
16ನೇ ಆವೃತ್ತಿಯ ಐಪಿಎಲ್ನಲ್ಲಿ ಇಂದು ಮೊದಲ ಡಬಲ್ ಹೆಡರ್ ದಿನವಾಗಿದ್ದು, ದಿನದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಹೆಚ್ಚು ಯುವ ಆಟಗಾರರಿಂದ ಕೂಡಿದೆ. ಶಾರುಖ್ ಖಾನ್, ಬಾನುಕಾ ರಾಜಪಕ್ಷ, ಸಿಕಂದರ್ ರಾಜ, ಸ್ಯಾಮ್ ಕುರ್ರನ್, ರಿಶಿ ಧವನ್, ರಾಹುಲ್ ಚಹರ್, ಅರ್ಶ್ದೀಪ್ ಸಿಂಗ್ ಪ್ರಮುಖ ಆಟಗಾರರಾಗಿದ್ದಾರೆ. ಇತ್ತ ಕೆಕೆಆರ್ ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ಕಣಕ್ಕಿಳಿಯುತ್ತಿದೆ. ನಿತೀಶ್ ರಾಣಾಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದ್ದು , ಅವರಿಗೆ ಇದೊಂದು ಅಗ್ನಿ ಪರಿಕ್ಷೆ ಎನ್ನಬಹುದು. ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಥಾಕೂರ್, ವರುಣ್ ಚಕ್ರವರ್ತಿ, ರೆಹಮ್ಮದುಲ್ಲ ಗುರ್ಬಜ್, ಫರ್ಗುಸನ್, ಉಮೇಶ್ ಯಾದವ್ರಂತಹ ಸ್ಟಾರ್ ಆಟಗಾರರಿದ್ದಾರೆ.
Views: 0