Virat Kohli: 10ನೇ ತರಗತಿಯ ಅಂಕಪಟ್ಟಿ ಹಂಚಿಕೊಂಡ ಕಿಂಗ್ ಕೊಹ್ಲಿ; ಯಾವ ಸಬ್ಜೆಕ್ಟ್​ನಲ್ಲಿ ಎಷ್ಟು ಮಾರ್ಕ್?

ಸಾಮಾನ್ಯವಾಗಿ ಸೆಲೆಬ್ರೆಟಿಗಳ ವಿಧ್ಯಾಭ್ಯಾಸ ಹೇಗಿತ್ತು?. ಅವರು ಯಾವ ತರಗತಿಯಲ್ಲಿ ಎಷ್ಟು ಅಂಕ ಪಡೆದುಕೊಂಡಿದ್ದರು ಎಂಬುದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಅಭಿಮಾನಿಯ ಕನಸ್ಸಾಗಿರುತ್ತದೆ. ಅದರಲ್ಲೂ ಕ್ರಿಕೆಟ್ ಲೋಕದ ಸಾಮ್ರಾಟ ಕೊಹ್ಲಿಯ 10 ನೇ ತರಗತಿಯ ಮಾರ್ಕ್​ ಎಷ್ಟು ಎಂಬುದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಮಹದಾಸೆಯಾಗಿರುತ್ತದೆ. ಇದೀಗ ಅಂತಹ ನೂರಾರು ಅಭಿಮಾನಿಗಳ ಮಹದಾಸೆಯನ್ನು ಕಿಂಗ್ ಕೊಹ್ಲಿಯೇ ನೆರವೇರಿಸಿದ್ದಾರೆ.ತಮ್ಮ ಸೋಶಿಯಲ್ ಮೀಡಿಯಾ ‘ಕೂ’ ಖಾತೆಯಲ್ಲಿ ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಕೊಹ್ಲಿ ಹಂಚಿಕೊಂಡಿದ್ದು, ಇದೀಗ ಆ ಅಂಕಪಟ್ಟಿಯ ಫೋಟೋ ಸಖತ್ ವೈರಲ್ ಆಗುತ್ತಿದೆ.ಕೊಹ್ಲಿ ಹತ್ತನೇ ತರಗತಿಯಲ್ಲಿ ಗಳಿಸಿರುವ ಅಂಕಗಳನ್ನು ನೋಡುವುದಾದರೆ, ಇಂಗ್ಲಿಷ್‌ನಲ್ಲಿ 83, ಹಿಂದಿಯಲ್ಲಿ 75, ಗಣಿತದಲ್ಲಿ 51, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 55, ಸಮಾಜ ವಿಜ್ಞಾನದಲ್ಲಿ 81,  ಇಂಟ್ರಡಕ್ಟರಿ ಐಟಿಯಲ್ಲಿ 74 ಅಂಕಗಳನ್ನು ಪಡೆದಿದ್ದಾರೆ. ಈ ಅಂಕಪಟ್ಟಿಯನ್ನು ಗಮನಿಸುವುದಾದರೆ ವಿರಾಟ್ ಕೊಹ್ಲಿ ಗಣಿತದಲ್ಲಿ ಕೇವಲ 51 ಅಂಕಗಳನ್ನು ಪಡೆದಿದ್ದು, ಕ್ರಿಕೆಟ್ ಲೋಕದ ಸಾಮ್ರಾಟ ಗಣಿತದಲ್ಲಿ ಅಷ್ಟು ಪರಿಣಿತರಾಗಿರಲಿಲ್ಲ ಎಂಬುದನ್ನು ಕಾಣಬಹುದಾಗಿದೆ.ನನಗೆ ಶಾಲಾ ದಿನಗಳಲ್ಲಿ ಗಣಿತ ವಿಷಯ ಕಂಡರೆ ಆಗುತ್ತಿರಲಿಲ್ಲ ಎಂಬುದನ್ನು ಸ್ವತಃ ಕೊಹ್ಲಿಯೇ ಈ ಹಿಂದೆ ಹೇಳಿಕೊಂಡಿದ್ದಾರೆ. ಅಲ್ಲದೆ ಎಲ್ಲರೂ ಏಕೆ ಗಣಿತವನ್ನು ಏಕೆ ಅಧ್ಯಯನ ಮಾಡಲು ಬಯಸುತ್ತಾರೆ. ಇದರಿಂದ ಅವರಿಗೆ ಏನು ಸಿಗುತ್ತದೆ?. ಸದ್ಯ ನನಗೆ 10ನೇ ತರಗತಿಯಲ್ಲಿ ಗಣಿತದಲ್ಲಿ ಪಾಸ್ ಆಗುವುದೇ ಮುಖ್ಯವಾಗಿತ್ತು. ಏಕೆಂದರೆ 10ನೇ ತರಗತಿ ಮುಗಿದ ನಂತರ ಗಣಿತವನ್ನು ಓದುವ ಅನಿವಾರ್ಯವಿರಲಿಲ್ಲ ಎಂದು ಕೊಹ್ಲಿಯೇ ಹೇಳಿಕೊಂಡಿದ್ದಾರೆ.

source https://tv9kannada.com/photo-gallery/cricket-photos/ipl-2023-virat-kohli-reveals-his-class-10th-marks-in-internet-breaking-post-before-ipl-psr-au14-545938.html

Views: 0

Leave a Reply

Your email address will not be published. Required fields are marked *