
ಪಂಜಾಬ್ ಪೊಲೀಸರು ಕಳೆದ 12 ದಿನದಿಂದ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಹುಡುಕಾಟ ನಡೆಸುತ್ತಿದ್ದರು ಸಹ, ತೀವ್ರಗಾಮಿ ಅಮೃತ್ ಪಾಲ್ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿಲ್ಲ. ಎಲ್ಲೆಲ್ಲೋ ಸಂಚರಿಸಿ, ಇನ್ನೆಲ್ಲೋ ಅಡಗಿಕೊಳ್ಳುತ್ತಿದ್ದಾನೆ. ಅವನ ಓಡಾಟದ ವಿಡಿಯೋಗಳು ಪೊಲೀಸರಿಗೆ ಲಭ್ಯವಾಗಿದೆ. ಆದರೆ ಈಗ ಸ್ವತಃ ಅಮೃತ್ ಪಾಲ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾನೆ.
ತಾನಿರುವ ಜಾಗದಿಂದ ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ಯುಕೆ ಹ್ಯಾಂಡಲ್ ಗಳು ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದೆ. 2 ನಿಮಿಷ 59 ಸೆಕೆಂಡ್ ಈ ವಿಡಿಯೋ ಇದೆ. ಇದರಲ್ಲಿ ಪಂಜಾಬ್ ಗೆ ಮರಳುವ ಸುಳಿವು ನೀಡಿದ್ದಾನೆ ಅಮೃತ್ ಪಾಲ್.
ಎಲ್ಲಾ ಕಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅಮೃತ್ ಪಾಲ್ ಸಿಕ್ಕರೆ ಅರೆಸ್ಟ್ ಮಾಡೋದೆ. ಅಮೃತ್ ಪಾಲ್ ಕೂಡ ಬಹಳ ದಿನ ಎಲ್ಲಿಗೋ ತಪ್ಪಿಸಿಕೊಂಡು ಓಡಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡೆ ಈಗ ಶರಣಾಗಲೂ ನಿರ್ಧರಿಸಿದ್ದಾನೆ.
ಆತ ಮಾಡಿರುವ ವಿಡಿಯೋದಲ್ಲಿ “ಜತೇದಾರ್ ಸಾಹೇಬ್ ಅವರು ಪಂಜಾಬ್ ಸರ್ಕಾರಕ್ಕೆ 24 ಗಂಟೆಗಳ ಅಲ್ಟಿಮೇಟ್ ನೀಡಿದ್ದರು. ಆದರೆ ಸರ್ಕಾರವೂ ಅಕಾಲ್ ತಕ್ತ್ ಸಂಸ್ಥೆಗೆ ತಕರಾರು ಹಾಕಿತ್ತು. ಮತ್ತು ಅದನ್ನು ಅಪಹಾಸ್ಯ ಮಾಡಿತ್ತು. ಪಂಜಾಬ್ ಸರ್ಕಾರ ಸಬ್ಬಾಳಿಕೆಯ ಮಿತಿಯನ್ನು ಮೀರಿದೆ” ಅಂತೆಲ್ಲಾ ವಿಡಿಯೋದಲ್ಲಿ ಹೇಳಿದ್ದಾನೆ.
The post ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಅಮೃತ್ ಪಾಲ್ ವಿಡಿಯೋ ರಿಲೀಸ್ ಮಾಡಿ ಹೇಳಿದ್ದೇನು..? first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/uJFNVgP
via IFTTT
Views: 0