ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಟ. ಜೊತೆಗೆ ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕಿ, ಗಾಯಕ ಮತ್ತು ಮಾಡೆಲ್. ರೂಪೇಶ್ ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ರೂಪೇಶ್ ಇವರು 15 ಆಗಸ್ಟ್ 1991ರಂದು ಕಾಸರಗೋಡಿನ ಉಪ್ಪಳದಲ್ಲಿ ಜನಿಸಿದರು.
![](https://samagrasuddi.co.in/wp-content/uploads/2023/04/image-9.png)
Sanya Iyer : ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಬಿಗ್ ಬಾಸ್‌ನಿಂದ ಖ್ಯಾತಿ ಪಡೆದಿದ್ದರು. ಅಲ್ಲಿ ಅವರು ನಡೆದುಕೊಳ್ಳುವ ರೀತಿಯನ್ನು ನೋಡಿದ ನೆಟ್ಟಿಗರು ಇವರು ಪ್ರೀತಿಸುತ್ತಿದ್ದಾರೆ ಎಂದು ಭಾವಿಸಿದ್ದರು. ಇದರಿಂದಾಗಿ ಅವರಿಬ್ಬರು ಆಗಾಗ ಚರ್ಚೆಗೆ ಒಳಗಾಗುತ್ತಿದ್ದರು. ಇದೀಗ ರೂಪೇಶ್ ಶೆಟ್ಟಿ ಅವರು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಸಾನ್ಯಾ ಕುಟುಂಬದೊಂದಿಗಿನ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ಇಬರಿಬ್ಬರ ಮದುವೆ ಮಾತುಕಥೆ ಆಗಿದೆ ಎಂದು ಕಾಮೆಂಟ್ ಮಡುತ್ತಿದ್ದಾರೆ.
ಶೇರ್ ಮಾಡಿಕೊಂಡಿರುವ ಪೋಟೋಗಳಲ್ಲಿ ರೂಪೇಶ್ ಸಾನ್ಯಾ ಕುಟಂಬದೊಂದಿಗೆ ಹೆಚ್ಚು ಖುಷಿಯ ಕ್ಷಣಗಳನ್ನು ಅನುಭವಿಸುತ್ತಿದಾರೆ.
https://www.instagram.com/p/Cq0qV2CPrtY/?utm_source=ig_web_copy_link
ರೂಪೇಶ್ ಶೆಟ್ಟಿ ಮೊದಲಿಗೆ ಟಿವಿ ಚಾನೆಲ್ ನಲ್ಲಿ ನಿರೂಪಕನಾಗಿ ಕಾಣಿಸಿಕೊಂಡರು ಹಾಗೂ ಮಂಗಳೂರಿನಲ್ಲಿ ಆರ್ ಜೆಯಾಗಿ ಜನಪ್ರಿಯತೆ ಗಳಿಸಿದರು. ‘ದಿಬ್ಬಣ’ ಎಂಬ ತುಳು ಚಿತ್ರದಲ್ಲಿ ಕಿರು ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ರೂಪೇಶ್ ತಮಿಳಿನ ಅತ್ಯಂತ ಪ್ರಸಿದ್ಧಿ ಹೊಂದಿರುವ ಕೊಲವೆರಿ ಡಿ ಎಂಬ ಹಾಡನ್ನು ಪುನರ್ ನಿರ್ದೇಶಿಸಿ ಹಾಡಿದ್ದಾರೆ.
ಕನ್ನಡ ಬಿಗ್ ಬಾಸ್ ನ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ರೂಪೇಶ್ ಶೆಟ್ಟಿ, ಮೊದಲ ಒಟಿಟಿ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಟಿವಿ ಸೀಸನ್ಗೆ ಆಯ್ಕೆಯಾಗಿದ್ದರು. ಬಿಗ್ ಬಾಸ್ ಸೀಸನ್ ೯ರಲ್ಲೂ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
Source: https://zeenews.india.com/kannada/entertainment/roopesh-hetty-in-sanya-iyer-home-127916