ಬೆಂಗಳೂರಲ್ಲಿ ಒಟ್ಟಿಗೆ ಕುಳಿತು ಐಪಿಎಲ್ ಮ್ಯಾಚ್ ನೋಡಿದ ಶಿವಣ್ಣ-ಧನುಷ್​; ಇಲ್ಲಿವೆ ಫೋಟೋಸ್

ಏಪ್ರಿಲ್ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಪಂದ್ಯ ನಡೆಯಿತು. ರೋಚಕ ಪಂದ್ಯದಲ್ಲಿ ಆರ್​ಸಿಬಿ ಹೋರಾಡಿ ಸೋಲೊಪ್ಪಿಕೊಂಡಿತು. ಈ ಮ್ಯಾಚ್ ನೋಡಲು ಶಿವಣ್ಣ ತೆರಳಿದ್ದರು.ವಿಶೇಷ ಎಂದರೆ ಶಿವಣ್ಣ ಮಾತ್ರ ಅಲ್ಲದೆ ತಮಿಳು ನಟ ಧನುಷ್ ಕೂಡ ಇದ್ದರು. ಧನುಷ್ ಸಿಎಸ್​ಕೆ ಬೆಂಬಲಿಸಿದರೆ, ಶಿವಣ್ಣ ಆರ್​ಸಿಬಿ ಪರ ಇದ್ದರು.ಶಿವರಾಜ್​ಕುಮಾರ್ ಅವರು ಆರ್​ಸಿಬಿ ಜರ್ಸಿ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಅಭಿಮಾನಿಗಳ ಪೇಜ್​ನಲ್ಲಿ ವೈರಲ್ ಆಗಿದೆ.ಶಿವರಾಜ್​ಕುಮಾರ್ ಅವರ ಎನರ್ಜಿಗೆ ಬೇರೊಬ್ಬರು ಸಾಟಿ ಇಲ್ಲ. ಆರ್​ಸಿಬಿ ಆಟಗಾರರು ಸಿಕ್ಸ್ ಹೊಡೆದಾಗೆಲ್ಲ ಶಿಳ್ಳೆ, ಚಪ್ಪಾಳೆ ಹಾಕಿ ಅವರು ಸಂಭ್ರಮಿಸುತ್ತಿದ್ದರು.ಧನುಷ್ ಹಾಗೂ ಶಿವರಾಜ್​ಕುಮಾರ್ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ಗಾಗಿ ಧನುಷ್ ಬೆಂಗಳೂರಿಗೆ ಬಂದಿದ್ದರೇ ಎನ್ನುವ ಪ್ರಶ್ನೆ ಮೂಡಿದೆ.

source https://tv9kannada.com/photo-gallery/shivarajkumar-and-dhanush-watch-rcb-vs-csk-match-in-bengaluru-stadium-rmd-au34-558226.html

Leave a Reply

Your email address will not be published. Required fields are marked *