PUC RESULT : ರಾಜ್ಯಕ್ಕೆ 6 ನೇ ರ‍್ಯಾಂಕ್ ತಂದುಕೊಟ್ಟ ಚಿತ್ರದುರ್ಗದ ವಿದ್ಯಾರ್ಥಿ ಯಶಸ್ ರೆಡ್ಡಿ

ಚಿತ್ರದುರ್ಗ, (ಏ.21) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ಡಾ. ಎಂ. ಹೆಚ್. ರಘುನಾಥ ರೆಡ್ಡಿಯವರ ಮಗ ಎಂ.ಆರ್.ಯಶಸ್ ರೆಡ್ಡಿ ಯವರು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಆರನೇ ರ‌್ಯಾಂಕ್  ಪಡೆದು, ಚಿತ್ರದುರ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿಯಾಗಿರುವ ಎಂ.ಆರ್.ಯಶಸ್ ರೆಡ್ಡಿ ವಿಜ್ಞಾನ ವಿಭಾಗದಲ್ಲಿ
ಇಂಗ್ಲೀಷ್ – 95
ಸಂಸ್ಕೃತ – 100
ಭೌತಶಾಸ್ತ್ರ – 98
ರಸಾಯನ ಶಾಸ್ತ್ರ – 98 ,
ಗಣಿತ – 100,
ಜೀವಶಾಸ್ತ್ರ – 100
ಒಟ್ಟು 600 ಅಂಕಗಳಿಗೆ 591 ಅಂಕಣಗಳನ್ನು  ಪಡೆದು ರಾಜ್ಯಕ್ಕೆ
ಆರನೇ ರ‌್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೂ ಕೀರ್ತಿ ತಂದಿದ್ದಾರೆ.

ಇವರು ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೂ ನಗರದ ಡಾನ್ ಬಾಸ್ಕೋ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ.
ಇವರ ತಂದೆ ಡಾ. ಎಂ. ಹೆಚ್. ರಘುನಾಥ್ ರವರು ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ ಮಕ್ಕಳ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಹೆಚ್.ಓ.ಡಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಕವಿತಾ ಅವರು ಗೃಹಿಣಿ ಆಗಿದ್ದಾರೆ.

The post PUC RESULT : ರಾಜ್ಯಕ್ಕೆ 6 ನೇ ರ‍್ಯಾಂಕ್ ತಂದುಕೊಟ್ಟ ಚಿತ್ರದುರ್ಗದ ವಿದ್ಯಾರ್ಥಿ ಯಶಸ್ ರೆಡ್ಡಿ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/bxp04jZ
via IFTTT

Views: 0

Leave a Reply

Your email address will not be published. Required fields are marked *