
ಐಪಿಎಲ್ನಲ್ಲಿ ಇಂದು ಎರಡನೇ ಡಬಲ್ ಹೆಡರ್ ದಿನ. ಇಂದಿನ ಮೊದಲ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಭುವನೇಶ್ವರ್ ಕುಮಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಕಳೆದ ವರ್ಷದ ರನ್ನರ್ ಅಪ್ ತಂಡ ರಾಜಸ್ಥಾನ ಇಂದು ಐಪಿಎಲ್ 16ನೇ ಸೀಸನ್ ಆರಂಭಿಸಲಿದ್ದರೆ, ಹೈದರಾಬಾದ್ ತನ್ನ ಹೊಸ ತಂಡದೊಂದಿಗೆ ಮೈದಾನಕ್ಕೆ ಪ್ರವೇಶಿಸಲಿದೆ. ಇಂದು ರಾಜಸ್ಥಾನದ ಸ್ಫೋಟಕ ಬ್ಯಾಟಿಂಗ್ ಹಾಗೂ ಹೈದರಾಬಾದ್ ತಂಡದ ಬಿರುಸಿನ ಬೌಲಿಂಗ್ ನಡುವೆ ಹಣಾಹಣಿ ನಡೆಯಲಿದೆ. ಏಡೆನ್ ಮಾರ್ಕ್ರಾಮ್ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಲಿದ್ದಾರೆ. ಮಾರ್ಕ್ರಾಮ್ ತಡವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
Views: 0