IPL 2023: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಇಬ್ಬರು ಆಟಗಾರರ ಎಂಟ್ರಿಗೆ ಡೇಟ್ ಫಿಕ್ಸ್

IPL 2023 RCB: ಐಪಿಎಲ್​ನ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶೀಘ್ರದಲ್ಲೇ ಇಬ್ಬರು ಸ್ಟಾರ್ ಆಟಗಾರರ ಆಗಮನವಾಗಲಿದೆ. ಆದರೆ ಇವರು ಬದಲಿ ಆಟಗಾರರಲ್ಲ. ಬದಲಾಗಿ ಈ ಬಾರಿಯ ಹರಾಜಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಉಳಿಸಿಕೊಂಡಿದ್ದ ಇಬ್ಬರು ಆಟಗಾರರು ಕಾರಣಾಂತರಗಳಿಂದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಇಬ್ಬರು ಕೂಡ ಒಂದೇ ವಾರದೊಳಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಆರ್​ಸಿಬಿ ತಂಡದ ಡೈರೆಕ್ಟರ್ ಮೈಕ್ ಹೆಸ್ಸನ್ ಖಚಿತಪಡಿಸಿದ್ದಾರೆ.ಹೌದು, ಆರ್​ಸಿಬಿ ತಂಡದ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಸ್ಪಿನ್ ಆಲ್​ರೌಂಡರ್ ವನಿಂದು ಹಸರಂಗ ಇದೇ ವಾರ ತಂಡವನ್ನು ಕೂಡಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ನಿಮ್ಮಿತ್ತ ಶ್ರೀಲಂಕಾ ಸ್ಪಿನ್ನರ್ ಮೊದಲ ಎರಡು ಪಂದ್ಯಗಳಿಗೆ ಗೈರಾಗಿದ್ದರು. ಇದೀಗ ಹಸರಂಗ ಅವರು ಏಪ್ರಿಲ್ 10 ರೊಳಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೆಸ್ಸನ್ ತಿಳಿಸಿದ್ದಾರೆ.ಏಪ್ರಿಲ್ 10 ರಂದು ಆರ್​ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯವಾಡಲಿದ್ದು, ಈ ಪಂದ್ಯದ ಆಯ್ಕೆಗೆ ವನಿಂದು ಹಸರಂಗ ಲಭ್ಯರಿರಲಿದ್ದಾರೆ ಎಂದು ಆರ್​ಸಿಬಿ ನಿರ್ದೇಶಕರು ತಿಳಿಸಿದ್ದಾರೆ.
ಇನ್ನು ಮೊಣಕಾಲಿನ ಗಾಯದ ಸಮಸ್ಯೆಯ ಕಾರಣ ಆರ್​ಸಿಬಿ ತಂಡದಿಂದ ಹೊರಗುಳಿದಿರುವ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್​ವುಡ್ ಏಪ್ರಿಲ್ 14 ರಂದು ತಂಡವನ್ನು ಸೇರಿಕೊಳ್ಳುವುದನ್ನು ಎಂದು ಮೈಕ್ ಹೆಸ್ಸನ್ ಖಚಿತಪಡಿಸಿದ್ದಾರೆ. ಏಪ್ರಿಲ್ 15 ರಂದು ಆರ್​ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಜೋಶ್ ಹ್ಯಾಝಲ್​ವುಡ್ ಕಣಕ್ಕಿಳಿಯುವ ವಿಶ್ವಾಸವಿದೆ ಎಂದು ಮೈಕ್ ಹೆಸ್ಸನ್ ತಿಳಿಸಿದ್ದಾರೆ.ಇತ್ತ ಆರ್​ಸಿಬಿ ವೇಗಿ ರೀಸ್ ಟೋಪ್ಲಿ ಗಾಯಗೊಂಡಿದ್ದು, ಕೆಕೆಆರ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಇದರ ನಡುವೆ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್​ವುಡ್ ತಂಡಕ್ಕೆ ಆಗಮಿಸುತ್ತಿರುವುದು ಆರ್​ಸಿಬಿ ಪಾಲಿಗೆ ಶುಭ ಸೂಚನೆ ಎನ್ನಬಹುದು.ಇನ್ನು ವನಿಂದು ಹಸರಂಗ ತಂಡವನ್ನು ಕೂಡಿಕೊಂಡರೆ, ಪ್ಲೇಯಿಂಗ್ ಇಲೆವೆನ್​ನಿಂದ ಮೈಕೆಲ್ ಬ್ರೇಸ್​ವೆಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಸೀಸನ್​ನಲ್ಲಿ ಹಸರಂಗ (26) ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದಿದ್ದರು. ಹೀಗಾಗಿ ಅವರಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಗುವುದು ಖಚಿತ ಎನ್ನಬಹುದು.
ಒಟ್ಟಿನಲ್ಲಿ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸಿ ಹೊಸ ಹುಮ್ಮಸ್ಸಿನಲ್ಲಿರುವ ಆರ್​ಸಿಬಿ ತಂಡಕ್ಕೆ ಇಬ್ಬರು ಪ್ರಮುಖ ಆಟಗಾರರ ಎಂಟ್ರಿ ಕೊಟ್ಟರೆ ಫಾಫ್ ಡುಪ್ಲೆಸಿಸ್ ಪಡೆಯು ಮತ್ತಷ್ಟು ಬಲಿಷ್ಠವಾಗಲಿದೆ.RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

source https://tv9kannada.com/photo-gallery/cricket-photos/ipl-2023-rcb-confirms-when-josh-hazelwood-and-wanindu-hasaranga-will-join-team-kannada-news-zp-au50-550454.html

Views: 0

Leave a Reply

Your email address will not be published. Required fields are marked *