಿಎಲ್​ಗೆ ಆಟಗಾರನಾಗಿ ಕಂಬ್ಯಾಕ್ ಮಾಡಲಿದ್ದಾರಾ ಅಥವಾ ಕಮೆಂಟೇಟರ್​ ಆಗಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ಅವರು ಕಂಬ್ಯಾಕ್ ಮಾಡುವುದನ್ನು ದೃಢಪಡಿಸಿದರೂ, ತಂಡವನ್ನು ಮಾತ್ರ ಹೆಸರಿಸಿಲ್ಲ.ಇತ್ತ ಐಪಿಎಲ್​ನ ಕೆಲ ತಂಡಗಳಿಂದ ಸ್ಟಾರ್ ಆಟಗಾರರು ಗಾಯದ ಕಾರಣ ಹೊರಗುಳಿದಿದ್ದಾರೆ. ಹೀಗಾಗಿ ಅವರು ಬದಲಿ ಆಟಗಾರನಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ. ಈ ಹಿಂದೆ ಐಪಿಎಲ್​ನಲ್ಲಿ ಸ್ಟೀವ್ ಸ್ಮಿತ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು. ಅಲ್ಲದೆ ಐಪಿಎಲ್​ನ 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.  ಧೋನಿಯಂತಹ ಆಟಗಾರ ಸ್ಮಿತ್ ನಾಯಕತ್ವದಲ್ಲಿ ಆಡಿದ್ದಾರೆ.  ಸ್ಮಿತ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 34.51 ಸರಾಸರಿಯಲ್ಲಿ 2485 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-kannada-steve-smith-announces-ipl-return-kannada-news-zp-au50-544185.html

Leave a Reply

Your email address will not be published. Required fields are marked *