Entertainment: ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗ ಹೊಸ ಅಲೆಯನ್ನು ಎದುರಿಸುತ್ತಿದೆ. ಪ್ರೇಕ್ಷಕರು ಹೊಸ ಪರಿಕಲ್ಪನೆಗಳನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. ಚಲನಚಿತ್ರ ನಿರ್ಮಾಪಕರು ಚಲನಚಿತ್ರಗಳಲ್ಲಿ ಹೊಸ ವಿಷಯಗಳನ್ನು ಪ್ರಯತ್ನಿಸುತ್ತಿದ್ದಾರೆ.
ಕೆಜಿಎಫ್ 2, ಕಾಂತಾರ, ವಿಕ್ರಾಂತ್ ರೋಣ ಮತ್ತು 777 ಚಾರ್ಲಿಯಂತಹ ಚಲನಚಿತ್ರಗಳ ಪ್ಯಾನ್-ಇಂಡಿಯಾ ಯಶಸ್ಸನ್ನು ಕಂಡಿವೆ. ಸ್ಯಾಂಡಲ್‌ವುಡ್ ಉದ್ಯಮವು ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಗಳಿಸಿತು. ಸ್ಯಾಂಡಲ್‌ವುಡ್‌ನ ಹೈ-ಪ್ರೊಫೈಲ್ ಸೆಲೆಬ್ರಿಟಿಗಳು ಪ್ರತಿ ಚಿತ್ರಕ್ಕೂ ಉತ್ತಮ ಸಂಭಾವನೆ ಪಡೆಯುವುದರಲ್ಲಿ ಸಂದೇಹವಿಲ್ಲ. ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಕನ್ನಡ ಹೀರೋಗಳು ಇವರೇ ನೋಡಿ..
10. ಧ್ರುವ ಸರ್ಜಾ : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚಿನ ದಿನಗಳಲ್ಲಿ ಪೊಗರು ಚಿತ್ರದ ಮೂಲಕ ಹಿಟ್ ನೀಡಿದ್ದರು. ಮಾರ್ಟಿನ್, ಕೆಡಿ: ದಿ ಡೆವಿಲ್ ಎರಡೂ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಧ್ರುವ ಸರ್ಜಾ ಪ್ರತಿ ಸಿನಿಮಾಗೆ ಸುಮಾರು 3 – 5 ಕೋಟಿ ಸಂಭಾವನೆ ಪಡೆಯುತ್ತಾರಂತೆ.
9. ಗಣೇಶ್ : ಗೋಲ್ಡನ್ ಸ್ಟಾರ್ ಗಣೇಶ್ ಮುಂಗಾರು ಮಳೆ, ಚೆಲುವಿನ ಚಿತ್ತಾರ, ಗಾಳಿಪಟ, ಮುಗುಳು ನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಣೇಶ್ ಪ್ರಸ್ತುತ ದಿ ಸ್ಟೋರಿ ಆಫ್ ರಾಯಗಡ, ಬಾನದಾರಿಯಲ್ಲಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರು ಪ್ರತಿ ಚಿತ್ರಕ್ಕೆ ಸುಮಾರು 3 – 6 ಕೋಟಿ ಚಾರ್ಜ್ ಮಾಡುತ್ತಾರಂತೆ.
8. ಶ್ರೀಮುರಳಿ : ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಚಿತ್ರ ಉಗ್ರಂ ಸಿನಿಮಾದಿಂದ ಹಿಟ್ ಪಡೆದ ಶ್ರೀಮುರಳಿ, ಮಾಸ್ ಲುಕ್‌ಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸದ್ಯ ಬಗೀರಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರತಿ ಚಿತ್ರಕ್ಕೆ ಶ್ರೀಮುರಳಿ ಸುಮಾರು 4 – 6 ಕೋಟಿ ಸಂಭಾವನೆ ಪಡೆಯುತ್ತಾರಂತೆ.
7. ಶಿವರಾಜ್‌ಕುಮಾರ್ : ಶಿವಣ್ಣ ಕನ್ನಡ ವೀಕ್ಷಕರಲ್ಲಿ ಪ್ರಬಲವಾದ ಅಭಿಮಾನಿಗಳನ್ನು ಹೊಂದಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸಿನಿರಂಗದಲ್ಲಿದ್ದಾರೆ. ಅವರು 120 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರತಿ ಚಿತ್ರಕ್ಕೆ 6 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆಂದು ಹೇಳಲಾಗಿದೆ.
6. ರಕ್ಷಿತ್ ಶೆಟ್ಟಿ : ರಕ್ಷಿತ್ ಶೆಟ್ಟಿ ಕನ್ನಡ ಚಲನಚಿತ್ರೋದ್ಯಮದ ಯಶಸ್ವಿ ನಟ ಮತ್ತು ನಿರ್ಮಾಪಕ. ಕಿರಿಕ್ ಪಾರ್ಟಿ ಮತ್ತು ಉಳಿದವರು ಕಂಡಂತೆ ಸಿನಿಮಾಗಳ ಮೂಲಕ ಜನರ ಮನದಲ್ಲಿ ನೆಲೆಯೂರಿದರು. ಇತ್ತೀಚೆಗೆ ಬಂದ 777 ಚಾರ್ಲಿ ವಿಶ್ವಾದ್ಯಂತ ಹಿಟ್ ಆಯಿತು. ಸಪ್ತ ಸಾಗರದಾಚೆ ಎಲ್ಲೋ, ರಿಚರ್ಡ್ ಆಂಟನಿ ಸಿನಿಮಾಗಳಲ್ಲಿ ರಕ್ಷಿತ್ ಬ್ಯುಸಿ ಎನ್ನಲಾಗಿದೆ. ಪ್ರತಿ ಚಿತ್ರಕ್ಕೆ ಅಂದಾಜು 5 ರಿಂದ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
5. ರಿಷಬ್ ಶೆಟ್ಟಿ : ಕಳೆದ ವರ್ಷ ಕನ್ನಡದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ ಕಾಂತಾರ ಸಿನಿಮಾ ಮೂಲಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಭಾರಿ ಹಿಟ್ ಗಳಿಸಿದರು. ರಿಷಬ್ ತಮ್ಮ ಕೊನೆಯ ಚಿತ್ರದ ನಂತರ ಸಂಭಾವನೆಯನ್ನು ಹೆಚ್ಚಿಸಿದರು. ಈಗ ಸುಮಾರು 10-15 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
4. ಉಪೇಂದ್ರ : ರಿಯಲ್ ಸ್ಟಾರ್ ಉಪೇಂದ್ರ ಅವರು ಯಶಸ್ವಿ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಅವರು ಕನ್ನಡ ಪ್ರೇಕ್ಷಕರಲ್ಲಿ ಗಮನಾರ್ಹ ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 10 ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
3. ಕಿಚ್ಚ ಸುದೀಪ್ : ಕನ್ನಡ ಚಿತ್ರರಂಗದ ಬಾದ್‌ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ವಿಕ್ರಾಂತ್ ರೋಣ ಮತ್ತು ಕಬ್ಜಾ ಚಿತ್ರಗಳನ್ನು ಮಾಡಿದ್ದ ಸುದೀಪ್ 2023ರಲ್ಲಿ ಮೂರು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಪ್ರತಿ ಸಿನಿಮಾಗೆ ಸುಮಾರು 20 – 25 ಕೋಟಿ ಚಾರ್ಜ್ ಪಡೆಯುತ್ತಾರಂತೆ ಎನ್ನಲಾಗಿದೆ.
2. ದರ್ಶನ್ : ದರ್ಶನ್ ಅಭಿಮಾನಿಗಳು ನಟನನ್ನು ಡಿ ಬಾಸ್ ಎಂದೇ ಕರೆಯುತ್ತಾರೆ. ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಟಾಪ್ 2 ಸ್ಥಾನದಲ್ಲಿದ್ದಾರೆ ದರ್ಶನ್. ಪ್ರತಿ ಚಿತ್ರಕ್ಕೆ 22 – 26 ಕೋಟಿ ರೂ. ಚಾರ್ಜ್ ಮಾಡುತ್ತಾರಂತೆ.
1. ಯಶ್ : KGF ಫ್ರಾಂಚೈಸಿಯೊಂದಿಗೆ ರಾಕಿಂಗ್ ಸ್ಟಾರ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಖ್ಯಾತರಾದರು. ಈಗ ಇತರ ಕನ್ನಡ ನಾಯಕರಿಗೆ ಹೋಲಿಸಿದರೆ ಅತಿ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಕನ್ನಡ ಮತ್ತು ಇತರ ಭಾಷೆಗಳಲ್ಲಿ ಯಶ್ ಮಾರುಕಟ್ಟೆ ಭಾರಿ ಏರಿಕೆಯಾದ ನಂತರ ಪ್ರತಿ ಚಿತ್ರಕ್ಕೆ ಸುಮಾರು 50-100 ಕೋಟಿ ಶುಲ್ಕ ವಿಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ 2 ಬಳಿಕ ಯಶ್ ಇನ್ನೂ ಯಾವುದೇ ಚಲನಚಿತ್ರಗಳಿಗೆ ಸಹಿ ಹಾಕಿಲ್ಲ.