Entertainment: ಲವ್ ಸ್ಟೋರಿ ಆಧಾರಿತ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿದ್ದ ನಟಿ ರಶ್ಮಿಕಾ ಮಂದಣ್ಣ, ಇದೀಗ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ನ 2ನೇ ತೆಲುಗು ಪ್ರಾಜೆಕ್ಟ್ ಇದಾಗಿದ್ದು, ಸಖತ್ ಥ್ರಿಲ್ ನೀಡುವ ಕಥೆ ಹೊಂದಿದೆ.
![](https://samagrasuddi.co.in/wp-content/uploads/2023/04/IMG_20230409_080101_966.jpg)
- ಮಹಿಳಾ ಪ್ರಧಾನ ಸಿನಿಮಾದಲ್ಲಿ ರಶ್ಮಿಕಾ
- ಡ್ರೀಮ್ ವಾರಿಯರ್ ಪಿಕ್ಚರ್ಸ್ ನ 2ನೇ ತೆಲುಗು ಪ್ರಾಜೆಕ್ಟ್
- ಸಖತ್ ಥ್ರಿಲ್ ನೀಡುವ ಕಥೆ ಹೊಂದಿರುವ ಸಿನಿಮಾ
ಖಾಕಿ, ಖೈದಿ, ಸುಲ್ತಾನ್ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಡ್ರೀಮ್ ವಾರಿಯರ್ ಪಿಕ್ಚರ್ಸ್ ತನ್ನ 2ನೇ ತೆಲುಗು ಪ್ರಾಜೆಕ್ಟ್ ಆರಂಭಿಸಿದೆ. ವಿಶಿಷ್ಟವಾದ ಕಥಾಹಂದರ ಮತ್ತು ಉತ್ತಮ ನಿರ್ಮಾಣ ಮೌಲ್ಯಗಳಿಗೆ ಹೆಸರುವಾಸಿಯಾಗಿರುವ ಈ ಸಂಸ್ಥೆಯು ‘ರೇನ್ಬೋ’ ಎಂಬ ಹೊಸ ಚಲನಚಿತ್ರವನ್ನು ನಿರ್ಮಿಸುವುದಾಗಿ ಘೋಷಿಸಿದೆ. ಏಪ್ರಿಲ್ 7ರಿಂದ ಚಿತ್ರೀಕರಣ ಆರಂಭವಾಗಲಿದೆ.
ಇಷ್ಟುದಿನ ಲವ್ ಸ್ಟೋರಿ ಹೊಂದಿದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ, ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ‘ರೇನ್ಬೋ’ ಸಿನಿಮಾದಲ್ಲಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ನಲ್ಲಿ ಎಸ್ಆರ್ ಪ್ರಕಾಶ್ ಬಾಬು ಮತ್ತು ಎಸ್ಆರ್ ಪ್ರಭು ಈ ಬ್ರೀಜಿ ರೊಮ್ಯಾಂಟಿಕ್ ಫ್ಯಾಂಟಸಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಲ್ಲಾ ವಯೋಮಾನದ ಪ್ರೇಕ್ಷಕರಿಗೆ ‘ರೇನ್ಬೋ’ ವಿಶಿಷ್ಟ ಸಿನಿಮಾ ಅನುಭವ ನೀಡಲಿದೆ. ಚೊಚ್ಚಲ ನಿರ್ದೇಶಕ ಶಾಂತರುಬನ್ ನಿರ್ದೇಶನದ ಈ ಚಿತ್ರದಲ್ಲಿ ನಟ ದೇವ್ ಮೋಹನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. KM ಜಸ್ಟಿನ್ ಪ್ರಭಾಕರನ್ ಸಂಗೀತ ನೀಡುತ್ತಿದ್ದು, ಭಾಸ್ಕರನ್ ಛಾಯಾಗ್ರಹಣ ಮಾಡುತ್ತಿದ್ದಾರೆ.
ಹೊಸ ಸಿನಿಮಾದ ಘೋಷಣೆಯ ಸಂದರ್ಭದಲ್ಲಿ ನಿರ್ಮಾಪಕ ಎಸ್ಆರ್ ಪ್ರಭು ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ‘ರೇನ್ಬೋ’ ಚಿತ್ರವನ್ನು ನಿರ್ಮಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಇದು ದೇಶಾದ್ಯಂತ ಎಲ್ಲಾ ವಯೋಮಾನದ ಪ್ರೇಕ್ಷಕರ ಮನಗೆಲ್ಲಲಿದೆ.
‘ರೇನ್ಬೋ’ ತೆಲುಗು ಚಿತ್ರರಂಗದಲ್ಲಿ ಒಂದು ರೀತಿಯ ರೊಮ್ಯಾಂಟಿಕ್ ಫ್ಯಾಂಟಸಿ ಕಥೆಯಾಗಿದೆ ಎಂದು ನಿರ್ದೇಶಕ ಶಾಂತರುಬನ್ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ಅದ್ಭುತವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿನ ಕಥೆ ಮತ್ತು ಸೃಜನಶೀಲತೆ ಪ್ರತಿಯೊಬ್ಬ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ತಿಳಿದುಬಂದಿದೆ.
ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ”ಹುಡುಗಿಯರ ದೃಷ್ಟಿಕೋನದಲ್ಲಿ ಹೇಳುವ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದೇನೆ. ಈ ಪಾತ್ರದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗಿದೆ. ‘ರೇನ್ಬೋ’ ಖಂಡಿತವಾಗಿಯೂ ನಿಮ್ಮನ್ನು ರಂಜಿಸುವ ಮತ್ತು ರೋಮಾಂಚನಗೊಳಿಸುವ ಚಿತ್ರ. ಹುಡುಗಿಯ ಜೊತೆ ಪ್ರೇಕ್ಷಕರ ಪಯಣ ಕ್ರೇಜಿ ರೈಡ್ ಆಗಿರುತ್ತದೆ ಎಂದಿದ್ದಾರೆ.