Good Friday 2023 : ಗುಡ್ ಫ್ರೈಡೆ ಆಚರಣೆ ಮತ್ತು ಮಹತ್ವದ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ…!

ಇತಿಹಾಸವನ್ನು ಅವಲೋಕಿಸಿದರೆ.. ಯೇಸುಕ್ರಿಸ್ತನನ್ನು ಶಿಲುಬೆಗೇರಿದರೂ ನಂತರದ ಮೂರು ದಿನಗಳ ಕಾಲ ಆತ ಬದುಕಿದ್ದನ್ನು ಕಂಡು ಎಲ್ಲರೂ ಅಚ್ಚರಿಗೊಳಗಾದರು. ಆದರೆ ಆತನನ್ನು ಶಿಲುಬೆಗೇರಿಸಿದ ದಿನವು ಶುಕ್ರವಾರವಾದ ಕಾರಣ, ಇದನ್ನು ಪವಿತ್ರ ಶುಕ್ರವಾರ ಅಥವಾ ಬ್ಲಾಕ್ ಫ್ರೈಡೇ ಎಂದೂ ಕರೆಯಲಾಗುತ್ತದೆ.

ಸಮಾಜದ ಎಲ್ಲಾ ವರ್ಗದ ಜನರ ಉದ್ಧಾರಕ್ಕಾಗಿ ಯೇಸುಕ್ರಿಸ್ತನು ತನ್ನ ಜೀವನವನ್ನು ತ್ಯಾಗ ಮಾಡಿದನೆಂದು ಹಲವರು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ಏಪ್ರಿಲ್ 7 ರಂದು ಗುಡ್ ಫ್ರೈಡೆ (ಶುಭ ಶುಕ್ರವಾರ) ಹಬ್ಬವನ್ನು ಆಚರಿಸಲಾಗುವುದು.
ಈ ಸಂದರ್ಭದಲ್ಲಿ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಈಗ ತಿಳಿಯೋಣ..

ಯೇಸು ಕ್ರಿಸ್ತನು ಮತ್ತೆ ಬದುಕಿ ಬರುತ್ತಾನೆಂದು ನಂಬಿ ಕ್ರೈಸ್ತರು ಆಚರಿಸುವ ಈಸ್ಟರ್ (ಭಾನುವಾರ) ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಗುಡ್ ಫ್ರೈಡೆ (ಶುಭ ಶುಕ್ರವಾರ) ಬರುತ್ತದೆ.
ಇವುಗಳನ್ನು ಶೋಕ ದಿನಗಳು (ಲೆಂಟ್ ದಿನಗಳು) ಎಂದು ಪರಿಗಣಿಸಲಾಗುತ್ತದೆ.
ಈ ಸಮಯದಲ್ಲಿ, ಕ್ರಿಶ್ಚಿಯನ್ನರು ಆಚರಣೆಗಳು ಅಥವಾ ವಿಶೇಷ ಹಬ್ಬಗಳನ್ನು ಆಯೋಜಿಸುವುದಿಲ್ಲ. ಆದರೆ ಕಟ್ಟುನಿಟ್ಟಾದ ಉಪವಾಸ ದೀಕ್ಷೆಗಳನ್ನು ಅನುಸರಿಸಲಾಗುತ್ತದೆ. ಮಾಂಸ ತಿನ್ನುವುದಿಲ್ಲ.

ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಯೇಸುಕ್ರಿಸ್ತನನ್ನು ದೇವರ ಮಗ ಎಂದು ನಂಬಲಾಗುತ್ತದೆ. ಪ್ರಪಂಚದ ಅಂಧಕಾರವನ್ನು ಹೋಗಲಾಡಿಸಲು ಆತನು ಬಂದನೆಂದು ನಂಬಲಾಗಿದೆ. ಆದರೆ ಯೆಹೂದ್ಯರು ಯೇಸುವಿನ ಪ್ರಯತ್ನಗಳನ್ನು ವಿಫಲಗೊಳಿಸಿದರು. ಅವರು ತಮ್ಮ ಶ್ರೇಷ್ಠತೆಗಾಗಿ ಯೇಸುಕ್ರಿಸ್ತನನ್ನು ವಿರೋಧಿಸುತ್ತಾರೆ. ಅಲ್ಲಿಗೆ ನಿಲ್ಲದೆ, ಯೇಸುವನ್ನು ಶಿಲುಬೆಯಲ್ಲಿ ಗಲ್ಲಿಗೇರಿಸಲಾಯಿತು. ಆ ಸಮಯದಲ್ಲಿ ಯೇಸುಕ್ರಿಸ್ತನು ಹೀಗೆ ಹೇಳಿದನು.

“ದೇವರೇ! ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲದ ಕಾರಣ ಅವರನ್ನು ಕ್ಷಮಿಸಿ ಬಿಡು..” ಎಂದು ಹೇಳುತ್ತಾನೆ. ಅಂದರೆ ಶತ್ರುಗಳಿಗೂ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಮಾತ್ರ ಆ ದಿನವನ್ನು ಗುಡ್ ಫ್ರೈಡೆ  (ಶುಭ ಶುಕ್ರವಾರ) ಎಂದು ಕರೆಯುತ್ತಾರೆ.

ಗುಡ್ ಫ್ರೈಡೆಯಂದು ಚರ್ಚ್‌ಗಳಲ್ಲಿ ಯೇಸುಕ್ರಿಸ್ತನ ಸ್ಮರಣೆಗಾಗಿ ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಈ ವಿಶೇಷ ದಿನದಂದು ಪಾದ್ರಿಗಳು ಭಕ್ತರಿಗೆ  ಸಂದೇಶಗಳನ್ನು ತಲುಪಿಸುತ್ತಾರೆ.
ಯೇಸುಕ್ರಿಸ್ತನ ಶಿಲುಬೆಗೇರಿಸಲು ಕಾರಣಗಳೇನೆಂಬುದನ್ನು ತಿಳಿಸುತ್ತಾರೆ. ಈ ಸಮಯದಲ್ಲಿ ಜುದಾಸ್ ಯೇಸುಕ್ರಿಸ್ತನನ್ನು ಕೇವಲ 30 ಬೆಳ್ಳಿಯ ನಾಣ್ಯಗಳಿಗೆ ಹೇಗೆ ಮೋಸ ಮಾಡಿದರು ಎಂಬ ಸಂಪೂರ್ಣ ಕಥೆಗಳನ್ನು ಹೇಳುತ್ತಾರೆ. ಬಳಿಕ ಆ ದೇವರನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಕೆಲವರು ಗುಡ್ ಫ್ರೈಡೆ ಯನ್ನು ಬಹಳ ಸಂತೋಷದ ದಿನವೆಂದು ಪರಿಗಣಿಸುತ್ತಾರೆ. ಏಕೆಂದರೆ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ಮೇಲೆ ತನ್ನ ರಕ್ತದಿಂದ ಎಲ್ಲಾ ಜನರನ್ನು ಅವರ ಪಾಪಗಳಿಂದ ರಕ್ಷಿಸಿದನು ಎಂದು ನಂಬಲಾಗುತ್ತದೆ.

ಮತ್ತು ಕೆಲವು ಕ್ರೈಸ್ತರು ಗುಡ್ ಫ್ರೈಡೆ ಯಂದು (ಶುಭ ಶುಕ್ರವಾರ) ತಮ್ಮ ಪೂರ್ವಜರ ಸಮಾಧಿಗಳಿಗೆ ಭೇಟಿ ನೀಡುತ್ತಾರೆ ಮತ್ತು   ಮೇಣದಬತ್ತಿಗಳನ್ನು ಬೆಳಗಿಸಿ ಸಂತಾಪ ಸೂಚಿಸುತ್ತಾರೆ. ಅನೇಕ ಕ್ರಿಶ್ಚಿಯನ್ನರು ಯೇಸುಕ್ರಿಸ್ತನ ಮರಣದ ಪ್ರತೀಕವಾಗಿ ಶಿಲುಬೆಗಳು, ಕ್ರಿಸ್ತನ ಚಿತ್ರಗಳು ಮತ್ತು ಪ್ರತಿಮೆಗಳ ಮೇಲೆ ಕಪ್ಪು ಬಟ್ಟೆಯನ್ನು ಹೊದಿಸುತ್ತಾರೆ.

ಕ್ರೈಸ್ತರು ಗುಡ್ ಫ್ರೈಡೇ ಬರುವುದಕ್ಕಿಂತ 40 ದಿನಗಳ ಮೊದಲಿನಿಂದಲೇ ತಮ್ಮ ಮನೆಗಳಲ್ಲಿ ಉಪವಾಸ ಮತ್ತು ಪ್ರಾರ್ಥನೆಗಳನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಸಸ್ಯಾಹಾರಿ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಈ ವಿಶೇಷ ದಿನದಂದು ಚರ್ಚುಗಳಿಗೆ ಹೋಗಿ ಯೇಸುವಿನ ಸ್ಮರಣೆ ಮಾಡಿ ಪ್ರಾರ್ಥಿಸುತ್ತಾರೆ. ಈ ಸಮಯದಲ್ಲಿ ಕೆಲವು ಚರ್ಚ್‌ಗಳಲ್ಲಿ ಗಂಟೆಗಳನ್ನು ಬಾರಿಸಲಾಗುತ್ತದೆ. ಕೆಲವು ಚರ್ಚುಗಳಲ್ಲಿ ಪ್ರಾರ್ಥನೆಯನ್ನು ಮುಗಿಸುವ ಮೊದಲು ಗಂಟೆಗಳನ್ನು 33 ಬಾರಿ ಬಾರಿಸಲಾಗುತ್ತದೆ.
ಈಸ್ಟರ್ ಭಾನುವಾರದಂದು, ಜನರು ಯೇಸುವು ಜೀವಂತವಾಗಿದ್ದಾನೆಂದು ನಂಬಿ ಆರಾಧಿಸುತ್ತಾರೆ. ನಂತರ ಪರಸ್ಪರ ಉಡುಗೊರೆಗಳನ್ನು ನೀಡುವ ಮೂಲಕ ಗುಡ್ ಫ್ರೈಡೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

The post Good Friday 2023 : ಗುಡ್ ಫ್ರೈಡೆ ಆಚರಣೆ ಮತ್ತು ಮಹತ್ವದ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ…! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/p2FDPHO
via IFTTT

Views: 0

Leave a Reply

Your email address will not be published. Required fields are marked *