Ajinkya Rahane: ಪಂದ್ಯ ಮುಗಿದ ಬಳಿಕ ತನ್ನ ಸ್ಫೋಟಕ ಬ್ಯಾಟಿಂಗ್ ಬಗ್ಗೆ ಅಜಿಂಕ್ಯಾ ರಹಾನೆ ಹೇಳಿದ್ದೇನು ಗೊತ್ತೇ?

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಸಂಪೂರ್ಣ ಪಂದ್ಯದ ಪ್ರಮುಖ ಹೈಲೇಟ್ ಅಜಿಂಕ್ಯಾ ರಹಾನೆ.ಭಾರತ ಟೆಸ್ಟ್ ತಂಡದ ಪರ ಆಡುವ ರಹಾನೆ ಈರೀತಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಕೇವಲ 27 ಎಸೆತಗಳಲ್ಲಿ 7 ಫೋರ್, 3 ಸಿಕ್ಸರ್ ಸಿಡಿಸಿ 61 ರನ್ ಚಚ್ಚಿದ ರಹಾನೆ ವೇಗದ ಅರ್ಧಶತಕ ಕೂಡ ಬಾರಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ರಹಾನೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ರಹಾನೆ, ನಾನು ಬ್ಯಾಟಿಂಗ್ ಮಾಡುವಾಗ ತುಂಬಾ ಖುಷಿ ಪಟ್ಟೆ. ನಾನು ಇಂದಿನ ಪಂದ್ಯದಲ್ಲಿ ಆಡುವ ಬಗ್ಗೆ ಟಾಸ್​ಗೆ ಕೆಲ ಸಮಯ ಇರುವಾಗ ತಿಳಿಯಿತು. ಫ್ಲೆಮಿಂಗ್ ನಾನು ಆಡುವ ಬಗ್ಗೆ ತಿಳಿಸಿದರು. ನನ್ನದು ದೇಶೀಯ ಟೂರ್ನಿ ಉತ್ತಮವಾಗಿತ್ತು. ನಾನು ಅದೇ ಮಾದರಿಯಲ್ಲಿ ಬ್ಯಾಟಿಂಗ್ ಮಾಡಿದೆ ಎಂದು ಹೇಳಿದ್ದಾರೆ.ನೀವು ಈಗ ಪಂದ್ಯವನ್ನು ಆಡುತ್ತಿದ್ದೀರಿ ಎಂದು ಭಾವಿಸಿ ಆಟವಾಡಬೇಕು. ಟೈಮಿಂಗ್ ಮೇಲೆ ಹೆಚ್ಚಿನ ಗಮನ ಹರಿಸಿದೆ. ಐಪಿಎಲ್ ದೊಡ್ಡ ಟೂರ್ನಮೆಂಟ್ ಆಗಿರುವುದರಿಂದ ಯಾವಾಗ ಅವಕಾಶ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ - ಅಜಿಂಕ್ಯಾ ರಹನೆವಾಂಖೆಡೆಯಲ್ಲಿ ನನಗೆ ಆಡಲು ಯಾವಾಗಲೂ ಖುಷಿ ಆಗುತ್ತದೆ. ನಾನು ಯಾವತ್ತೂ ಇಲ್ಲಿ ಟೆಸ್ಟ್ ಪಂದ್ಯವನ್ನು ಆಡಿಲ್ಲ. ನನಗೆ ವಾಂಖೆಡೆಯಲ್ಲಿ ಟೆಸ್ಟ್ ಆಡಬೇಕೆಂಬ ಆಸೆಯಿದೆ.  ಧೋನಿ ಹಾಗೂ ಫ್ಲೆಮಿಂಗ್ ಬಗ್ಗೆ ಪ್ರಮುಖ ವಿಚಾರ ಎಂದರೆ ಅವರು ಪ್ರತಿಯೊಬ್ಬ ಆಟಗಾರನಿಗೂ ಸ್ವಾತಂತ್ರ್ಯ ನೀಡುತ್ತಾರೆ. ನೀನು ಯಾವಾಗಲು ಆಡಲು ಸಿದ್ಧವಾಗಿರಬೇಕು ಎಂದು ಧೋನಿ ನನಗೆ ಹೇಳಿದ್ದಾರೆ ಎಂಬುದು ರಹಾನೆ ಮಾತು.ಸಿಎಸ್​ಕೆ ತಂಡದ ನಾಯಕ ಎಂಎಸ್ ಧೋನಿ ಮಾತನಾಡಿ, ನಮ್ಮ ತಂಡದ ಸ್ಪಿನ್ನರ್​ಗಳು ಮತ್ತು ವೇಗಿಗಳು ಉತ್ತಮ ಕಮ್​ಬ್ಯಾಕ್ ಮಾಡಿದ್ದಾರೆ. ರಹಾನೆ ಮತ್ತು ನಾನು ಸೀಸನ್​ನ ಆರಂಭದಲ್ಲೇ ಮಾತನಾಡಿಕೊಂಡಿದ್ದೇವೆ. ನಿನ್ನ ಬಲಕ್ಕೆ ತಕ್ಕಂತೆ ಆಡು ಎಂದು ನಾನು ಹೇಳಿದ್ದೆ. ಪಂದ್ಯ ಆಡುತ್ತಿರುವಾಗ ಎಂಜಾಯ್ ಮಾಡು. ಅವರು ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ ಎಂದು ಎಂಎಸ್​ಡಿ ಮಾತು.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ರೋಹಿತ್ ಶರ್ಮಾ 32 ರನ್ ಬಾರಿಸಿದರೆ, ಟಿಮ್ ಡೇವಿಡ್ 31 ರನ್ ಸಿಡಿಸಿದರು. ಸಿಎಸ್​ಕೆ ಪರ ರವೀಂದ್ರ ಜಡೇಜಾ 3, ತುಶಾರ್ ದೇಶಪಾಂಡೆ ಮತ್ತು ಮಿಚೆಲ್ ಸ್ಯಾಂಟನರ್ ತಲಾ 2 ವಿಕೆಟ್ ಪಡೆದರು.ಟಾರ್ಗೆಟ್ ಬೆನ್ನಟ್ಟಿದ ಸಿಎಸ್​ಕೆ ಮೊದಲ ಓವರ್​ನಲ್ಲಿ ಡ್ವೇನ್ ಕಾನ್ವೇ ವಿಕೆಟ್ ಕಳೆದುಕೊಂಡರೂ ರಹಾನೆ (61) ಹಾಗೂ ರುತುರಾಜ್ ಗಾಯಕ್ವಾಡ್ (ಅಜೇಯ 40) ಗೆಲುವಿಗೆ ಕಾರಣರಾದರು. 18.1 ಓವರ್​ನಲ್ಲಿ ಚೆನ್ನೈ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಜಯ ಸಾಧಿಸಿತು.

source https://tv9kannada.com/photo-gallery/cricket-photos/ajinkya-rahane-in-post-match-presentation-after-mi-vs-csk-ipl-2023-match-he-said-ms-dhini-told-me-to-prepare-well-vb-au48-552207.html

Leave a Reply

Your email address will not be published. Required fields are marked *