

ಭಾನುವಾರ, ಅಂದರೆ ಇಂದು ಐಪಿಎಲ್‌ನಲ್ಲಿ ಡಬಲ್ ಹೆಡರ್. ದಿನದ ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಕೊನೆಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ಇತ್ತ ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತ್ತು. ಆದರೆ ಮುಂಬೈಗೆ ಕೆಕೆಆರ್ ಸವಾಲು ಅಷ್ಟು ಸುಲಭವಲ್ಲ. ಕೆಕೆಆರ್ ಸತತ ಮೂರು ಪಂದ್ಯಗಳಲ್ಲಿ 200+ ರನ್ ಗಳಿಸಿದೆ, ರಿಂಕು ಸಿಂಗ್ ಉತ್ತಮ ಫಾರ್ಮ್‌ನಲ್ಲಿದ್ದಾರೆ, ನಾಯಕ ನಿತೀಶ್ ರಾಣಾ ಕಳೆದ ಎರಡು ಪಂದ್ಯಗಳಲ್ಲಿ ರನ್ ಗಳಿಸಿದ್ದಾರೆ. ರಸೆಲ್ ಈ ಸೀಸನ್ನಲ್ಲಿ ಮೊದಲ ಬಾರಿಗೆ ಸನ್‌ರೈಸರ್ಸ್ ವಿರುದ್ಧ 3 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಎಲ್ಲ ವಿಭಾಗದಲ್ಲೂ ನ್ಯೂನತೆ ಹೊಂದಿರುವ ಮುಂಬೈ ಹೇಗೆ ಕೆಕೆಆರ್ ಸವಾಲನ್ನು ಎದುರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
Views: 0