ODI World Cup 2023: ಏಕದಿನ ವಿಶ್ವಕಪ್​ಗೆ ನೇರವಾಗಿ ಆಯ್ಕೆಯಾಗುವ 8 ತಂಡಗಳು ಯಾವುವು ಗೊತ್ತಾ?

ಐಸಿಸಿ ಏಕದಿನ ವಿಶ್ವಕಪ್​ನ ಸೂಪರ್ ಲೀಗ್​ ಪಾಯಿಂಟ್ ಟೇಬಲ್​ ಪ್ರಕಟಗೊಂಡಿದೆ. ನೂತನ ಶ್ರೇಯಾಂಕ ಪಟ್ಟಿಯಲ್ಲಿ ಆತಿಥೇಯ ಭಾರತ ಸೇರಿದಂತೆ 7 ತಂಡಗಳು ಏಕದಿನ ವಿಶ್ವಕಪ್​ಗೆ ನೇರ ಅರ್ಹತೆಯನ್ನು ದೃಢೀಕರಿಸಿಕೊಂಡಿದೆ. ಇನ್ನು 8ನೇ ಸ್ಥಾನದಲ್ಲಿ ಸೌತ್ ಆಫ್ರಿಕಾ ತಂಡ ಕಾಣಿಸಿಕೊಂಡಿದ್ದು, ಹರಿಣರು ಕೂಡ ಏಕದಿನ ವಿಶ್ವಕಪ್​ಗೆ ನೇರ ಅರ್ಹತೆ ಪಡೆಯುವುದು ಬಹುತೇಕ ಖಚಿತವಾಗಿದೆ.ಅಂದರೆ ಐಸಿಸಿ ಸೂಪರ್​ ಲೀಗ್ ಶ್ರೇಯಾಂಕ ಪಟ್ಟಿಯಲ್ಲಿರುವ 13 ತಂಡಗಳಲ್ಲಿ ಮೊದಲ 8 ಸ್ಥಾನ ಪಡೆಯುವ ತಂಡಗಳು ಏಕದಿನ ವಿಶ್ವಕಪ್​ಗೆ ಆಯ್ಕೆಯಾಗಲಿದೆ. ಅದರಂತೆ ಈಗಾಗಲೇ 7 ತಂಡಗಳು ಅರ್ಹತೆ ಪಡೆದುಕೊಂಡಿದ್ದು, 8ನೇ ಸ್ಥಾನದಲ್ಲಿ ಸೌತ್ ಆಫ್ರಿಕಾ ತಂಡವಿದೆ.ಆದರೆ ಇಲ್ಲಿ ಐರ್ಲೆಂಡ್ ಹಾಗೂ ಬಾಂಗ್ಲಾದೇಶ್ ನಡುವೆ ಒಂದು ಏಕದಿನ ಸರಣಿ ನಡೆಯಬೇಕಿದ್ದು, ಆ ಸರಣಿಯ ಬಳಿಕವಷ್ಟೇ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಸದ್ಯ 8ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡವು ವಿಶ್ವಕಪ್​ಗೆ ನೇರ ಅರ್ಹತೆ ಪಡೆಯುವುದು ಬಹುತೇಕ ಖಚಿತ. ಏಕೆಂದರೆ ಐರ್ಲೆಂಡ್ ತಂಡವು ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದರೆ ಮಾತ್ರ ಸೌತ್ ಆಫ್ರಿಕಾ ತಂಡದ ಸ್ಥಾನದಲ್ಲಿ ಬದಲಾವಣೆಯಾಗಲಿದೆ. 2023 ರ ಏಕದಿನ ವಿಶ್ವಕಪ್​ಗೆ ನೇರವಾಗಿ ಅರ್ಹತೆ ಪಡೆದುಕೊಂಡ 7+1 ತಂಡಗಳು ಈ ಕೆಳಗಿನಂತಿವೆ...1- ಭಾರತ2- ಇಂಗ್ಲೆಂಡ್3- ನ್ಯೂಜಿಲೆಂಡ್4- ಆಸ್ಟ್ರೇಲಿಯಾ5- ಬಾಂಗ್ಲಾದೇಶ್6- ಪಾಕಿಸ್ತಾನ್7- ಅಫ್ಘಾನಿಸ್ತಾನ್8- ಸೌತ್ ಆಫ್ರಿಕಾಬಾಂಗ್ಲಾದೇಶ್ ನಡುವಣ 3 ಪಂದ್ಯಗಳ ಏಕದಿನ ಸರಣಿಯನ್ನು ಐರ್ಲೆಂಡ್ ತಂಡವು 3-0 ಅಂತರದಿಂದ ಗೆದ್ದರೆ ಮಾತ್ರ ಸೌತ್ ಆಫ್ರಿಕಾ 9ನೇ ಸ್ಥಾನಕ್ಕೆ ಕುಸಿಯಲಿದೆ. ಹೀಗಾದ್ರೆ ಮಾತ್ರ ಐರ್ಲೆಂಡ್ ತಂಡ ನೇರವಾಗಿ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ.ಈ 8 ತಂಡಗಳನ್ನು ಹೊರತುಪಡಿಸಿ ಉಳಿದ 5 ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಬೇಕಾಗುತ್ತದೆ. ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ನೆದರ್​​ಲ್ಯಾಂಡ್ಸ್ ಹಾಗೂ ಐರ್ಲೆಂಡ್ (ಬಾಂಗ್ಲಾದೇಶ್ ವಿರುದ್ಧ 3-0 ಅಂತರದಿಂದ ಗೆಲ್ಲದಿದ್ರೆ) ತಂಡಗಳು ಕಾಣಿಸಿಕೊಳ್ಳಲಿದೆ. ಈ ತಂಡಗಳ ಜೊತೆ ಇತರೆ 5 ತಂಡಗಳು ಕೂಡ ಸೇರ್ಪಡೆಯಾಗಲಿದೆ. ಅಂದರೆ ಏಕದಿನ ವಿಶ್ವಕಪ್​ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದ್ದು, ಇದರಲ್ಲಿ 2 ತಂಡಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಆಯ್ಕೆಯಾಗಲಿದೆ. ಅದರಂತೆ 2023 ರ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದೆ.

source https://tv9kannada.com/photo-gallery/cricket-photos/icc-odi-world-cup-2023-which-8-teams-have-directly-qualified-for-odi-world-cup-kannada-news-zp-au50-549631.html

Leave a Reply

Your email address will not be published. Required fields are marked *