IPL 2023: ಪಂಜಾಬ್​ಗೆ ಬಿಗ್ ಶಾಕ್; ಮೊದಲ ಪಂದ್ಯಕ್ಕೆ 20.75 ಕೋಟಿ ಬೆಲೆಯ ಇಬ್ಬರು ಆಟಗಾರರು ಅಲಭ್ಯ!

IPL 2023 Liam Livingstone Kagiso Rabada set to miss Punjab Kings opener vs KKR

ಪಂಜಾಬ್ ಕಿಂಗ್ಸ್ (Punjab Kings) ತಂಡ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದ್ದು, ಅಭಿಯಾನ ಆರಂಭಕ್ಕೂ ಮುನ್ನವೇ ದೊಡ್ಡ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ ಈ ಐಪಿಎಲ್​ನಲ್ಲಿ (IPL 2023) ಪಂಜಾಬ್ ತಂಡ ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ಏಪ್ರಿಲ್ 1 ರಂದು ಆಡಬೇಕಾಗಿದೆ. ಆದರೆ, ಈ ಪಂದ್ಯಕ್ಕೆ ತಂಡದ ಇಬ್ಬರು ಸ್ಟಾರ್ ಕ್ರಿಕೆಟಿಗರು ಅಲಭ್ಯರಾಗಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟನ್ (Liam Livingstone) ಇಲ್ಲದೆ ಮೊದಲ ಪಂದ್ಯವನ್ನು ಆಡಲಿದೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಲಿಯಾಮ್ ಗಾಯಗೊಂಡಿದ್ದು, ಅಂದಿನಿಂದ ಯಾವುದೇ ಪಂದ್ಯವನ್ನು ಆಡಿಲ್ಲ. ಅಲ್ಲದೆ ಲಿಯಾಮ್ ಲಿವಿಂಗ್‌ಸ್ಟನ್ ಇನ್ನೂ ಫಿಟ್‌ನೆಸ್ ಕ್ಲಿಯರೆನ್ಸ್ ಪಡೆದಿಲ್ಲ. ಆದರೆ ಒಂದು ಸಮಾಧಾನಕರ ಸಂಗತಿಯೆಂದರೆ ಐಪಿಎಲ್‌ನಲ್ಲಿ ಆಡಲು ಲಿವಿಂಗ್‌ಸ್ಟನ್‌ಗೆ ಇಸಿಬಿ ಗ್ರೀನ್ ಸಿಗ್ನಲ್ ನೀಡಿದೆ.

ರಬಾಡ ಕೂಡ ಮೊದಲ ಪಂದ್ಯವನ್ನು ಆಡುವುದಿಲ್ಲ

ಲಿವಿಂಗ್​ಸ್ಟನ್ ಮಾತ್ರವಲ್ಲ, ಪಂಜಾಬ್​ನ ಮತ್ತೊಬ್ಬ ಸ್ಟಾರ್ ಆಟಗಾರರಾದ ದಕ್ಷಿಣ ಆಫ್ರಿಕಾದ ಬಲಗೈ ವೇಗದ ಬೌಲರ್ ಕಗಿಸೊ ರಬಾಡ ಕೂಡ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ವಾಸ್ತವವಾಗಿ ರಬಾಡ ನೆದರ್ಲೆಂಡ್ಸ್ ವಿರುದ್ಧದ ಎರಡು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದಾರೆ. ಇದರಿಂದಾಗಿ ಅವರು ತಮ್ಮ ಮೊದಲ ಐಪಿಎಲ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

IPL 2023: ಎಲ್ಲಾ 10 ಐಪಿಎಲ್ ತಂಡಗಳ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ

ರಬಾಡ-ಲಿವಿಂಗ್‌ಸ್ಟನ್‌ಗೆ 20.75 ಕೋಟಿ ಖರ್ಚು

ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ಈ ಇಬ್ಬರು ಆಟಗಾರರನ್ನು ಖರೀದಿಸಿಲು ಪಂಜಾಬ್ ತಂಡ 20.75 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದರಲ್ಲಿ ರಬಾಡಗೆ 9.25 ಕೋಟಿ ನೀಡಿದರೆ, ಲಿವಿಂಗ್ಸ್ಟನ್​ ಅವರನ್ನು 11.50 ಕೋಟಿಗೆ ಖರೀದಿಸಲಾಗಿದೆ.

ರಬಾಡ-ಲಿವಿಂಗ್‌ಸ್ಟನ್ ಬದಲಿಗೆ ಯಾರು?

ಅಂದಹಾಗೆ, ಪಂಜಾಬ್ ರಬಾಡ ಮತ್ತು ಲಿವಿಂಗ್‌ಸ್ಟನ್ ಬದಲಿಯಾಗಿ ಮೊದಲ ಪಂದ್ಯಕ್ಕೆ ಹಲವು ಆಯ್ಕೆಗಳನ್ನು ಈಗಾಗಲೇ ಹೊಂದಿದೆ. ರಬಾಡ ಬದಲಿಗೆ ನಾಥನ್ ಎಲ್ಲಿಸ್ ಅವರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ನೀಡಬಹುದು. ಅದೇ ಸಮಯದಲ್ಲಿ, ಲಿವಿಂಗ್‌ಸ್ಟನ್ ಬದಲಿಯಾಗಿ ಮ್ಯಾಥ್ಯೂ ಶಾರ್ಟ್ ಬ್ಯಾಟಿಂಗ್‌ನಲ್ಲಿ ಅವಕಾಶ ಪಡೆಯಬಹುದಾಗಿದೆ.

ಪಂಜಾಬ್ ಪೂರ್ಣ ತಂಡ: ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಹರ್‌ಪ್ರೀತ್ ಬ್ರಾರ್, ಲಿಯಾಮ್ ಲಿವಿಂಗ್‌ಸ್ಟನ್, ರಾಜ್ ಅಂಗದ್ ಬಾವಾ, ಮ್ಯಾಥ್ಯೂ ಶಾರ್ಟ್, ರಿಷಿ ಧವನ್, ಶಾರುಖ್ ಖಾನ್, ಜಿತೇಶ್ ಶರ್ಮಾ, ಪ್ರಭ್‌ಸಿಮ್ರಾನ್ ಸಿಂಗ್, ಅಥರ್ವ ಟೇಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ಕಗಿಸೋ ರಬಾಡ , ರಾಹುಲ್ ಚಾಹರ್, ಸ್ಯಾಮ್ ಕರನ್, ಸಿಕಂದರ್ ರಜಾ, ಶಿವಂ ಸಿಂಗ್, ಹರ್‌ಪ್ರೀತ್ ಭಾಟಿಯಾ, ವಿಧ್ವತ್ ಕಾವೇರಪ್ಪ, ಮೋಹಿತ್ ರಾಠಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-liam-livingstone-kagiso-rabada-set-to-miss-punjab-kings-opener-vs-kkr-psr-au14-545550.html

Views: 0

Leave a Reply

Your email address will not be published. Required fields are marked *