Faf Duplessis: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್: ಏನು ಹೇಳಿದ್ರು ನೋಡಿ

ಐಪಿಎಲ್ 2023 ರಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ರಣ ರೋಚಕವಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಮ್ಯಾಚ್ ಕೊನೆಯ ಎಸೆತದ ವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.ಎಲ್​ಎಸ್​ಜಿಗೆ ಗೆಲ್ಲಲು ಕೊನೆಯ 1 ಎಸೆತದಲ್ಲಿ 1 ರನ್ ಬೇಕಿದ್ದಾಗ ಬೈಸ್ ಮೂಲಕ ರನ್ ಗಳಿಸಿ ರಾಹುಲ್ ಪಡೆ 1 ವಿಕೆಟ್​ನ ರೋಚಕ ಜಯ ಸಾಧಿಸಿತು. 200+ ರನ್ ಸಿಡಿಸಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಂಡಿದ್ದು ಮಾತ್ರ ದುರಾದೃಷ್ಟಕರ. ಪಂದ್ಯ ಮುಗಿದ ಬಳಿಕ ಮಾತನಾಡಿದ ಬೆಂಗಳೂರು ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದರು ನೋಡಿ.ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಫಾಫ್, ನಿಜಕ್ಕೂ ತುಂಬಾ ಬೇಸರವಾಗಿದೆ. ಮಧ್ಯಮ ಓವರ್​ನಲ್ಲಿ ಲಖನೌ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿತು.  ವಿಕೆಟ್ ಅನ್ನು ನೋಡಿದಾಗ 7-14 ಓವರ್ ನಿಧಾನವಾಗಿತ್ತು. ಕೊನೆಯ ಐದು ಓವರ್​ಗಳಲ್ಲಿ ಎಲ್ಲವು ಬದಲಾಯಿತು ಎಂದು ಹೇಳಿದ್ದಾರೆ.ಕೆಲವು ಹೊಡೆತಗಳು ಅದ್ಭುತವಾಗಿದ್ದವು. ಇವು ಒಳ್ಳೆಯದೆ. ಮಾರ್ಕಸ್ ಸ್ಟಾಯಿನಿಸ್ ಮತ್ತು ನಿಕೋಲಸ್ ಪೂರನ್ ಮಧ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು ನಮ್ಮ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಅವರ ಎರಡು ಓವರ್​ಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡರು - ಫಾಫ್ ಡುಪ್ಲೆಸಿಸ್.ಡೆತ್ ಓವರ್​ನಲ್ಲಿ ಬೌಲಿಂಗ್ ಮಾಡುವುದು ಸುಲಭದ ಕೆಲಸವಲ್ಲ. ಪಂದ್ಯದ ಮೇಲೆ ನೀವು ಹಿಡಿತ ಸಾಧಿಸಿದ್ದರೆ ಕಷ್ಟ ಆಗುವುದಿಲ್ಲ. ನಾನು ಬ್ಯಾಟಿಂಗ್ ಮಾಡುವಾಗ ಹೆಚ್ಚುಹೊತ್ತು ಕಷ್ಟ ಪಟ್ಟೆ. ಆದರೆ, ಕೊಹ್ಲಿಗೆ ಸ್ಟ್ರೈಕ್ ನೀಡಿದ್ದು ಖುಷಿ ತಂದಿದೆ. ಮಿಡಲ್​ನಲ್ಲಿ ನಾನು ಕೆಲವು ಹೊಡೆತಗಳನ್ನು ಹೊಡೆಯಲು ಪ್ರಾರಂಭಿಸಿದಾಗ ಲಯಕಂಡುಕೊಂಡೆ ಎಂಬುದು ಫಾಫ್ ಡುಪ್ಲೆಸಿಸ್ ಮಾತು.ಗೆದ್ದ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ, ನಂಬಲಾಗುತ್ತಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣ, ಕೊನೆಯ ಬಾಲ್​ನಲ್ಲಿ ಪಂದ್ಯವನ್ನು ಫಿನಿಶ್‌ ಮಾಡಲು ಸಾಧ್ಯವಾಗುವ ಏಕೈಕ ಸ್ಥಳ. ನಾವು ಆರಂಭದಲ್ಲಿ ಇದ್ದ ಸ್ಥಿತಿಯಿಂದ ಕೊನೆಯ ವರೆಗೆ ಬಂದು ಪಂದ್ಯವನ್ನು ಗೆದ್ದಿರಿವುದು ಅದ್ಭುತ ಎಂದು ಹೇಳಿದ್ದಾರೆ.ನಾವು ಗೆದ್ದು ಎರಡು ಅಂಕ ಪಡೆದೆವು ಎಂದರೆ ಅದಕ್ಕೆ ಲೋವರ್ ಆರ್ಡರ್ ಬ್ಯಾಟರ್​ಗಳು ಕಾರಣ. ಮಾರ್ಕಸ್ ಮತ್ತು ಪೂರನ್ ಶಕ್ತಿ ಏನು ಎಂಬುದು ನಮಗೆ ತಿಳಿದಿದೆ. ಆಯುಷ್ ಬದೋನಿ ಕೂಡ ಉತ್ತಮ ಬ್ಯಾಟರ್. ಕಳೆದ ಸೀಸನ್​ನಲ್ಲಿ 2-3 ಉತ್ತಮ ಇನ್ನಿಂಗ್ಸ್ ಆಡಿದ್ದಾರೆ - ಕೆಎಲ್ ರಾಹುಲ್.

source https://tv9kannada.com/photo-gallery/cricket-photos/faf-du-plessis-in-post-match-presentation-he-said-really-disappointed-in-rcb-vs-lsg-ipl-2023-match-vb-au48-553478.html

Leave a Reply

Your email address will not be published. Required fields are marked *