IPL 2023 New Rules: ಹಿಂದಿನಂತಿಲ್ಲ ಈ ಬಾರಿಯ ಐಪಿಎಲ್: ಬಂದಿದೆ 5 ಹೊಸ ನಿಯಮ: ಇಲ್ಲಿದೆ ಪೂರ್ಣ ಮಾಹಿತಿ

ಮೂರು ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತಕ್ಕೆ ಮತ್ತೆ ಬಂದಿದೆ. ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2023ಕ್ಕೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್- ಚೆನ್ನೈ ಮುಖಾಮುಖಿ ಆಗಲಿದೆ. ಇದಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ಕೂಡ ಏರ್ಪಡಿಸಲಾಗಿದೆ.ಅದರೆ, ಹಿಂದಿನ ಸೀಸನ್​ಗಳಂತೆ ಈ ಬಾರಿಯ ಐಪಿಎಲ್ ಇರುವುದಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲವು ಹೊಸ ನಿಯಮಗಳನ್ನು ಐಪಿಎಲ್ 2023ಕ್ಕೆ ಅಳವಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.ಟಾಸ್ ಬಳಿಕ ಪ್ಲೇಯಿಂಗ್ XI ಬದಲಾವಣೆ: ಐಪಿಎಲ್ ಮಂಡಳಿಯ ನೂತನ ನಿಯಮದ ಪ್ರಕಾರ ಟಾಸ್ ಪ್ರಕ್ರಿಯೆಯ ನಂತರವೂ ಕ್ಯಾಪ್ಟನ್​ಗಳು ತಮ್ಮ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡಬಹುದು. ಈ ಮೊದಲು ಟಾಸ್​ಗು ಮುನ್ನ ಉಭಯ ತಂಡದ ನಾಯಕರು ಪ್ಲೇಯಿಂಗ್ ಇಲೆವೆನ್ ಪಟ್ಟಿಯನ್ನು ಸಲ್ಲಿಸಬೇಕಿತ್ತು.ಇಂಪ್ಯಾಕ್ಟ್ ಪ್ಲೇಯರ್: ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದಾಗಿದೆ. ನಿಯಮದ ಪ್ರಕಾರ, ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಬ್ಯಾಟ್ಸ್​ಮನ್ ಬದಲಿಗೆ ಬೌಲರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ.ಈ ನಿಯಮದಡಿಯಲ್ಲಿ ಪ್ರತಿ ತಂಡದ ನಾಯಕರು ಟಾಸ್ ವೇಳೆ ತಮ್ಮ ತಂಡದ ಆಡುವ ಇಲೆವೆನ್ ಬಳಗವನ್ನು ಹೆಸರಿಸುವಾಗಲೇ ಹೆಚ್ಚುವರಿಯಾಗಿ ಇನ್ನು ನಾಲ್ಕು ಆಟಗಾರರ ಹೆಸರನ್ನು ನೀಡಿರಬೇಕು. ಪಂದ್ಯ ಆರಂಭವಾದ ಬಳಿಕ 14 ಓವರ್​ಗಳ ಒಳಗೆ ಈ ನಿಯಮದಡಿಯಲ್ಲಿ ಒಬ್ಬ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಬಹುದಾಗಿದೆ.ವೈಡ್-ನೋ ಬಾಲ್​ಗೆ DRS: ಇದೇ ಮೊದಲ ಬಾರಿಗೆ ವೈಡ್ ಮತ್ತು ನೋ ಬಾಲ್ ನಿರ್ಧಾರವನ್ನು ಪರಿಶೀಲಿಸುವ ನಿಯಮವನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಕೇವಲ ಅಂಪೈರ್ ನೀಡಿದ ಔಟ್ ನಿರ್ಣಯದ ವಿರುದ್ಧ ಡಿಆರ್​ಎಸ್​ ತೆಗದುಕೊಳ್ಳಲಾಗುತ್ತಿತ್ತು. ಆದರೆ ಈಗ ವೈಡ್‌ ಮತ್ತು ನೋ ಬಾಲ್‌ ನಿರ್ಧಾರದ ವಿರುದ್ಧವೂ ಡಿಆರ್​ಎಸ್ ಬಳಸಬಹುದಾಗಿದೆ.ಅಂತೆಯೆ ಐಪಿಎಲ್​ನಲ್ಲಿ ಬೌಲಿಂಗ್​ ಮಾಡುವ ವೇಳೆ ವಿಕೆಟ್ ಕೀಪರ್ ಅಥವಾ ಫೀಲ್ಡರ್​ ಸ್ಥಾನ ಪಲ್ಲಟ ಮಾಡಿದ್ದು ಕಂಡು ಬಂದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸುವುದರ ಜೊತೆಗೆ ಐದು ರನ್​ಗಳ ಪೆನಾಲ್ಟಿ ಕೂಡ ಹಾಕಲಾಗುತ್ತದೆ.ಇನ್ನು ನಿಗದಿತ ಸಮಯಕ್ಕೆ ಓವರ್​ ಮುಗಿಸದೆ ಹೊದಲ್ಲಿ ಕೇವಲ 4 ಫೀಲ್ಡರ್ ಮಾತ್ರ 30 ಯಾರ್ಡ್​ ಸರ್ಕಲ್ ಹೊರಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ. 90 ನಿಮಿಷಗಳ ಒಳಗೆ 20 ಓವರ್​ಗಳ ಕೋಟ ಮುಗಿಸಬೇಕೆಂಬ ನಿಯಮ ತರಲಾಗಿದೆ.

source https://tv9kannada.com/photo-gallery/cricket-photos/ipl-new-rules-impact-player-new-drs-calls-here-is-the-new-rule-changes-for-ipl-2023-kannada-news-vb-au48-546230.html

Views: 0

Leave a Reply

Your email address will not be published. Required fields are marked *