IPL 2023: ಮುಂಬೈ ಇಂಡಿಯನ್ಸ್ ತಂಡಕ್ಕೆ ಜಸ್​ಪ್ರೀತ್ ಬುಮ್ರಾ ಬದಲಿ ಆಟಗಾರ ಆಯ್ಕೆ

IPL 2023 Kannada: ಈ ಬಾರಿಯ ಐಪಿಎಲ್​ನಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ ಹೊರಗುಳಿದಿದ್ದರು. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಸಂಪೂರ್ಣ ಫಿಟ್​ ಆಗಿರದ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ಅವರ ಬದಲಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹೊಸ ಆಟಗಾರನನ್ನು ಆಯ್ಕೆ ಮಾಡಿದೆ.ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಕೇರಳದ ಅನುಭವಿ ವೇಗಿ ಸಂದೀಪ್ ವಾರಿಯರ್ ಅವರನ್ನು ಬುಮ್ರಾ ಬದಲಿಗೆ ಆಯ್ಕೆ ಮಾಡಿಕೊಂಡಿದೆ. ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ವಾರಿಯರ್ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.ಇದೀಗ ಕೆಕೆಅರ್ ಪರ 5 ಪಂದ್ಯಗಳನ್ನಾಡಿದ ಅನುಭವ ಹೊಂದಿರುವ 31 ವರ್ಷದ ಅನುಭವಿ ವೇಗಿಯನ್ನು ಮುಂಬೈ ಇಂಡಿಯನ್ಸ್ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಇದಾಗ್ಯೂ ಮುಂಬೈ ಫ್ರಾಂಚೈಸಿ ಜ್ಯೆ ರಿಚರ್ಡ್ಸನ್ ಅವರ ಬದಲಿ ಆಟಗಾರನನ್ನು ಹೆಸರಿಸಿಲ್ಲ.ಈ ಬಾರಿಯ ಐಪಿಎಲ್​ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ ಇಬ್ಬರು ಬೌಲರ್​ಗಳು ಹೊರಗುಳಿದಿದ್ದರು. ಬೆನ್ನು ನೋವಿನ ಕಾರಣ ಬುಮ್ರಾ ಹೊರಗುಳಿದರೆ, ಕಾಲಿನ ಗಾಯದ ಹಿನ್ನಲೆ ಆಸ್ಟ್ರೇಲಿಯಾ ವೇಗಿ ಜ್ಯೆ ರಿಚರ್ಡ್ಸನ್ ಟೂರ್ನಿಯಿಂದ ಹಿಂದೆ ಸರಿದಿದ್ದರು.ಇದೀಗ ಬುಮ್ರಾ ಬದಲಿ ಆಟಗಾರನನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಆಯ್ಕೆ ಮಾಡಿದ್ದು, ಶೀಘ್ರದಲ್ಲೇ ಜ್ಯೆ ರಿಚರ್ಡ್ಸನ್ ಅವರ ರಿಪ್ಲೇಸ್​ಮೆಂಟ್ ಆಟಗಾರನನ್ನು ಪ್ರಕಟಿಸುವ ಸಾಧ್ಯತೆಯಿದೆ.ಮುಂಬೈ ಇಂಡಿಯನ್ಸ್ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಜೋಫ್ರಾ ಆರ್ಚರ್, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣ್‌ದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್‌ಡಾರ್ಫ್, ಆಕಾಶ್ ಮಧ್ವಾಲ್, ಕ್ಯಾಮರೋನ್ ಗ್ರೀನ್, ಜ್ಯೆ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ದುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್.

source https://tv9kannada.com/photo-gallery/cricket-photos/ipl-2023-sandeep-warrior-joins-mumbai-indians-as-jasprit-bumrahs-replacement-kannada-news-zp-au50-546579.html

Views: 0

Leave a Reply

Your email address will not be published. Required fields are marked *