ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಚಿತ್ರದುರ್ಗ ಜಿಲ್ಲೆಗೆ ಶೇ.69.5 ಫಲಿತಾಂಶ

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಏ.21) : 2022-23ನೇ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.

ಜಿಲ್ಲೆಗೆ ಶೇ.69.5 ಫಲಿತಾಂಶ ಲಭಿಸಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಗೆ ಒಟ್ಟು 12402 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 8620 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 4130 ವಿದ್ಯಾರ್ಥಿಗಳಲ್ಲಿ 2269 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು ಶೇ.54.94 ಫಲಿತಾಂಶ ದೊರೆತಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 3492 ವಿದ್ಯಾರ್ಥಿಗಳಲ್ಲಿ 2603 ವಿದ್ಯಾರ್ಥಿಗಳು ಉತ್ತೀರ್ಣಗೊಂಡದ್ದು ಶೇ.74.54 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 4780 ವಿದ್ಯಾರ್ಥಿಗಳಲ್ಲಿ 3748 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು ಶೇ.78.41 ಫಲಿತಾಂಶ ಲಭಿಸಿದೆ.

ರಾಜ್ಯದ ಜಿಲ್ಲೆಗಳ ಪೈಕಿ ಫಲಿತಾಂಶವಾರು ಚಿತ್ರದುರ್ಗ ಜಿಲ್ಲೆ 28ನೇ ಸ್ಥಾನದಲ್ಲಿದೆ ಎಂದು ಪಿಯು ಉಪನಿರ್ದೇಶಕ ಎನ್.ರಾಜು ಪಕ್ರಟಣೆಯಲ್ಲಿ ತಿಳಿಸಿದ್ದಾರೆ.

The post ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಚಿತ್ರದುರ್ಗ ಜಿಲ್ಲೆಗೆ ಶೇ.69.5 ಫಲಿತಾಂಶ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/GU9XF5a
via IFTTT

Views: 0

Leave a Reply

Your email address will not be published. Required fields are marked *