ಬೆಂಗಳೂರು: ಬಿಜೆಪಿಯಲ್ಲಿ ಈ ಬಾರಿ ಎಲ್ಲಾ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ಹಳಬರಿಗೆ ಕೊಕ್ ನೀಡಲಾಗಿದೆ. ಎರಡನೇ ಪಟ್ಟಿ ರಿಲೀಸ್ ಆದಾಗ ಸಾಕಷ್ಟು ನಾಯಜರು ಬಂಡಾಯವೆದ್ದಿದ್ದಾರೆ. ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ. ಮೂರನೇ ಪಟ್ಟಿಯಲ್ಲಿ 10 ಕ್ಷೇತ್ರಗಳನ್ನು ಉಳಿಸಿಕೊಳ್ಳಲಾಗಿತ್ತು. ಇದರ ಮೇಲೂ ಹಲವರಿಗೆ ನಿರೀಕ್ಷೆ ಇತ್ತು.
ಆದರೆ ಅದು ಹಲವರ ಪಾಲಿಗೆ ಹುಸಿಯಾಗಿದೆ. ಅದರಲ್ಲೂ ಶಾಸಕ ಎ ರಾಮದಾಸ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಗೋವಿಂದ ಕಾರಜೋಳ ಪುತ್ರನಿಗೂ ಟಿಕೆಟ್ ಮಿಸ್ ಆಗಿದೆ. ಎಲ್ಲರ ಚಿತ್ತ ಇದ್ದದ್ದು ಜಗದೀಶ್ ಶೆಟ್ಟರ್ ಪ್ರತಿನಿಧಿಸಬೇಕಿದ್ದ ಕ್ಷೇತ್ರದ ಮೇಲೆ. ಸದ್ಯ ಹುಬ್ಬಳ್ಳಿ – ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿಸುತ್ತೆ ಎಂಬುದರ ಮೇಲೆ. ಮೂರನೇ ಪಟ್ಟಿಯಲ್ಲಿ ಅದು ಕೂಡ ರಿಲೀಸ್ ಆಗಿದೆ.
ಹುಬ್ಬಳ್ಳಿ – ಧಾರವಾಡ ಕೇಂದ್ರ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ, ಹೆಬ್ಬಾಳ – ಕಟ್ಟಾ ಜಗದೀಶ್, ಮಹದೇವರಪುರ – ಮಂಜುಳಾ ಲಿಂಬಾವಳಿ, ಸೇಡಂ – ರಾಜಕುಮಾರ ಪಾಟೀಲ್, ಗೋವಿಂದರಾಜನಗರ – ಉಮೇಶ್ ಶೆಟ್ಟಿ, ಕೃಷ್ಣರಾಜನಗರ – ಶ್ರೀವತ್ಸ, ಕೊಪ್ಪಳ – ಮಂಜುಳಾ ಅಮರೇಶ್, ಹಗರಿಬೊಮ್ಮನಹಳ್ಳಿ – ಬಿ ರಾಮಣ್ಣ ಅವರನ್ನು ಘೋಷಣೆ ಮಾಡಿದ್ದಾರೆ.
The post ಬಿಜೆಪಿ 3ನೇ ಪಟ್ಟಿಯೂ ಅನೌನ್ಸ್: ರಾಮದಾಸ್ ಗೂ ಮಿಸ್.. ಶೆಟ್ಟರ್ ಕ್ಷೇತ್ರಕ್ಕೆ ಬಂದ್ರು ಮಹೇಶ್..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/gocK8Az
via IFTTT