Tamannah Bhatia: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಶ್ಮಿಕಾ ಮಂದಣ್ಣ-ತಮನ್ನಾ ಭಾಟಿಯಾ ಡ್ಯಾನ್ಸ್ ಪ್ರ್ಯಾಕ್ಟೀಸ್: ವಿಡಿಯೋ

Tamannah Bhatia and Rashmika Mandanna

ಇಂಡಿಯನ್ ಪ್ರೀಮಿಯರ್ ಲೀಗ್  (IPL 2023) 16ನೇ ಆವೃತ್ತಿಯ ಉದ್ಘಾಟನಾ ಸಮಾರಂಭಕ್ಕೆ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿ ನಿಂತಿದೆ. ಬಣ್ಣ ಬಣ್ಣಗಳ ಎಲ್​ಇಡಿ ಲೈಟ್​ನಿಂದ ಮೈದಾನ ಕಂಗೊಳಿಸುತ್ತಿದ್ದು, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದಲ್ಲಿ ವಿಶೇಷ ಲೇಸರ್ ಶೋ ಕೂಡ ನಡೆಯಲಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್ ಪ್ರದರ್ಶನ ನೀಡಲಿದ್ದಾರೆ. ಹಾಗೆಯೇ ಖ್ಯಾತ ನಟಯರಾದ ತಮನ್ನಾ ಭಾಟಿಯಾ (Tamannah Bhatia) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಸೊಂಟ ಬಳುಕಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಒಂದು ದಿನದ ಮುಂಚಿತವಾಗಿ ಗುರುವಾರವೇ ಅಭ್ಯಾಸ ಕೂಡ ಶುರು ಮಾಡಿಕೊಂಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದು ಹಂಚಿಕೊಂಡಿದೆ. ಇದರಲ್ಲಿ ತಮನ್ನಾ ಮತ್ತು ರಶ್ಮಿಕಾ ಐಪಿಎಲ್ 2023 ಉದ್ಘಾಟನಾ ಸಮಾರಂಭಕ್ಕೆ ತಯಾರಿ ನಡೆಸುತ್ತಿದ್ದಾರೆ. ಇವರಿಬ್ಬರು ಅರಿಜಿತ್ ಸಿಂಗ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ತಮನ್ನಾ ನೃತ್ಯ ಗಾರ್ತಿಯಯರ ಜೊತೆ ಸ್ಟೇಜ್​ನಲ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂತು. ”ಅರಿಜಿತ್ ಸಿಂಗ್ ಮತ್ತು ರಶ್ಮಿಕಾ ಮಂದಣ್ಣ ಜೊತೆ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇನೆ,” ಎಂದು ತಮನ್ನಾ ಹೇಳಿದ್ದಾರೆ.

 

ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ?:

ಐಪಿಎಲ್​ 2023 ಉದ್ಘಾಟನಾ ಸಮಾರಂಭವು ಸಂಜೆ 6 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಸುಮಾರು 45 ನಿಮಿಷಗಳ ಕಾಲ ನಡೆಯಲಿದೆ ಎಂಬ ಮಾಹಿತಿ ಇದೆ. ಅರಿಜಿತ್, ರಶ್ಮಿಕಾ ಮತ್ತು ತಮನ್ನಾ ಜೊತೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ಟೈಗರ್ ಶ್ರಾಫ್ ಕೂಡ ಇರಲಿದ್ದಾರಂತೆ.

IPL 2023: ಈ ಬಾರಿ ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಸ್ಟೀವ್ ಸ್ಮಿತ್

ಗುಜರಾತ್ vs ಚೆನ್ನೈ:

ಉದ್ಘಾಟನಾ ಸಮಾರಂಭದ ಬಳಿಕ ಐಪಿಎಲ್ 2023ರ ಮೊದಲ ಪಂದ್ಯಕ್ಕೆ ಚಾಲನೆ ಸಿಗಲಿದ್ದು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಲಿದೆ. ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆದರೆ 7:30ಕ್ಕೆ ಪಂದ್ಯ ಶುರುವಾಗಲಿದೆ. ಹಾಲಿ ಚಾಂಪಿಯನ್ ಜಿಟಿ ಯುವ ಆಟಗಾರರಿಂದ ಕೂಡಿದ್ದರೆ ಮಾಜಿ ಚಾಂಪಿಯನ್ ಸಿಎಸ್​ಕೆ ಅನುಭವಿ ಪ್ಲೇಯರ್​ಗಳಿಂದ ಕೂಡಿದೆ. ಹೀಗಾಗಿ ಮೊದಲ ಪಂದ್ಯವೇ ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.

ಹವಾಮಾಮ ವರದಿ:

ಅಹ್ಮದಾಬಾದ್​ನಲ್ಲಿ ಗುರುವಾರ ಸಂಜೆ ಭಾರೀ ಮಳೆ ಆಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಗುಜರಾತ್-ಚೆನ್ನೈ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ದಿಢೀರ್ ಮಳೆ ಸುರಿದಿದ್ದು ನಂತರ ಆಟಗಾರರು ಮಳೆಗೆ ಒದ್ದೆಯಾಗಿಕೊಂಡು ಡ್ರೆಸ್ಸಿಂಗ್ ರೂಮ್​ಗೆ ತೆರಳುವುದು ಕಂಡುಬಂತು. ಇಂದು ಪಂದ್ಯದ ದಿನ ಮಳೆ ಆಗಲಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಅಕ್ವಾ ವೆದರ್ ಹೇಳುವ ಪ್ರಕಾರ, ಇಂದು ಜಿಟಿ-ಸಿಎಸ್​ಕೆ ನಡುವಣ ಪಂದ್ಯ ನಡೆಯುವಾಗ ಮಳೆಯ ಸಾಧ್ಯತೆ ಇಲ್ಲ ಎಂದು ಹೇಳಿದೆ. ಅಹ್ಮದಾಬಾದ್​ನಲ್ಲಿ ಇಂದು 33 ಡಿಗ್ರಿ ತಾಪಮಾನ ಇರಲಿದೆ. ಸಂಜೆ ಹಾಗೂ ರಾತ್ರಿ ವೇಳೆಗೆ ಇದು 23 ಡಿಗ್ರಿಗೆ ಇಳಿಯಲಿದೆ. ಹೀಗಾಗಿ ಮಳೆ ಬರುವ ಯಾವುದೇ ಸಾಧ್ಯತೆ ಇಲ್ಲ ಎಂದು ಅಕ್ವಾ ವೆದರ್ ಹೇಳಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/tamannah-bhatia-and-rashmika-mandhana-geared-up-for-the-ipl-2023-opening-ceremony-watch-viral-video-vb-au48-546197.html

Views: 0

Leave a Reply

Your email address will not be published. Required fields are marked *