Rohits Sharma: RCB ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ದಾಖಲೆ ಬರೆದ ರೋಹಿತ್ ಶರ್ಮಾ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ 5ನೇ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅದು ಅಂತಿಂಥ ದಾಖಲೆಯಲ್ಲ ಎಂಬುದೇ ಮತ್ತೊಂದು ವಿಶೇಷ.ಹೌದು, ಆರ್​ಸಿಬಿ ವಿರುದ್ಧ ಟಾಸ್​ಗೆ ಆಗಮಿಸುತ್ತಿದಂತೆ ರೋಹಿತ್ ಶರ್ಮಾ 200 ಟಿ20 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡ ವಿಶೇಷ ಸಾಧನೆ ಮಾಡಿದರು. ಅಂದರೆ ಟಿ20 ಕ್ರಿಕೆಟ್​ನಲ್ಲಿ​ (ಐಪಿಎಲ್, ಟಿ20ಐ) ಈ ಸಾಧನೆ ಮಾಡಿರುವುದು ಕೇವಲ ಮೂವರು ಆಟಗಾರರು ಮಾತ್ರ.ಈ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಧೋನಿ ಸಿಎಸ್​ಕೆ, ರೈಸಿಂಗ್ ಪುಣೆ ಜೈಂಟ್ಸ್​ ಹಾಗೂ ಟೀಮ್ ಇಂಡಿಯಾ ಟಿ20 ತಂಡವನ್ನು ಮುನ್ನಡೆಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಅಂದರೆ ಟಿ20 ಕ್ರಿಕೆಟ್​ನಲ್ಲಿ ಬರೋಬ್ಬರಿ 307 ಪಂದ್ಯಗಳಲ್ಲಿ ಧೋನಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.ಹಾಗೆಯೇ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡಾರೆನ್ ಸಮಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಸಮಿ ವೆಸ್ಟ್ ಇಂಡೀಸ್ ಟಿ20 ತಂಡ, ಸಿಪಿಎಲ್ ಹಾಗೂ ಪಿಎಸ್​ಎಲ್​ ತಂಡಗಳನ್ನು ಒಳಗೊಂಂಡಂತೆ ಒಟ್ಟು 208 ಟಿ20 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.ಇದೀಗ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ಒಟ್ಟು 200 ಟಿ20 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡ ಹಿರಿಮೆ ಪಾತ್ರರಾಗಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

source https://tv9kannada.com/photo-gallery/cricket-photos/rohits-sharmas-record-players-with-200-t20-matches-as-captain-kannada-news-zp-au50-547998.html

Views: 0

Leave a Reply

Your email address will not be published. Required fields are marked *